Connect with us

    SSLC ಫಲಿತಾಂಶ ಸುಧಾರಣೆಗೆ ಸಂವಾದ | ಶಾಸಕ ಡಾ.ಚಂದ್ರಪ್ಪ ಭಾಗೀ

    ಹೊಳಲ್ಕೆರೆ

    SSLC ಫಲಿತಾಂಶ ಸುಧಾರಣೆಗೆ ಸಂವಾದ | ಶಾಸಕ ಡಾ.ಚಂದ್ರಪ್ಪ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 13 FEBRUARY 2025

    ಹೊಳಲ್ಕೆರೆ: ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಸಂವಿಧಾನ ಸೌಧದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮವನ್ನು ಶಾಸಕ ಎಂ.ಚಂದ್ರಪ್ಪ ಉದ್ಘಾಟಿಸಿದರು.

    Also Read: ಚಿತ್ರದುರ್ಗದಲ್ಲಿ SBI ಪ್ರಾದೇಶಿಕ ಕಚೇರಿ | ಸಂಸದ ಗೋವಿಂದ ಕಾರಜೋಳ ಪತ್ರ

    ನಂತರ ಮಾತನಾಡಿದ ಶಾಸಕರು, ಸಂವಾದದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಪರೀಕ್ಷೆ ಭಯ ಹೋಗಲಾಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.

    ಸಿನಿಮಾ, ನಾಟಕ, ಟಿ.ವಿ.ಧಾರವಾಹಿಗಳನ್ನು ನೋಡಿದ್ದು, ಹೇಗೆ ನಿಮ್ಮ ನೆನಪಿನಲ್ಲಿರುತ್ತದೋ ಅದೇ ರೀತಿ ಪರೀಕ್ಷೆಗಾಗಿ ಪಠ್ಯಪುಸ್ತಕಗಳನ್ನು ಓದಿದ ನೆನಪು ಮನದಲ್ಲಿ ಉಳಿಯಬೇಕಾದರೆ ಏಕಾಗ್ರತೆಯಿರಬೇಕು. ಶಿಕ್ಷಣಕ್ಕಾಗಿ ಸರ್ಕಾರ ಈಗ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಿದೆ.

     ನಮ್ಮ ಕಾಲದಲ್ಲಿ ಓದುವಾಗ ಸಂವಾದ ಎನ್ನುವುದೆ ಇರಲಿಲ್ಲ. ಹತ್ತನೆ ತರಗತಿ ನಿಮ್ಮ ಜೀವನದ ಪ್ರಮುಖ ತಿರುವು. ಮುಂದೆ ವೈದ್ಯರು, ಇಂಜಿನಿಯರ್, ದೊಡ್ಡ ದೊಡ್ಡ ಅಧಿಕಾರಿಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಈಗಿನಿಂದಲೆ ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

    Also Read: ಸೈಬರ್ ವಂಚನೆಗೆ ದೇಶದ ಜನ ಕಳೆದುಕೊಂಡ ಹಣ ಕೇಳಿದ್ರೆ ಶಾಕ್ ಆಗ್ತಿರಿ !

    ಸಂವಾದ ಎನ್ನುವುದು ಜ್ಞಾನ ಹೆಚ್ಚಿಸಿಕೊಳ್ಳಲು ಅತ್ಯುತ್ತಮವಾದ ಅವಕಾಶ. ನುರಿತ ಶಿಕ್ಷಕರುಗಳು ಬೋಧಿಸುವ ಪಾಠವನ್ನು ಗಮನ ಕೊಟ್ಟು ಕೇಳಿದಾಗ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಹತ್ತನೆ ತರಗತಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಪ್ರತಿ ವಿದ್ಯಾರ್ಥಿಗೆ ತಲಾ ರೂ.50 ಸಾವಿರಗಳ ಬಹುಮಾನ ನೀಡುವುದಾಗಿ ಶಾಸಕ ಡಾ.ಎಂ.ಚoದ್ರಪ್ಪ ಘೋಷಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಿಜಯಸಿಂಹ ಕಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕೇಶ್, ವೆಂಕಟೇಶ್, ಮೃತ್ಯುಂಜಯ, ಚಂದ್ರಣ್ಣ, ಗೋವಿಂದಪ್ಪ, ಪ್ರಶಾಂತ್, ಮಹಾಲಿಂಗಪ್ಪ, ರವಿಕುಮಾರ್, ಮೋಹನ್, ಸುರೇಂದ್ರನಾಥ್, ವಿಜಯಕುಮಾರ್, ಸೋಮಶೇಖರ್, ಬಸವರಾಜಪ್ಪ ಹಾಗೂ ವಿವಿಧ ಶಾಲೆಗಳ ಶಿಕ್ಷಕರುಗಳು, ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top