Connect with us

    Kannada Novel: 16. ಬಡಗಿ ಕಂಡ ಗೌನಳ್ಳಿ

    Habbida Malemadhyadolage

    ಸಂಡೆ ಸ್ಪಷಲ್

    Kannada Novel: 16. ಬಡಗಿ ಕಂಡ ಗೌನಳ್ಳಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 JANUARY 2024

    ಯಜಮಾನಪ್ಪರ ಹಜಾರದಲ್ಲಿ ಮಲಗಿದ್ದ ಹಿರೇ ಬಡಗಿ, ಗುಬ್ಬಿಯ ಚೆಂಬಸಣ್ಣ ಮತ್ತು ಆತನ ಮೂರುಜನ ಸಂಗಡಿಗರಿಗೆ ಎಚ್ಚರಾದಾಗ ಗೌನಳ್ಳಿಯ ನಿವಾಸಿಗಳೆಲ್ಲಾ ಎದ್ದು ಬೆಳಗಿನ ಕರ್ತವ್ಯಗಳಲ್ಲಿ ನಿರತರಾಗಿದ್ದರು. ಅವರನ್ನು ಗುರುಸಿದ್ದಪ್ಪ ಮಾರಿಗುಡಿ ಹಳ್ಳದ ಕಡೆಗೆ ಕರೆದೊಯ್ಯುತ್ತಿರುವಾಗ ಅಡ್ಡೆಯಲ್ಲಿ ನೀರು ತರುತ್ತಿರುವವರು, ಬೆಳಗೀಲೆ ಎದ್ದು ಹೊಲಕ್ಕೆ ಹೋಗಿ ಹಸೀ ಹುಲ್ಲು ಕಿತ್ತು ಹೊರೆಗಟ್ಟಿ ಹೊತ್ತು ಊರಕಡೆ ಬರುತ್ತಿರುವವರು, ಅವರಲ್ಲಿ ಕೆಲವು ಮಹಿಳೆಯರು ಇತ್ಯಾದಿ ಇದಿರಾಗಿದ್ದರು.

    ಹಿರೇ ಬಡಗಿ ಮತ್ತು ಚೆಂಬಸಣ್ಣ ಬೆಳಗಿನ ಕರ್ತವ್ಯಗಳಲ್ಲಿ ನಿರತರಾಗಿದ್ದ ಗೌನಳ್ಳಿಗರನ್ನು ನೋಡುತ್ತಾ “ನೋಡಪ್ಪಾ ಏಟು ಮುತುವರ್ಜಿಯಿಂದ ಕೆಲ್ಸಾ ಮಾಡ್ತಿದಾರೆ. ಇಂಥಾ ಕಡೆ ಬಡತನ ಯಾಕೆ ಬರುತ್ತೆ” ಅಂದುಕೊಂಡಿದ್ದರು. ಹಳ್ಳದಲ್ಲಿ ಮಡಿವಾಳರು ಬಟ್ಟೆ ಒಗೆಯುತ್ತಿದ್ದರು. “ಬೆಳಿಗ್ಗೇನೆ ಇವು ಬಟ್ಟೆ ಒಗೀತಿದಾರೆ ಅಂದ್ರೆ ಆಮೇಲೆ ಇವು ಬ್ಯಾರೆ ಕೆಲಸಕ್ಕೋಗಬೌದು ಅಂತ ಕಾಣುತ್ತೆ”. ಚೆಂಬಸಣ್ಣ ಊಹಿಸಿ ಪ್ರತಿಕ್ರಿಯಿಸಿದ್ದ. “ಇದ್ರೂ ಇರಬೌದು” ಹಿರೇ ಬಡಗಿಯವರು ದನಿಗೂಡಿಸಿದ್ದರು.

    ಅವರ ಜತೆಯಲ್ಲಿದ್ದ ಸಿದ್ದಿಂಗಪ್ಪ “ಉಂಬೊತ್ತಿಗೆ ಬಟ್ಟೆ ಒಗದು ಯಾರನಾ ಹೊಲದ ಕೆಲಸಕ್ಕೆ ಕೂಲಿ ಹೋಗ್ತಾರೆ ಇವರೆಲ್ಲಾ, ವಿವರಣೆ ನೀಡಿದ್ದ. ತಮ್ಮ ಬೆಳಗಿನ ಕರಗಳನ್ನು ಮುಗಿಸಿಕೊಂಡು ಹಳ್ಳದ ನೀರಿನಲ್ಲಿ ಮುಖ ಕೈಕಾಲು ತೊಳೆದುಕೊಂಡು ಯಜಮಾನಪ್ಪರ ಮನೆ ತಲುಪುವ ಸಮಯಕ್ಕೆ ಗೌಡ್ರು ಮತ್ತು ಗೊಂಚಿಕಾರು ಯಜಮ್ ಯಜಮಾನಪ್ಪರಿಗೆ ಹೇಳಿದ್ದೀವಿ ಬನ್ನಿ ನಮ್ಮನೆಗೋಗಾನ. ನೀವು ಅಲ್ಲಿ ಮೈ ತೊಳಕಂಡು ಊಟ ಮಾಡಿಕೆಂಡು ಕಮರ ನೋಡೀರಂತೆ” ಎಂದು ಆಹ್ವಾನಿಸಿದರು. ಸಿದ್ದಣ್ಣನೂ ಅಲ್ಲಿಗೆ ಆಗಮಿಸಿ ಇದೇ ವಿಚಾರವನ್ನು ತಿಳಿಸಿದ್ದ. ಇವರ ಆಹ್ವಾನವನ್ನು ತಿರಸ್ಕರಿಸಲಾಗದೆ ಗೌಡರ ಮನೆಗೆ ನಡೆದು ಎಲ್ಲರೂ ಅಲ್ಲಿ ಸ್ನಾನ ಪೂಜಾದಿಗಳನ್ನು ಮಾಡಿ ಗರಿಗರಿ ಸಜ್ಜೆರೊಟ್ಟೆ, ಪಡವಲಕಾಯಿ ಪಲ್ಯ, ಮೇಲೊಂದಿಷ್ಟು ಅನ್ನ ಮೊಸರು ಸವಿದು ಹಜಾರಕ್ಕೆ ಬಂದರೆ, ಎಂಟು ಹತ್ತು ಜನ ಎರಡು ಗಾಡಿ ಸಿದ್ಧಪಡಿಸಿ ಇವರನ್ನು ನಿರೀಕ್ಷಿಸುತ್ತಿದ್ದರು.

    ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

    ಗೌಡ್ರು, ಗೊಂಚಕಾರು, ಸಿದ್ದಣ್ಣ ಮತ್ತೆ ಕೆಲವರು ಮತ್ತು ಗುಬ್ಬಿಯ ಐದು ಜನ ಎರಡು ಗಾಡಿಗಳಲ್ಲಿ ಹತ್ತಿ ಕುಳಿತರು. ಹಾದಿಯಲ್ಲದ ಹಾದಿಯಲ್ಲಿ ಗಿಡ ಮರಗಳ ನಡುವೆ ಗಾಡಿಗಳು ನೇರವಾಗಿ ಪಡುವಲ ಗುಡ್ಡದ ಬಳಿಗೆ ಹೋದವು.

    ಎಮ್ಮೆ ಕಣಿವೆ ಎಂದು ಕರೆಯುತ್ತಿರುವ ಕಣಿವೆಯಲ್ಲದ ಗುಡ್ಡದ ಸಮಾಪ ಗಾಡಿಗಳನ್ನು ಒಯ್ದು ಅಲ್ಲಿ ನಿಲ್ಲಿಸಿ ಎಲ್ಲರೂ ಇಳಿದರು. ಹಿರೇ ಬಡಗಿಯವರು ಮತ್ತು ಚೆಂಬಸಣ್ಣನ ತಂಡವನ್ನೂ ಇಳಿಸಿ ಎರಡು ಗುಡ್ಡಗಳ ಇಳುಕಲಿನಲ್ಲಿ ಹತ್ತಲು ಸುರು ಮಾಡಿದರು. ಗೌನಳ್ಳಿಯವರಿಗೆ ಈ ರೀತಿ ಗುಡ್ಡ ಹತ್ತುವುದು ರೂಢಿ ಇತ್ತು. ಅವರೆಲ್ಲಾ ನಿಧಾನವಾಗಿ ಹತ್ತುತ್ತಿದ್ದರೆ ಬಡಗಿಯವರು ಮತ್ತು ಚೆಂಬಸಣ್ಣನ ತಂಡ ಹತ್ತಲು ಏದುಸಿರು ಬಿಡುತ್ತಿದ್ದರು. “ಸುಧಾರಿಸಿಕೊಳ್ಳಿ, ನಿಧಾನಕ್ಕೆ ಹತ್ತಿರಿ” ಮುಂತಾದ ಸಾಂತ್ವನದ ನುಡಿಗಳಿಂದ ಉತ್ತೇಜಿತರಾಗಿ ಇವರೆಲ್ಲಾ ನಿಧಾನಕ್ಕೆ ಹತ್ತುವುದು ಹತ್ತಿ ಬಂದ ಇಳುಕಲು ಮತ್ತು ಮುಂದೆ ಹತ್ತಬೇಕಾದ ದೂರವನ್ನು ನೋಡುತ್ತಾ ಮೊಳಕಾಲ ಮೇಲೆ ಭಾರ ಹಾಕುತ್ತಾ ಹತ್ತೇಬಿಟ್ಟಿದ್ದರು.

    ಮುಂದೆ ಹತ್ತಿದವರು ರಭಸವಾಗಿ ಗುಡ್ಡ ಏರಿ ಬರುತ್ತಿದ್ದ ಗಾಳಿಗೆ ಓಲಾಡುತ್ತಿದ್ದರೆ, ಹಿರೇ ಬಡಗಿ ಮತ್ತು ಗುಬ್ಬಿಯ ಮಂದಿ ಹಿಂದೆ ತಳ್ಳಲ್ಪಟ್ಟು ಆಯತಪ್ಪಿ ಇಳುಕಲಿಗೆ ಬೀಳುವವರಿದ್ದರು. ಪಕ್ಕದಲ್ಲಿದ್ದವರು ಇವರನ್ನು ಹಿಡಿದುಕೊಂಡು “ಗಟ್ಟಿಯಾಗಿ ನಿಂತುಕೊಳ್ಳಿ” ಎಂದು ಸೂಚಿಸುತ್ತಿದ್ದರು.
    ಹಿರೇ ಬಡಗಿಯವರು ಗುಡ್ಡದ ಹಿಂದಿನ ವಿಶಾಲ ಅರಣ್ಯವನ್ನು ನೋಡುತ್ತದೆ ಹತ್ತಿ ಬಂದಿದ್ದು ಸಾರ್ಥಕವಾದಂತೆ ಭಾಸವಾಗಿತ್ತು. ವಿವಿಧ ಜಾತಿಯ ಪಕ್ಷ ಮರಗಿಡಗಳು ಗಾಳಿಯಲ್ಲಿ ರೊಯ್ಯನೆ ಸದ್ದು ಮಾಡುತ್ತಿದ್ದವು. ಗುಡ್ಡದ ಇಳಿಜಾರನ್ನು ಗಮನಿಸಿದರೆ ತೆರೆತೆರೆಯಾಗಿ ಹಬ್ಬಿದ್ದ ಬಾದೆ ಹುಲ್ಲು ರಭಸದಿಂದ ಬೀಸುವ ಗಾಳಿಗೆ ಗುಡ್ಡಕ್ಕೆ ಹೊದಿಕೆಯಂತೆ ಬಾಗಿ ಮಲಗಿತ್ತು.

    ಸಾವಿರಾರು ಎಕರೆ ಪ್ರದೇಶದ ಕಾಡಿಗೆ ಪಡುವಲಕ್ಕೆ ನೀರುಗುಡ್ಡ ಸಾಲಿನ ರಕ್ಷಣೆ ಇದ್ದರೆ, ಬಡಗಣಕ್ಕೆ ಹಾಲುಗುಡ್ಡದ ಸಾಲು, ಇದರ ಮೂಡಲಿಗೆ ಬಡೆತ್ತಿನ ಕಣಿವೆ ಇತ್ತು. ಕಾಡಿನ ಮೂಡಲ ಗಡಿಯಾಗಿ ಎತ್ತರದ ಗಾಳಿ ಕೊಲ್ಲದ ಗುಡ್ಡ, ಎಮ್ಮೆ ತಿರುಗದ ನೆತ್ತಿ, ಭೂತನ ಕಣಿವೆ, ಎಮ್ಮೆ ಕಳಿವೆ. ಗೊಲ್ಲ ಗುಡ್ಡದ ಸಾಲು ಸ್ವಾಭಾವಿಕ ರಕ್ಷಣೆ ಒದಗಿಸಿದ್ದವು. ಇದನ್ನೆಲ್ಲಾ ಗೌಡ್ರು, ಗೊಂಚಿಕಾರರೂ ಮತ್ತಿತರರು ಹಿರೇ ಬಡಗಿಯವರಿಗೆ ಮತ್ತು ಇತರೆ ಗುಬ್ಬಿಯ ಮಂದಿಗೆ ವಿವರಿಸಿದ್ದರು.

    ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

    ಇದೇ ಎಮ್ಮೆ ಕಣಿವೆಯನ್ನು ಹತ್ತಿ ನಮ್ಮೂರ ಎತ್ತು ಆಕಳು ಮುಂತಾದುವು ಕೆಳಗಿನ ಕಮರವೆಂದು ಕರೆಯುವ ಅಡವಿಯಲ್ಲಿ ಹುಲ್ಲು ಮೇಯುತ್ತವೆ ಎಂದು ಕೂಡಾ ತಿಳಿಸಿದ್ದರು. ಹಿರೇ ಬಡಗಿಯವರು ತಾವು ಕುಳಿತಿದ್ದ ಜಾಗದಿಂದ ಎದ್ದು ನಾಲ್ಕು ಹೆಜ್ಜೆ ಗುಡ್ಡ ಇಳಿಯಲು ಯತ್ನಿಸಿ ಗಾಳಿ ತಳ್ಳಿದ್ದರಿಂದ ಅಲ್ಲಿಯೇ ಕುಸಿದು ಕುಳಿತರು. “ಇಷ್ಟು ರಭಸವಾಗಿ ಬೀಸುವ ಗಾಳಿಯ ಅನುಭವವೇ ನನಗಾಗಿಲ್ಲ” ಎಂದು ಒಪ್ಪಿಕೊಂಡ ಅವರು “ಇಂಥಾ ಕಾಡಿನ ಅಂಚಿನಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ನೀವೆಲ್ಲಾ ಹೆಂಗೆ ಬದುಕಿದ್ದೀರಿ, ಅದೇ ಆಶ್ಚಯ್ಯ” ಎಂದರು.

    ಚೆಂಬಸಣ್ಣನ ತಂಡಕ್ಕೆ ಈ ಭೇಟಿ ಮರೆಯಲಾಗದ ಅನುಭವ ನೀಡಿತ್ತು. ಗುಡ್ಡ ಇಳಿದು ಕಾಡೊಳಗೆ ಸ್ವಲ್ಪ ತಿರುಗಾಡುವ ಉಮೇದು ಕಾಣಿಸಿಕೊಂಡಿತ್ತು. ಸಂಜೆಗೆ ಊರಿಗೆ ಹೊರಡಬೇಕಲ್ಲ ಎಂದು ಸುಮ್ಮನಾಗಿದ್ದರು. ಹಿರೇ ಬಡಗಿಯವರಿಗೂ ಈ ಆಸೆ ತಲೆದೋರಿತ್ತು. “ಗುಡ್ಡ ಇಳಿಯುವುದು ಒಂದು ಸಾಹಸವಾದರೆ ಮತ್ತೆ ಏರಬೇಕಲ್ಲ, ಇಷ್ಟೇ ಸಾಕು” ಅಂದುಕೊಂಡಿದ್ದರು ಅವರು.

    “ನಾವೆಲ್ಲಾರೂ ಹುಡುಗರಾಗಿದ್ದಾಗ ಈ ಕಮರದಾಗೆ ಎತ್ತು, ದನಕರ ಮೇಯ್ದಿದ್ದೀವಿ. ಆಗೋ ನೋಡಿ ದೂರದಾಗೆ ಗುಂಪಾಗಿ ಮರಗಳಿರೋ ತಾವ ‘ಕೋಣನ ಗುಂಡಿ’ ಅಂಬೋ ಒಂದು ದೊಡ್ಡ ಮಡುವು ಐತೆ, ದನಕರುಗನ್ನೆಲ್ಲಾ ಅಲ್ಲಿಗೆ ಹೊಡಕಂಡೋಗಿ ನೀರು ಕುಡಿಸ್‌ತೀವಿ, ಅದರ ಆಸುಪಾಸಿಗಾಗಿ ಹುಲಿ, ಚಿರತೆ ಕಾಯುತಿದ್ದಾವೆ. ಸಿಕ್ಕಾಪಟ್ಟಿ ಗಲಾಟೆ ಮಾಡಿ ಪೊದೆಗಳ ಮ್ಯಾಲೆ ಕಲ್ಲು ಬೀಸಿ ದನಕರುಗಳ ನೀರು ಕುಡಿಸಿ ತಡಮಾಡದಂಗೆ ಹೊಡಕಂಡು ಈ ಗುಡ್ಡತ್ತಾವ ಬರಿದ್ದಿ”, ಗೌಡ್ರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

    ತಣ್ಣಗೆ ಬೀಸುತ್ತಿದ್ದ ಗಾಳಿಯಿಂದ ಎಲ್ಲರ ಆಯಾಸ ಪರಿಹಾರವಾಗಿದ್ದವು. ಹೊತ್ತು ಮೇಲೆ ಬರುತ್ತಿತ್ತು. ಚೆಂಬಸಣ್ಣ ಮತ್ತು ಅವನ ಸಂಗಡಿಗರು “ಹೊರಡೋಣ” ಎಂದು ಕಣ್ಣಲ್ಲೇ ತೀಮಾನಿಸಿದ್ದರು. ಹಿರೇ ಬಡಗಿಯವರು ಕಣ್ಣು ಮುಚ್ಚಿಕೊಂಡು ಹಸಿರು ಕಾನನದಲ್ಲಿ ವಿಹರಿಸುತ್ತಿದ್ದವರು ಕಣ್ಣ ತೆರೆದು ‘ಇನ್ನು ಹೊರಡಬೌದು’ ಎಂಬ ಸೂಚನೆ ನೀಡಿದ್ದರು. ಕೂಡಲೇ ಎಲ್ಲರೂ ಎದ್ದು ಇಳುಕಲು ಇಳಿಯಲು ಸುರು ಮಾಡಿದ್ದರು. ಇಳುಕಲ ತುಂಬಾ ಬೆಳೆದಿದ್ದ ಗಿಡಮರಗಳ ಬೊಡ್ಡೆಗಳನ್ನು ಆಸರೆ ಮಾಡಿಕೊಂಡು ಇಳಿದು ಗಾಡಿಗಳಿದ್ದ ಜಾಗ ತಲುಪಿದ್ದರು. ಕೂಡಲೇ ಅಲ್ಲಿಂದ ಹೊರಟು ಗೌಡ್ರ ಮನೆಗೆ ಆಗಮಿಸಿದರು.

    ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

    ಅಲ್ಲಿ ಯಜಮಾನಪ್ಪರು ಇವರನ್ನು ಬರಮಾಡಿಕೊಂಡು “ಇಲ್ಲೇ ಊಟ ಮಾಡನ. ಗೌಡ್ರ ಮನಿಯಾಗೆ ಅಡಿಗೆ ಮಾಡಿದಾರೆ” ಅನ್ನುತ್ತಾ ಹಜಾರಕ್ಕೆ ಬಂದರು, ಹಿಂದೆಯೇ ಆಗಮಿಸಿದ ಗೌಡರು “ಅಣ್ಣೂರೆ ಬರಿ ಎಲ್ಲಾ ಮುಖ ಕೈಕಾಲು ತೊಳೀರಿ ಊಟ ಮಾಡನ” ಎಂದು ಎಲ್ಲರನ್ನೂ ಆಹ್ವಾನಿಸಿದರು.

    ತಡಮಾಡದೆ ಎಲ್ಲರೂ ಮುಖ ಕೈಕಾಲು ತೊಳೆದುಕೊಂಡು ಪಡಸಾಲೆಯಲ್ಲಿ ಹಾಸಿದ್ದ ಕಂಬಳಿ ಪಂಕ್ತಿಯ ಮೇಲೆ ಕುಳಿತರು. ಹಸಿ ಮುತ್ತುಗದ ಎಲೆಯ ಇಸ್ತ್ರಗಳನ್ನು ಎಲ್ಲರ ಮುಂದೆ ಇರಿಸಿ ಹಣಿದ ಗೋಧಿ ಹುಗ್ಗಿ ಬಿಸಿಹಾಲು ತುಪ್ಪವನ್ನು ಬಡಿಸಲಾಯಿತು. ಜತೆಗೆ ಬದನೆಕಾಯಿ ಕಡ್ಲೆಕಾಳಿನ ತಾಳ್ಳನ್ನು ಬಡಿಸಲಾಗಿತ್ತು. “ಯಾರೂ ಮುಜುಗರ ಪಟ್ಟೋಬ್ಯಾಡಿ ನಿಧಾನವಾಗಿ ಊಟ ಮಾಡ್ರಿ” ಎಂದು ಗೌಡರು ವಿನಂತಿಸಿದ್ದರು. ಅನಂತರ ನವಣೆ ಅನ್ನಕ್ಕೆ ನೀರು ಸಾರು ತುಪ್ಪ ಬಡಿಸಿದಾಗ ಹಿರೇ ಬಡಗಿಯವರು “ಇದೆಂಥಾ ಸಾರು, ಎಷ್ಟು ರುಚಿಯಾಗಿದೆ” ಎಂದು ಉದ್ಗಾರವೆತ್ತಿದ್ದರು.

    ಹಜಾರದಲ್ಲಿ ಎರಡು ದೊಡ್ಡ ಕಂಬಳಿಗಳನ್ನು ಹಾಸಲಾಗಿತ್ತು. ಊಟ ಮಾಡಿ ಬಂದವರೆಲ್ಲಾ ಕಂಬಳಿ ಮೇಲೆ ಕುಳಿತು ಮೇಲುತೇಗು ತೇಗುತ್ತಾ ಮನಸ್ಸಿನಲ್ಲೇ ಸವಿಯಾದ ಊಟವನ್ನು ಮೆಚ್ಚಿಕೊಂಡಿದ್ದರು. ಕೆಲವರಿಗೆ ಗುಡ್ಡ ಹತ್ತಿ ಇಳಿದು ಬಂದಿದ್ದರಿಂದ ಮತ್ತು ಸವಿಯಾದ ಊಟದ ಪ್ರಭಾವದಿಂದ ಕಣ್ಣು ಮುಚ್ಚಿಕೊಳ್ಳುತ್ತಿದ್ದವು. ಚೆಂಬಸಣ್ಣ ಮತ್ತು ಅವನ ಗೆಳೆಯರು ನಿದ್ದೆಗೆ ಜಾರಿದ್ದರು. ಸಿದ್ದಣ್ಣನೇ ಗುಬ್ಬಿಯ ಎತ್ತುಗಳಿಗೆ ಮೇವು ನೀರು ನೋಡಿಕೊಂಡಿದ್ದ,

    ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

    ಹೊತ್ತು ನೆತ್ತಿಬಿಟ್ಟು ವಾಲಿದಾಗ ಚೆಂಬಸಣ್ಣ ಮತ್ತು ಅವನ ಮೂವರು ಜತೆಗಾರರನ್ನು ಏಳಿಸಿ “ಬಿಸಿ ನೀರಲ್ಲಿ ಮುಖ ತೊಳಕಳಿ, ನೀವು ಹೊರಡೋ ಹೊತ್ತಾಗುತ್ತೆ. ನಮ್ಮುಡಗರು ನಿಮ್ಮನ್ನ ಈಸಳ್ಳ ದಾಟಿಸಿ ರಸ್ತಿಗೆ ಬಿಡತಾರೆ. ರಾತ್ರಿಗೆ ನೀವು ಆದಿವಾಲದ ಯರಗುಂಟಪ್ಪನ ಪೂಜಾರ ಮನೆಗೆ ಹೋಗಿ ಅಲ್ಲಿದ್ದು ಬೆಳಿಗ್ಗೆ ಮುಂದುಕ್ಕೋಗೀರಂತೆ”, ಸಿದ್ದಣ್ಣ ಸಲಹೆ ಸೂಚನೆ ನೀಡಿದ್ದ. ಒಂದು ಸಣ್ಣ ನಿದ್ದೆ ಮಾಡಿದ್ದ ಅವರು ಎದ್ದು ಹಾಗೇ ಮಾಡಿದರು.

    ಗೌಡ್ರು, ಗೊಂಚಿಕಾರು ಮತ್ತು ಹಿರೇ ಬಡಗೀರ ಸಮ್ಮುಖದಲ್ಲಿ ಚೆಂಬಸಣ್ಣನ ಕೈಗೆ ಇಪ್ಪತ್ತು ಬೆಳ್ಳಿ ರೋಕಡಿಯನ್ನು ಎಣಿಸಿ ಕೊಟ್ಟು ಆನಂತರ “ಎರಡು ಹಮ್ಮಿಣಿಗಳಲ್ಲಿ ಸೇರಿಸಿ ಸೊಂಟಕ್ಕೆ ಬಿಗಿಯಾಗಿ ಕಟ್ಟಿಗಳಿ” ಎಂದು ಹಿತವಚನ ನೀಡಿದ್ದರು. ಚೆಂಬಸಣ್ಣ ಎದ್ದು ಎತ್ತುಗಳನ್ನು ಬಿಚ್ಚಿ ಹಗ್ಗಗಳನ್ನು ಕೊಂಬುಗಳಿಗೆ ಸುತ್ತಿದ. ಸಿದ್ದಿಂಗಪ್ಪ, ಸಿದ್ದಣ್ಣ ರೊಟ್ಟಿ ಬುತ್ತಿ ಗಂಟು ತಂದರು. ಉದ್ದನೆ ಕೋಲುಗಳಿಗೆ ನೇತುಹಾಕಿಕೊಂಡು ಹೊರಡಲು ಎದ್ದರು. ಹಿರೇ ಬಡಗೀರು ಗೌಡ್ರು, ಗೊಂಚಿಕಾರು, ಸಿದ್ದಣ್ಣ ಮತ್ತಿಬ್ಬರು ಓಣಿಬಾಯಿ ತನಕ ಅವರ ಜತೆಯಲ್ಲಿ ನಡೆದು ಅಲ್ಲಿಂದ ಬೀಳ್ಕೊಟ್ಟಿದ್ದರು. ಹಿರೇ ಬಡಗೀರಿಗೆ ತಾನೂ ಇವರ ಜತೆ ಹೋಗಬೌದಿತ್ತು ಅಂದುಕೊಂಡಿದ್ದರು.

    ಚೆಂಬಸಣ್ಣನ ತಂಡವನ್ನು ಬೀಳ್ಕೊಟ್ಟು ಗೌಡ್ರು ಮನೆ ಬಳಿ ಬಂದ- ರೆ ಯಜಮಾನಪ್ಪರು ಮತ್ತು ಸಿಲ್ಲಿಂಗಪ್ಪ ಗಾಡಿ ಅಜ್ಜಿಗೆ ಕೀಲೆಣ್ಣೆ ಸವರಿ ಗಾಡಿಯೊಳಗೊಂದು ಜಮಖಾನ ಹಾಸಿ ಸಿದ್ದಗೊಳಿಸಿದ್ದರು. ಗೌಡ್ರಿಗೆ ಮತ್ತು ಗೊಂಚಿಕಾರಿಗೆ ಮೊದಲೇ ತಿಳಿಸಿದ್ದರಿಂದ ಅವರು ಹಿರೇ ಬಡಗೀರನ್ನು ಗಾಡಿ ಏರಲು ಸೂಚಿಸಿ “ಇಲ್ಲೇ ಹತ್ತಿರದಾಗೆ ದೊಡ್ಡಕಮರದ ಮರ ಆಪ್ತ ಐತೆ, ಆಕಡೆ ಒಂದೀಟು ನೋಡಿಕೊಂಡು ಬರಾನ” ಎಂದು ತಿಳಿಸಿದ್ದರು. “ಗುಡ್ಡ ಹತ್ತೋದಿಲ್ಲ ತಾನೆ” ನಗುತ್ತಾ ಮಾತಾಡಿದ ಬಡಗೀರಿಗೆ “ಹೆ ಹೆ ಅಂಥಾದೇನಿಲ್ಲ ಬರ್ರಿ” ಎಂದು ಆಶ್ವಾಸನೆ ನೀಡಿ ಗಾಡಿ ನಡೆಸಿದ್ದರು. ಈ ಕಡೆಯೂ ಹಾದಿ ಎಂಬುದಿರಲಿಲ್ಲ ದನಕರುಗಳು ನಡೆದಾಡಿದ್ದ ದಾರಿಗಳಲ್ಲಿ ಗಾಡಿ ಹೋಗಿ ರಾಮದಾಸನ ಮರಡಿಯ ಪಡುವಲಿಗೆ ಮತ್ತು ಬಡೆತ್ತಿನ ಕಣಿವೆ ಮುಂದೆ ನಿಲ್ಲಿಸಲಾಗಿತ್ತು.

    ಅಲ್ಲಿಗೆ ಸಮೀಪದಲ್ಲಿ ಹಸಿರುಕ್ಕಿಸುತ್ತಿದ್ದ ದಟ್ಟಡವಿಯ ನಡುವೆ ಎಲ್ಲಾ ಮರಗಳಿಗಿಂತ ಎರಡರಷ್ಟು ಎತ್ತರವಾಗಿ ಬೆಳೆದಿದ್ದ ದೊಡ್ಡಕಮರದ ಮರವನ್ನು ತೋರಿಸಿ, “ಆ ಮರದ ಸಮಾಪದಲ್ಲಿ ಶಂಕರನಹಳ್ಳಿ ಅಥವ ಕೆನ್ನಳ್ಳಿ ಹೆಸರಿನ ಒಂದು ಸಣ್ಣ ಊರು ಇತ್ತಂತೆ. ಆ ಹಳ್ಳಿಯ ಜನ ದೂರದ ವಿಜಾಪುರದ ಕಡೆಯಿಂದ ಬಂದಿದ್ದರಂತೆ. ಅವರೆಲ್ಲಾ ಹಾಲುಮತಸ್ತರಾಗಿದ್ದರಂತೆ. ಅವರನ್ನು ರಾವುತರು ಅಮ್ಮ ಕರಿತಿದ್ರಂತೆ. ಇತ್ತಕಡೆ ಬರೋಕು ಮುಂಚೆ ಯಾರೋ ರಾಜನೋ ಪಾಳೇಗಾರಂತಾಗೆ ಸೈನಿಕರಾಗಿದ್ರೇನೋ. ಅವರ ಗೌಡ ತಿಮ್ಮರಾವುತ ಅಂಬೋನಿಗೆ ಲಕ್ಕು ಅಂಬೋ ಹೆಸರಿನ ಸುಂದರಿ ಮಗಳಿದ್ದಳಂತೆ.

    ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

    ಯಾವುದೋ ಕಾರಣಕ್ಕೆ ಅಲ್ಲೇ ಮಗ್ಗಾಗೇ ಇದ್ದ ಕೆನ್ನಳ್ಳಿ ನಾಯ್ಕರಿಗೂ ಇವರಿಗೂ ಮನಸ್ತಾಪ ಆಗಿತ್ತಂತೆ. ಹೆಂಗೆಂಗೋ ದುರ್ಗದ ಪಾಳೇಗಾರ ಇಮ್ಮಡಿ ಮೆದಕೇರಿ ನಾಯ್ಕನಿಗೆ ಈ ಚಲುವೆ ಲಕ್ಕೂಳ ವಿಷ್ಯ ಗೊತ್ತಾಗಿ ಈ ಸುಂದರೀನ ಲಗ್ನಾ ಆಗಬೇಕು ಅತ್ತ ಮನಸ್ ಮಾಡಿ ಲಗ್ನ ಗೊತ್ತು ಮಾಡಿಕೆಂಡ್ ಬರ್ರಿ ಅಮ್ಮ ಇಬ್ಬರು ದಳವಾಯಿಗಳ ಇಲ್ಲಿಗೆ ಕಟ್ಟಿದಾನೆ. ಇವು “ನಾವು ಹಾಲುಮತಸ್ತು ವಾಲ್ಮೀಕಿ ಜಾತಿಯೋರಿಗೆ ಕನ್ನೆ ಕೇಳೋಕೆ ನಿಮಗೆಷ್ಟು ದೈಯ್ಯ? ಮತ್ತೆ, ನಿಮಗೆ ಹಕ್ಕೇನಿದೆ? ಅಮ್ಮ ಕ್ವಾಪ ಮಾಡಿಕೆಂಡು ದಳವಾಯಿಗಳ ಕಾಲಿಗೆ ಹಗ್ಗಕಟ್ಟಿ ಊರಿಂದ ಎಳು ಹೊರಗಾಕ್ಸಿದಾನೆ ರಾವುತ”.

    ಆ ದಳವಾಯಿಗಳು ದುರ್ಗಕ್ಕೋಗಿ ಮೆದಕೇರಿ ನಾಯ್ಕನತ್ರ ಅವರಿಗಾಗಿದ್ದ ಅವಮಾನ ಹೇಳ್ಕೊಂಡಿದಾರೆ. ಅದನ್ನ ಕೇಳಿದ ಅವನು ಉರಿದುಬಿದ್ದು 168 ಜನ ಸೈನಿಕರನ್ನ ಕಳಿಸಿ “ಊರು ಸುಟ್ಟು ಬೂದಿ ಮಾಡಿ ಆ ಹುಡುಗಿ ಎಳಕಂಡ್ ಬರಿ” ಅಮ್ಮ ಜನ ಕಟ್ಟಿದಾನೆ. ಅವರು ಬರಲೇ ಬಣವೆಗಳಿಗೆಲ್ಲಾ ಬೆಂಕಿ ಹಚ್ಚಿ ಕೊಳ್ಳೆ ಹೊಡೆದು ರಾವುತನ ಮಗಳ ಹಿಡಕಂಡಿದಾರೆ. ಅವಳ ಬಿಡಿಸಬೇಕು ಅತ್ತ ರಾವುತರು ಅವರ ಮಕ್ಕಳು ಎಲ್ಲಾ ತೋಪಾಗಿ ಸೈನಿಕರ ಜತೆ ಹೊಡೆದಾಡಿದ್ದಾರೆ.

    ಅದರಾಗೆ ನೂರು ಜನದ ಮೇಲೆ ಸೈನಿಕರು ಸತ್ತಿದ್ದಾರೆ. ಉಳಿದೋರೆಲ್ಲ ಓಡೋಗಿದಾರೆ. ಇತ್ತ ಕಡೇಲೂ ಒಂಬತ್ತು ಹತ್ತು ಜನ ಸತ್ತೋಗಿದ್ದಾರೆ. ಆವಾಗ ಇವಕಡೆ ಸತ್ತೋರ ಸುಡಬೇಕು ಅಷ್ಟು ಬೆಂಕೆ ಹಾಕಿದಾರೆ. ಆ ಹುಡುಗಿ ನನ್ನಿಂದ ಇವರಿಗೆಲ್ಲಾ ಈ ಗತಿ ಬಂತು ಅಯ್ತು ಅವಳೂ ಕಚ್ಚಿನಾಗೆ ಹಾರಿ ಸುಟ್ಟೋಗಿದಾಳೆ.

    ಉಳಿದಿದ್ದ ರಾವುತರು ನಾಳೆ ನಮ್ಮೆಲ್ಲರ ಪ್ರಾಣ ಉಳಿಯೋದಿಲ್ಲ ಅಯ್ತು ರಾತ್ರೋ ರಾತ್ರಿ ಅವರ ದೇವರು, ಸಾಮಾನು ಸರಂಜಾಮುಗಳೆಲ್ಲಾ ಗಾಡಿಗಳಾಗೆ ತುಂಬಿಕೆಂಡು ಹೊರಟು ಹೋಗಿ ಹಗಲು ರಾತ್ರಿ ಪಯಣ ಹೋಗಿ ಇಕ್ಕೇರಿ ಸೀಮೆ ತಲುಪಿ ರಾಜನ ಮರೆಬಿದ್ದು ಬದುಕಿದರು” ಅಂತ ಹೇಳಿ ನಿಟ್ಟುಸಿರಿಟ್ಟಿದ್ದರು. “ಇನ್ನು ದುರ್ಗದ ಪಾಳೇಗಾರ ಸುಮ್ಮಿರ ಪೈಕಿ ಅಲ್ವಲ್ಲಾ”, ಬಡಗಿ ತಮ್ಮ ಅನುಮಾನ ವ್ಯಕ್ತಪಡಿಸಿದ್ದರು. ಇವನಿಗೆ ತಡವಾಗಿ ಗೊತ್ತಾಗಿ “ನಮ್ಮೋರು ನಿಮ್ಮ ಹತ್ರ ಬಂದಿದಾರೆ. ಅವರನ್ನ ನಮಗೊಪ್ಪಿಸಿ ಅಮ್ಮ ಕೇಳಿದಾನೆ. ಅದಕ್ಕೆ ಅವರು ಬೆನ್ನು ಬಿದ್ದೋರ ಕಳಿಸಲ್ಲಾ ಅಮ್ಮ ಖುಲ್ಲಾ ಹೇಳಿದಾರೆ” ಅಂದು ತಿಳಿಸಿದ್ದರು.

    ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

    ಹಿರೇ ಬಡಗಿ ಬಡೆತ್ತಿನ ಕಣಿವೆಯಿಂದ ಪಡುವಗಡೆಗೆ ಹಬ್ಬಿರೋ ಹಾಲಗುಡ್ಡ ಅದರ ಕೊನೆಯಿಂದ ಬಡಗಣ ದಿಕ್ಕಿಗೆ ಹಬ್ಬಿರುವ ಗುಡ್ಡದ ಸಾಲುಗಳನ್ನು ನೋಡುತ್ತಾ ಕಾಡಿಗೆ ಸ್ವಾಭಾವಿಕ ರಕ್ಷಣೆ ನೀಡಿರುವ ಗುಡ್ಡಗಳನ್ನು ನೋಡಿದರು. ಈ ತೆರನ ಸಾಲುಗುಡ್ಡಗಳನ್ನು ತರೀಕೆರೆ ಲಿಂಗದಹಳ್ಳಿ ಕಡೆ ನೋಡಿದ್ದ ನೆನಪು, ಗೊಂಚಿಕಾರು ಮಾತಾಡಿ “ಅಗ್ಗೋರೆ, ಈ ಕಡೆ ಇಳಿಜಾರು ಆಚೆಕಡೆ ಇಳಿಜಾರು ಕೂಡಿರೋ ತಾವ ಬಸವನಹೊಳೆ ಹರಿಯುತ್ತೆ. ಅದು ನೆಟ್ಟಗೆ ಮೂಡಲ ದಿಕ್ಕಿಗೆ ಹರಿದು ಮೂಡಲ ಗುಡ್ಡ ಅಡ್ಡ ಬಂದಿದ್ರಿಂದ ನೆಟ್ಟಗೆ ತೆಂಕಲಿಗೆ ಹರೀತೈತೆ. ನಮ್ಮ ಊರ ಮುಂದೆ ಹರಿಯುತ್ತಲ್ಲಾ ಇದೇನೆ.

    ಈ ಹಳ್ಳದಿಂದ ಇಡೀ ನಮ್ಮೂರಿಗೆ ಬಾಳ ಅನುಕೂಲ, ಹಳ್ಳ ತುಂಬಿ ಹರೀವಾಗ ಊರಿಂದ ಮುಂಬೈ ಹೊಲಗಳಾಗೆಲ್ಲ ಅಷ್ಟೆಕೆಂಡು ಹರಿಯುತ್ತೆ. ನಮ್ಮ ಜಮಾನುಗಳು ಹಳ್ಳದ ನೀರಿನಾಗೆ ಸೆಂದಾಗಿ ನೆಂದು ಅಂದ್ರೆ ಒಂದು ಫಸಲು ನಂಬಿದಂಗೆ ಕೈಗೆ ಸಿಗುತ್ತೆ” ಅನ್ನುತ್ತಾ ತಲೆಯಾಡಿಸಿದ್ದರು.

    ಕೂಡಲೇ ಸಿದ್ದಣ್ಣ ದನಿಗೂಡಿಸಿದ. “ಅದೇನೋ ಹೇಳ್ತಾರಲ್ಲ ಧಮ್ಮದ ಊರಿಗೆ ಮಳೆ ಬಂದ್ರೆ ಕನ್ನದ ಊರ ಮುಂದೆ ಹಳ್ಳ ಹರೀತು ಅಂಬಂಗೆ ಫಸಲು ಕೊಯ್ಲಿಗೆ ಬಂದಿರೋವಾಗ ಹಳ್ಳ ಹರು ನಷ್ಟಾನು ಮಾಡೈತೆ” ಅಂದ. “ಅಂತೂ ನಿಮ್ಮ ಹಳ್ಳ ಬತ್ತಿರೋ ಹಂಗೆ ಕಾಣೋಲ್ಲ” ಬಡಗೀರು ಮಾತಾಡಿದರು. ಹತ್ತಿರದಲ್ಲಿ ಕುರಿ ಮೇಕೆಗಳ ಕೂಗಾಟ ಕೇಳಿಸಿತ್ತು. “ಊರಕಡೆ ಹೋಗಾನ ಬರ್ರಿ ಕುರಿ ಮ್ಯಾಕೆ ಎಲ್ಲಾ ಊರ ಮಕನಾಗೈದಾವೆ”, ಸಿದ್ದಣ್ಣ ಮುನ್ಸೂಚನೆ ನೀಡಿದ್ದ. ಹಿರೇ ಬಡಗಿ ಮೂಡಲ ಗುಡ್ಡದ ಮೇಲಿನ ಬಿಸಿಲು ನಿಧಾನಕ್ಕೆ ಮರೆಯಾಗುತ್ತಿರುವುದನ್ನು ಗಮನಿಸುತ್ತಾ “ಈ ಎರಡು ಗುಡ್ಡಗಳು ವರದಾಯಕವಾಗಿವೆ. ಹಂಗೆಯೇ ಈ ಊರಹಳ್ಳ ಕೂಡಾ” ಅಂದುಕೊಳ್ಳುತ್ತಾ ಗಾಡಿ ಏರಿದ್ದರು.

    ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

    ಗಾಡಿ ಊರು ಸಮಿಾಪಿಸಿದಂತೆ ಊರಕಡೆಗೆ ನಡೆಯುತ್ತಿದ್ದ ದನಕರುಗಳು, ಕುರಿ ಮೇಕೆ ಮುಂತಾದವು ಕಂಡವು “ಇಷ್ಟೊಂದು ದನಕರು, ಕುರಿ ಆಡು ಸಾಕಿದ್ದಾರಾ ಈ ಊರಜನ” ಅಂದುಕೊಂಡಿದ್ದರು ಹಿರೇಬಡಗಿ,

    ಗಾಡಿ ನೇರವಾಗಿ ಗೊಂಚಿಕಾರರ ಮನೆ ಬಳಿಗೆ ಹೋಗಿತ್ತು. ಎಲ್ಲರೂ ಗಾಡಿ ಇಳಿದು ಗೊಂಚಿಕಾರರ ಮನೆ ಮುಂದಿನ ಚಪ್ಪರದೊಳಗೆ ನಡೆದರು. ಈ ಸಂಜೆ ಇವರಲ್ಲಿಯೇ ಊಟ ಮಾಡಬೇಕಾಗಬಹುದೆಂದು ಊಹಿಸಿದ್ದ ಬಡಗಿಯವರು “ದಯವಿಟ್ಟು ಸೀ ಅಡಿಗೆ ಮಾಡಿಸ್ ಬೇಡಿ, ಜೀರ್ಣ ಆಗೋದಿಲ್ಲ” ಅಂತ ಗೊಂಚಿಕಾರರನ್ನು ವಿನಂತಿಸಿದ್ದರು. ಗೌಡ್ರು ಗೊಂಚಿಕಾರರೂ ಮುಗುಲ್ನಗುತ್ತಾ “ಆಯಿತು ಬಿಡಿ” ಅಂದಿದ್ದರು. ಸಂಜೆ ಮನೆಗೆ ಬಂದ ಆಕಳು ಕರುಗಳು, ಎಮ್ಮೆ ಮೊದಲಾದುವನ್ನು ಅವುಗಳ ಜಾಗದಲ್ಲಿ ಕಣ್ಣಿ ಹಾಕುವುದು. ಕರುವಿನ ಆಕಳು, ಎಮ್ಮೆಗಳಿಂದ ಹಾಲು ಹಿಂಡುವುದು ಮುಂತಾದ ಕೆಲಸಗಳನ್ನು ಯುವಕರಂಥವರು ಮಾಡಿ ಗ್ವಾಂದಿಗೆಗಳಲ್ಲಿ ತಲೆಮೇವು ತುಂಬಿಸುವುದನ್ನು ಮಾಡಿದ್ದರು.

    ಚಪ್ಪರದಡಿಯಲ್ಲಿ ಆಪಿನ ಚಾಪೆ ಮೇಲೆ ಕುಳಿತು ಇವೆಲ್ಲವನ್ನು ವೀಕ್ಷಿಸುತ್ತಿದ್ದ ಹಿರೇ ಬಡಗಿಯವರನ್ನು ಸ್ನಾನ ಮಾಡಲು ಗೊಂಚಿಕಾರರು ಆಹ್ವಾನಿಸಿದರು. ಬೆಳಿಗ್ಗೆ ಗುಡ್ಡ ಹತ್ತಿ ಇಳಿದಿದ್ದು ಸಂಜೆ ಓಡಾಡಿದ್ದರಿಂದ ಬಡಗಿಯವರಿಗೆ ಮೈಕೈ ನೋವಾಗಿದ್ದವು. “ಸರಿ ಆಯಿತು” ಅನ್ನುತ್ತಾ ತಮ್ಮ ಬಟ್ಟೆ ಚೀಲ ಯಜಮಾನಪ್ಪರ ಮನೆಯಲ್ಲಿದ್ದು ಅದನ್ನು ಇಲ್ಲಿಗೆ ತರಿಸಲು ಸೂಚಿಸಿ ಎದ್ದು ಮೈಮುರಿದುಕೊಂಡರು. ಅಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ್ದ ಸಿದ್ದಣ್ಣನೇ ಹೋಗಿ ಬಟ್ಟೆ ಚೀಲ ತಂದು ಕೊಟ್ಟಿದ್ದ. ಹಿಂದೆಯೇ ಯಜಮಾನಪ್ಪ ಆಗಮಿಸಿದ್ದರು. ಎಲ್ಲರಿಗೂ ಪಡಸಾಲೆಯಲ್ಲಿ ಮಡಿಚಿ ಹಾಸಿದ್ದ ಕಂಬಳಿ ಪಂಕ್ತಿಯ ಮೇಲೆ ಕೂತುಕೊಳ್ಳಲು ಗೊಂಚಿಕಾರರು ವಿನಂತಿಸಿದ್ದರು.

    ಬಿಸಿಬಿಸಿ ರಾಗಿ ರೊಟ್ಟಿ, ಕುಸುಮೆ ಹಿಂಡಿಗೆ ತುಪ್ಪವನ್ನು ಬಡಿಸಿದ್ದರು. ಸಿದ್ದಣ್ಣ ಯಜಮಾನಪ್ಪರ ಮತ್ತು ಗೊಂಚಿಕಾರರು “ಓಂ ನಮಶಿವಾಯ” ಅನ್ನುತ್ತ ಇಷ್ಟ ಲಿಂಗದ ಕರಡಿಗೆಗಳನ್ನು ಎತ್ತಿ ಕಣ್ಣಿಗೊತ್ತಿಕೊಂಡಿದ್ದರು. “ಗೌಡ್ರು ಇದ್ದಿದ್ರೆ ಚೆಂದಾಕಿರತಿತ್ತು”, ಬಡಗಿಯವರು ಆಶಿಸಿದ್ದರು. “ಅವರಿಗೆ ಬ್ಯಾರೆ ಕೆಲ್ಲ ಇದೆ”, ಗೊಂಚಿಕಾರರು ತಿಳಿಸಿದ್ದರು. “ಬಿಸಿ ನವಣೆ ಅಕ್ಕಿ ಅನ್ನಕ್ಕೆ ಹಾಲು ಮೊಸರಿಗಿಂತ ಮಜ್ಜಿಗೆ ರುಚಿಯಾಗಿರುತ್ತೆ ಮತ್ತು ಆರೋಗ್ಯಕ್ಕೂ ಒಳ್ಳೇದು” ಅನ್ನುತ್ತಾ ಬಡಗಿಯವರು ಅನ್ನ ಹಾಲು ಮಜ್ಜಿಗೆ ಊಟವನ್ನು ಸವಿದಿದ್ದರು.

    ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು 

    “ನಾವ್ಯಾರೂ ಅಡಿಕೆ ಎಲೆ ಹಾಕದಿಲ್ಲ ನೀವು ಹಾಕ್ಯ…” ಅಂದು ಗೊಂಚಿಕಾರರು ಬಡಗೀರ ಮುಂದೆ ಅಡಿಕೆ, ವೀಳೇದೆಲೆ ಸುಣ್ಣಗಳನ್ನು ಇರಿಸಿದ್ದರು. ಅವರೂ ಕೂಡಾ “ಈಗ ಬೇಡ” ಎಂದು ಕೈ ತಿರುವಿ ಅವುಗಳನ್ನು ಮುಟ್ಟಲಿಲ್ಲ. “ಅಷ್ಟೋರು ನಮ್ಮನೆಯಾಗೇ ಮಲಿಕ್ಯನ್ತಾರೆ, ಬೆಳಿಗ್ಗೆ ಎದ್ದು ಮಂಗರಾಯನ ಕೆರೆ ಏರಿ ನೋಡ್ಕಂಡು ಬರಾನ” ಎಂದು ಯಜಮಾನಪ್ಪರು ನಾಳಿನ ಕಾಠ್ಯಕ್ರಮವನ್ನೂ ತಿಳಿಸಿ ಹಿರೇ ಬಡಗೀರನ್ನು ಏಳಿಸಿಕೊಂಡು ತಮ್ಮ ಮನೆಯತ್ತ ಕರೆದೊಯ್ದರು. ಜತೆಯಲ್ಲೇ ಬಂದಿದ್ದ ಸಿದ್ದಣ್ಣ “ಅಣ್ಣೂರು ನಾಳೆ ಬೆಳಿಗ್ಗೆ ನಮ್ಮನೆಯಾಗಿ ಊಟ ಮಾಡ್ಲಿ” ಎಂದು ವಿನಂತಿಸಿದ್ದ. “ಆತೇಳು, ಎಲ್ಲುಂಡೇನು” ಯಜಮಾನಪ್ಪರು ಸಮ್ಮತಿಸಿದ್ದರು.

    ಯಜಮಾನಪ್ಪರ ಹಜಾರದಲ್ಲಿ ಮಲಗಿದ್ದ ಹಿರೇ ಬಡಗಿಯವರಿಗೆ ಈ ಊರಿಗೆ ಬಂದು ಇವತ್ತಿಗೆ ಎರಡು ರಾತ್ರಿ ಕಳೆದಂಗಾಗುತ್ತೆ. ನಾಳಿಕ್ಕೂ ಇರಬೇಕಾಗುತ್ತೇನೋ ಅಂದುಕೊಳ್ಳುತ್ತಾ ನಿದ್ದೆಗೆ ಜಾರಿದ್ದರು. ಬಹುಶಃ ಕೋಳಿಗಳು ಇಲ್ಲದ ಊರು ಇರಲಿಕ್ಕಿಲ್ಲ. ಮೊದಲ ಕೋಳಿ ಕೂಗುತ್ತಲೇ ಗೌನಳ್ಳಿಯ ಅರ್ಧಂಬರ್ಧ ನಿವಾಸಿಗಳು ಎದ್ದು ಮನೆ ಒಳಗೆ ಕಣ್ಣಿ ಹಾಕಿದ್ದ ಎತ್ತುಗಳನ್ನು ಬಿಚ್ಚಿ ಹೊರಗೆ ಕಣ್ಣಿ ಹಾಕಿ, ಸಗಣಿಕಸ ಬಳಿಯುವುದು, ಮನೆ ಮುಂದಿನ ಅಂಗಳ ಗುಡಿಸುವುದು, ಸ್ವಲ್ಪ ಬೆಳಕಾಗುತ್ತಲೇ ಊರ ಮುಂದಲ ಹಳ್ಳದಿಂದ ಮತ್ತು ಮಾರಿಗುಡಿಹಳ್ಳದಿಂದ ನೀರು ತರುವುದು, ನಸಿಗ್ಗೆಲೆ ಹೊಲಗಳಿಗೆ ಹೋಗಿ ಹಸೀಹುಲ್ಲು ಕೊಯ್ದು ಹೊರೆಗಟ್ಟಿ ಹೊತ್ತು ತರುವುದೂ ಮಾಡುತ್ತಿದ್ದರು.

    ಹಿರಿಯ ಬಡಗಿಯವರು ಮಾಮೂಲಿನಂತೆ ಬೆಳ್ಳಂಬೆಳಕಾದಾಗ ಏಳುವುದು ಮಡಿ ಸಿದ್ದಿಂಗಪ್ಪ ಮತ್ತು ಸಿದ್ದಣ್ಣರ ಜತೆ ಮಾರಿಗುಡಿ ಹಳ್ಳದ ಕಡೆ ಹೋಗಿ ತಮ್ಮ ನಿತ್ಯಕರಗಳನ್ನು ಮುಗಿಸಿಕೊಂಡು ಸಿದ್ದಣ್ಣನ ಜತೆ ಅವರ ಮನೆಗೆ ನಡೆದಿದ್ದರು. ಅಲ್ಲಿ ಸಿದ್ದಣ್ಣನ ಮಗ ಬಡಗೀರ ಬಟ್ಟೆಗಳ ತಂದು ಹಜಾರದಲ್ಲಿ ಚಾಪೆ ಮೇಲೆ ಇರಿಸಿದ್ದ. ಅದನ್ನು ಕಾಣುತ್ತಲೇ ಹಿರೇ ಬಡಗಿಯರು ಈಗ ಸ್ನಾನ ಮಾಡಬೇಕು ಅಂದುಕೊಂಡಿದ್ದರು. ಗೌನಳ್ಳಿಯ ಮಾಳಿಗೆ ಮನೆಗಳನ್ನು ಸಾಮಾನ್ಯವಾಗಿ ವೃಷಭಾಯದಲ್ಲಿ ನಿರಿಸಲಾಗಿತ್ತು.

    ಬಹುಪಾಲು ಮನೆಗಳ ಮುಂದೆ ಬಾದೆ ಹುಲ್ಲಿನ ಚಪ್ಪರ ನಿಮ್ಮಿಸಿ ಎರಡೂ ಪಕ್ಕ ಬಂದ್ರೆಕಡ್ಡಿಯ ನೆರಿಕೆ ನಿಲ್ಲಿಸಲಾಗಿತ್ತು. ಕೆಲವು ಮನೆಗಳ ಮುಂದೆ ಬಾಗಿಲ ಪಕ್ಕ ಗಜದೆತ್ತರದ ಹಜಾರ ಮಾಡಿಕೊಂಡಿದ್ದರು. ಹಿಂದಿನ ಬಾಗಿಲ ಬಳಿಯೂ ಚಪ್ಪರ ಮತ್ತು ಅದರ ಮೂಲೆಯಲ್ಲಿ ಬಚ್ಚಲು ನಿರಿಸಿಕೊಂಡಿದ್ದರು.

    ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

    ಸಿದ್ದಣ್ಣ ಕರೆಯುತ್ತಲೇ ಎದ್ದು ಸ್ನಾನ ಮಾಡಿದ ಬಡಗಿಯವರು ಮೈ ಒರೆಸಿಕೊಳ್ಳುತ್ತಿರುವ ಸಮಯಕ್ಕೆ ಗೌಡ್ರು ಗೊಂಚಿಕಾರರು ಮತ್ತು ಯಜಮಾನಪ್ಪರು ಆಗಮಿಸಿದರು. “ಬರೆಣ್ಣಾ” ಎಂದು ಎಲ್ಲರನ್ನೂ ಸಿದ್ದಣ್ಣ ಸ್ವಾಗತಿಸಿದ್ದ. “ಸಿದ್ದಪ್ಪಾ ಒಂದೇ ಗಾಡಿ ಸಾಕು. ಅಜ್ಜಿಗೆ ಎಣ್ಣೆ ಹಚ್ಚಿ ಗಾಡಿ ಒಳಗೆ ಒಂದು ಕಂಬ್ಳೆ ಹಾಸಿ ಬಿಡು”, ಗೌಡ್ರು ತಿಳಿಸಿದರು. “ಎಲ್ಲಾರೂ ಊಟ ಮಾಡಾನ ಬರೆಣ್ಣಾ” ಸಿದ್ದಣ್ಣ ಅವರನ್ನು ಆಮಂತ್ರಿಸಿದ್ದ. “ನಮ್ಮೆಲ್ಲಾ ಊಟ ಆಗೈತೆ ರಾಗಿ ಮುದ್ದೆ ಬಪ್ಪೆಕಾಯಿ ಬಜ್ಜಿ ಉಂಡಿದೀವಿ ನೀವು ಮಾಡಿರಿ” ಗೊಂಚಿಕಾರರು ತಿಳಿಸಿ ಗಾಡಿ ಅಚ್ಚಿಗೆ ಕೀಲೆಣ್ಣೆ ಹಚ್ಚಿಸಲು ಮುಂದಾದರು.

    ಹಿರೇಬಡಗೀರಿಗೆ ಒಬ್ಬರೇ ಊಟ ಮಾಡಲು ಇರಿಸುಮುರಿಸಾಯಿತು. ಅವರು ಗೌಡ್ರು ಮತ್ತು ಉಳಿದವರನ್ನು “ಬರೆಣ್ಣಾ ಜತೇಲಿ ಕುಂತು ಒಂದೀಟೀಟು ಊಟ ಮಾಡಾನ ಬರಿ” ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು. “ಆಯಿತು ಬರ್ರೆಪ್ಪಾ ಅನ್ನೋರಿಗೆ ಒಬ್ರೆ ಊಟ ಮಾಡಾಕೆ ಇರಿಸುಮುಾಗೈತೆ” ಅನ್ನುತ್ತಾ ಗೊಂಚಿಕಾರರು ಸಿದ್ಧರಾದರು. ಕೂಡಲೇ ಯಜಮಾನಪ್ಪರು ಮತ್ತು ಗೌಡ್ರ ಕೂಡಾ ಮುಖಕೈ ಕಾಲು ತೊಳೆದುಕೊಂಡು ಬಂದು ಊಟ- ಕೈ ಕುಳಿತರು. “ಗಿಣ್ಣದುಗ್ಗಿ ಹಾಲುತುಪ್ಪದೂಟ ತುಂಬಾ ರುಚಿಯಾಗಿತ್ತು.

    ಗಿಣ್ಣದುಗ್ಗಿ ಅಂದಿದ್ರೆ ಮನೆಯಾಗೆ ಊಟಾನೇ ಮಾಡ್ತಿರಲಿಲ್ಲ” ಎಂದು ಗೌಡರು ಉದ್ಗಾರವೆತ್ತಿದರೆ “ಸರಿಯಾಗಿ ಬೆಲ್ಲ ಹಾಕಿದೀರ. ಬೆಲ್ಲ ಜಾಸ್ತಿಯಾಗಿ ಬಿಟ್ರೆ ಬಾಯಿಗೆ ತೀಡಿಕೆಂಡ್ ಬರುತ್ತೆ”, ಯಜಮಾನಪ್ಪಾರು ಮೆಚ್ಚಿಕೊಂಡಿದ್ದರು. “ಮೊಸರು ಮಜ್ಜಿಗೆ ಬಡಿಸ್‌ಬೇಡಿ. ನಮ್ ಕಡೆ ಗಿಣ್ಣದುಗ್ಗಿ ಉಂಡಮೇಲೆ ಮೊಸರು ಮಜ್ಜಿಗೆ ಉಣ್ಣಲ್ಲ” ಹಿರೇ ಬಡಗೀರು ಮಾತಾಡಿದ್ದರು “ನಿನ್ನೆ ಬೆಳಿಗ್ಗೆ ಒಂದೆಮ್ಮೆ ಇದಿತ್ತು. ಅದರ ಗಿಣ್ಣದಾಲಿನಾಗೆ ಹುಗ್ಗಿ ಮಾಡಿಸಿದೆ” ಸಿದ್ದಣ್ಣ ವಿವರಣೆ ನೀಡಿದ್ದ. ಊಟವಾದ ಮೇಲೆ ಎಲ್ಲಾರಿಗೂ ಎರಡೆರಡು ಬೆಳ್ಳುಳ್ಳಿ ಪಾವು ಕೊಟ್ಟಿದ್ದರು. “ನಮ್ ಕಡೇಲು ಹಿಂಗೇ” ಹಿರೇ ಬಡಗಿ ಹೇಳಿದ್ದರು.

    ಅಗಾ ಇಗಾ ಅನ್ನುವುದರೊಳಗೆ ಸಿದ್ದಣ್ಣ ಊಟ ಮುಗಿಸಿ ಬಂದು ಎತ್ತುಗಳನ್ನು ಬಿಚ್ಚಿ ಗಾಡಿಗೆ ಹೂಡಿದ. ಏಳೆಂಟು ಜನ ಗಾಡಿ ಏರಿದರು. ಸಿದ್ದಣ್ಣನೇ ಗಾಡಿ ನಡೆಸುತ್ತಾ ಮೂಡಮಖನಾಗಿ ನೀರೊಳೇ ಹಾದೀಲಿ ಹೋಗಿ ಊರ ಮುಂದಲ ಹಳ್ಳ ಹತ್ತಿಸಿ ತೆಂಕಲ ಪಟ್ಟಮರಡಿ ದಿಕ್ಕಿಗೆ ನಡೆಸಿದ್ದ. ಊರಿನ ಮೂಡಲ ದಿಕ್ಕಿಗಿರುವ ಗುಡ್ಡದ ಸಾಲಿನಲ್ಲಿರುವ ಪಟ್ಟಮರಡಿ ತಲುಪಿ ಗಾಡಿ ನಿಲ್ಲಿಸಿದ್ದರು.

    ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

    ಯಜಮಾನಪ್ಪರು ಮುಂದೆ ಬಂದು “ಅಣ್ಣೂರೆ ಈ ಇದ್ದಿಲರಾಸಿ ಇರೋ ಹತ್ರ ಹಿಂದೆ ಮಂಗರಾಯನ ಪಟ್ಟ ಅಮ್ಮ ಒಂದು ಊರು ಇತ್ತಂತೆ. ಮಂಗರಾಯಪ್ಪ ಕಟ್ಟಿರೋ ಕೆರೆ ಏರಿ ಇಲ್ಲಿಂದ ಪಡುವಗಡೆಗೆ ಒಂದು ಸಾವಿರ ಗಜ ಉದ್ದದಷ್ಟು, ಈಗಲೂ ಐತೆ. ಅದನ್ನ ಆಮೇಲೆ ನೋಡಾನ. ಈ ಮರಡಿಗೆ ಪಟ್ಟಮಳ್ಳಿ ಅಂತಾಲೇ ಕರೀತೀವಿ. ಈ ಊರು ಯಾಕೆ ಹಾಳಾಯ್ತು. ಹೆಂಗೆ ಹಾಳಾಯ್ತು ಅಮ್ಮ ತಿಳಿಸೋರೇ ಇಲ್ಲ” ಎಂದು ಸಖೇದಾಶ್ಚರಗಳಿಂದ ತಿಳಿಸಿದ್ದರು.

    ಹಿರೇ ಬಡಗೀರು ಸುತ್ತಾ ಮುತ್ತಾ ನೋಡಿ, ಕಣ್ಣು ಸಣ್ಣಗೆ ಮಾಡಿಕೊಂಡು ಏನೇನೋ ಊಹಿಸಿದರೂ ಉತ್ತರ ಸಿಗದಾಗಿತ್ತು. ಗೌಡರು ಮಂಗರಾಯನ ಕೆರೆ ಏರಿ ಇರೋ ಕಡೆಗೆ ಹೆಜ್ಜೆ ಹಾಕಿದ್ದರು. ಎಲ್ಲರೂ ಅವರನ್ನು ಹಿಂಬಾಲಿಸಿ ಕೆರೆ ಏರಿಯ ಮಧ್ಯ ಭಾಗಕ್ಕೆ ತಲುಪಿದ್ದರು. ಈ ತನಕವೂ ದಿಕ್ಕು ತೋಚದೆ ಹಿರೇ ಬಡಗೀರು ಯೋಚನಾಗ್ರಸ್ತರಾಗಿದ್ದರು. ಮುಂದೆ ನಡೆದು ‘ಕೆರೆ ಒಡಕು’ ಎಂಬಲ್ಲಿಗೆ ಅವರೆಲ್ಲಾ ಬಂದಿದ್ದರು. ಕೆರೆ ಒಡಕಿನ ಬಳಿ ಎರಡೂ ಕಡೆ- ಯ ಏರಿ ಸುಮಾರು 60, 70 ಅಡಿ ಎತ್ತರವಿತ್ತು.

    ದಿಣ್ಣೆ ಮೇಲೆ ನಿಂತಿದ್ದ ಗೌಡರು “ಆಸ್ಟೋರೆ ಟೆಂಕಡೀಕೆ ದೂರದಾಗೆ ಮೋಟು ಗ್ವಾಡೆ ಕಾಣಿಸ್ತಾವಲ್ಲ ಅಲ್ಲಿ ಕೂಡಾ ‘ನಡವಲಹಳ್ಳಿ’ ಅಂಬೋ ಊರು ಇತ್ತಂತೆ. ಅದೂ ಕೂಡಾ ಹಾಳಾಗೈತೆ” ಎಂದು ಅತ್ತ ಕೈ ತೋರಿಸಿದ್ದರು. “ಇವೆಲ್ಲಾ ಹೆಂಗೆ ಹಾಳಾದುವು ಅಂಬೋದೇ ತಿಳಿಯಲ್ಲ” ಎಂದು ತಮ್ಮ ಆಶ್ಚರ ವ್ಯಕ್ತಪಡಿಸಿದ್ದರು.

    ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

    ಆಗ ಮಾತಾಡಿದ ಯಜಮಾನಪ್ಪಾರು “ನಮ್ಮ ಪೂದ್ವೀಕರು ಇದೇ ಕೆರೆ ಅಂಗಳದಾಗೆ ಕೊನೇಗೆ ಬಂದು ಊರು ಕಟ್ಟಿದಾರೆ. ಅವು ಊರು ಕಟ್ಟೋವಾಗ ಈ ಊರುಗಳೆಲ್ಲಾ ಹಾಳಾಗಿದ್ದಿರಬೇಕು”. ತಮ್ಮ ಊಹೆಯನ್ನು ತಿಳಿಸಿದ್ದರು. ಕೆರೆ ಏರಿ ಮೇಲೆ ಬೆಳೆದಿದ್ದ ಹುಣಿಸೆ ಮರಗಳಡಿಯಲ್ಲಿದ್ದ ಬಂಡೆಗಳ ಮೇಲೆ ಕುಳಿತಿದ್ದ ಎಲ್ಲರಿಗೂ ಈ ವಿಚಾರಗಳು ಹೊಳೆದಿರಲಿಲ್ಲ. “ಈ ತರ ಊರುಗಳು ಹಾಳಾಗುವುದು, ಹೊಸಾ ಊರು ಕಟ್ಟೋದು ಹಿಂದಿನಿಂದ ನಡೆಕಂಡೇ ಬಂದೈತೆ. ಇಡೀ ಊರಿಗೆ ಊರೇ ಹಾಳಾಗೈತೆ ಅಂದ್ರೆ ಅಂಥಾದ್ದೇನೋ ಬರಬಾರದ್ದು ಬಂದೈತೆ. ಹಂಗೆ ಕೆರೆ ಏರೀನೂ ಒಡದೋಗೈತೆ. ಇದು ಮಾತ್ರ ಸಾಕ್ಷಿಯಾಗಿ ಉಳಕಂಡೈತೆ. ಇದು ಇನ್ನು ಮುಂದೇನೂ ಇರುತ್ತೆ”, ಹಿರೇಬಡಗಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    “ಬರೆಣ್ಣಾ ಸಿಡಿಲೆರಗಿದ ಬಂಡೆ ತೋರೊಣಾ” ಸಿದ್ದಣ್ಣ ಅವಸರಿಸಿದ್ದ. ಎಲ್ಲರೂ ಗಾಡಿ ನಿಲ್ಲಿಸಿದ್ದ ಪಟ್ಟ ಮರಡಿ ಬಳಿಗೆ ನಡೆದು ಗಾಡಿ ಏರಿ ಊರ ದಿಕ್ಕಿಗೆ ಹೊರಟರು. ಗಾಡಿ ಊರ ಸಮಾಪ ಹೋಗಿ ಮತ್ತೆ ಬಡಗಲ ದಿಕ್ಕಿಗೆ ಮುಂದೆ ಹೋಗಿತ್ತು. ಹಾದಿ ಎಂಬುದಿರಲಿಲ್ಲ. ಆದರೂ ಗಾಡಿ ಸಲೀಸಾಗಿ ಸಾಗಿತ್ತು. ಎತ್ತರದ ಮೂಡಲ ಗುಡ್ಡದ ಬುಡದಲ್ಲಿ ಹೆಬ್ಬಂಡೆಯೊಂದು ಮಧ್ಯಕ್ಕೆ ಸೀಳಿ ಎರಡು ಹೋಳಾಗಿತ್ತು. ಅದನ್ನು ಯಾವ ದಿಕ್ಕಿನಿಂದಲೂ ಹತ್ತಲಾಗದಷ್ಟು ಎತ್ತರವಾಗಿ ಗೋಡೆಯಂತೆ ಕಡಿದಾಗಿತ್ತು.

    ಈ ಹೆಬ್ಬಂಡೆಗೆ ಯಾವುದೋ ಕಾಲದಲ್ಲಿ ಬರಸಿಡಿಲೆರಗಿ ಸೀಳಿದೆ ಎಂದು ಎಲ್ಲರೂ ತಿಳಿಸಿದ್ದರು. ಅಲ್ಲಿ ಪಡುವಲ ಗುಡ್ಡದ ಹಿಂದೆ ಕಂಡಿದ್ದಂತಹ ಗಿಡಮರಗಳು ಒತ್ತಾಗಿ ಬೆಳೆದಿದ್ದವು. ಅದನ್ನು ನೋಡಿಕೊಂಡು ಸ್ವಲ್ಪ ದೂರ ಬಡಗಣಕ್ಕೆ ಗಾಡಿ ನಡೆಸಿ ಅಲ್ಲಿ ನಿಲ್ಲಿಸಿ , ಎದುರಿಗೆ ಕಾಣುತ್ತಿದ್ದ ಎತ್ತರದ ಗಿರಿನೆತ್ತಿಯನ್ನು ತಿಮ್ಮಪ್ಪನ ಗುಡ್ಡವೆಂದೂ ಅದರ ನೆತ್ತಿಯಲ್ಲಿ ಒಂದು ಗವಿ ಇರುವುದಾಗಿ ಹಿರೇ ಬಡಗಿಯವರಿಗೆ ತಿಳಿಸಲಾಯಿತು. “ಪಕ್ಕದ ಕಣಿವೆಗೆ ಸಂತೆಕಣಿವೆ ಅಯ್ತ ಕರೀತೀವಿ. ಈ ಕಣಿವೆ ಹತ್ತಿದರೆ ಮೂಡಲ ದಿಕ್ಕಿಗೆ ವಿಶಾಲವಾದ ಬಯಲು ಪ್ರದೇಶ ಕಾಣಿಸುತ್ತೆ. ಒಂದು ಮರಡಿ ಅಥವ ಗುಡ್ಡ ಯಾತ್ತೂ ಇಲ್ಲ”, ಸಿದ್ದಣ್ಣ ವಿವರಿಸಿದ್ದ. “ಆ ಕಣಿವೆಗೆ ಗಾಡಿ ಹೋಗಲ್ಲ ಬರೇ ಕಗ್ಗಲ್ಲ ಗುಂಡು ಐದಾವೆ” ಎಂದೂ ಕೂಡಾ ಆತ ತಿಳಿಸಿದ್ದ.

    ಹಿಂದಿನ‌ ಸಂಚಿಕೆ: 12. ಜಂಗಮಯ್ಯರ ಆಗಮನ

    ಹಗಲೂಟದೊತ್ತಾಗಿತ್ತು. ಗುಡಿಹಳ್ಳಿ ಮೈಲಾರಲಿಂಗ ದೇವರ ಗುಡಿ ಇದಿರಿಗಿರುವ ದೇವರ ಮರಡಿ, ಬೆಟ್ಟದ ಮಲ್ಲಪ್ಪನ ಗವಿ ತೋರಿಸಬೇಕಾಗಿತ್ತು. “ಬರ್ರಿ ಎಲ್ಲಾರು ಗಾಡಿ ಹತ್ಯೆ ಬರಿ. ಊಟ ಮಾಡ್ಕಂಡು ಮೈಲಾರಪ್ಪನ ಗುಡಿ, ಬೆಟ್ಟದ ಮಲ್ಲಪ್ಪನ ಗವಿ ತೋತ್ಸಾನ ಅಣ್ಣಾರಿಗೆ”, ಸಿದ್ದಣ್ಣ ಮುಂದಿನ ಯೋಜನೆಯನ್ನು ತಿಳಿಸಿದ್ದ. “ಸಾಕಪ್ಪಾ ಮುಂದೇನೂ ನೋಡಾದು ಬೇಡ. ಈ ಹೊತ್ತು ರಾತ್ರಿ ಕಳ್ಳು ನಾಳೆ ಬೆಳಿಗ್ಗೆ ನನ್ನ ಕಳಿಸಾ ಏರ್ಪಾಟು ಮಾಡ್ರಿ. ಇಲ್ಲಿಗೆ ನಾಲಕ್ಕು ಹಗಲು ನಾಕು ರಾತ್ರಿ ಹೊತ್ತಾತು”. ಹಿರೇ ಬಡಗಿಯವರು ಸಮಾಧಾನವಾಗಿ ಅಷ್ಟೇ ದೃಢವಾಗಿ ತಿಳಿಸಿದ್ದರು. ಇವರ ಮಾತಿನಿಂದ ಎಲ್ಲರೂ ಮೌನವಾದರು. “ಅವರು ಊರು ಬಿಟ್ಟು ನಾಲ್ಕು ದಿನ ಆಗಿರೋದು ನಿಜ. ಎರಡು ಹಗಲು ಗಾಡಿ ಪಯಣ ಮಾಡಿದಾರೆ. ಪಾಪ ಅವರ ಮನಸ್ಸಿಗೆ ನೋವು ಮಾಡೋದು ಬ್ಯಾಡ”ಎಂದು ಎಲ್ಲರೂ ತೀನಿಸಿದರು.

    “ಗಾಡಿ ನಮ್ಮನೆ ಹತ್ರಕ್ಕೊಡಿಯಪ್ಪಾ” ಯಜಮಾನಪ್ಪರು ಸೂಚಿಸಿದ್ದರು. ಅದರಂತೆ ಗಾಡಿ ಅವರ ಮನೆ ತಲುಪಿ ಎಲ್ಲರೂ ಗಾಡಿ ಇಳಿದರು. ಅದೇ ಸಮಯಕ್ಕೆ ಹೊಲಕ್ಕೆ ಹೋಗಿದ್ದ ಜಂಗಮಯ್ಯರೂ ಅವರ ಹೆಣ್ಣು ಮಕ್ಕಳೂ ಅಲ್ಲಿಗೆ ಆಗಮಿಸಿದ್ದರು. “ಬರ್ರಿ ಬರ್ರಿ ಒಳ್ಳೇ ಸಮಯಕ್ಕೆ ಬಂದ್ರಿ… ಎಲ್ಲಾರೂ ಮುಖ ಕೈಕಾಲು ತೊಳಕಲ್ಲಿ ಊಟ ಮಾಡಾನ. ಇವು ಗುಬ್ಬಿ ಯಜಮಾನು, ನಮಿಗೆಲ್ಲಾ ಆರು ಗಾಡಿ ಕೂಡ್ಲಿಕೊಟ್ಟಿದಾರೆ, ಮತ್ತೆ ದೊಡ್ಡ ಮನಸ್ ಮಾಡಿ ನಮ್ಮೂರಿಗೆ ಬಂದಿದಾರೆ” ಎಂದು ಹಿರೇ ಬಡಗೀರ ಪರಿಚಯವನ್ನು ಜಂಗಮಯ್ಯರಿಗೆ ಮಾಡಿದ್ದರು.

    ಜಂಗಮಯ್ಯರು ಮತ್ತು ಹಿರೇ ಬಡಗಿ ಪರಸ್ಪರ ನೋಡಿಕೊಂಡು ತಮ್ಮ ಹಿಂದಿನ ನೆನಪುಗಳನ್ನು ಕೆದಕಿದ್ದರು. “ನಾನು ಮಳಿಯಪ್ಪಯ್ಯ, ಇವು ಮರುಳಯ್ಯ ಮತ್ತಿವು ಶಿವಲಿಂಗಯ್ಯ, ನಾವು ಮೂಗನಾಯ್ಕನ ಕೋಟೆ

    ಬೆಟ್ಟದಳ್ಳಿಯೋರು. ಅಲ್ಲಿ ಮೂರು ವರದಿಂದ ಬರ. ಊರಾಗ ನರು ಇರಿರಲಿಲ್ಲ. ಎಲ್ಲಾ ಕುಣಿಗಲು, ತುಂಕೂರು ಆಮ್ರ ಕೂಲಿನಾಲಿ ಹುಡಿಕ್ಕಂಡ ಹೋಗಿದ್ರು. ನಮಿಗೆ ಹೆಂಗ್ ಮಾಡಬೇಕೂ ಅಮ್ಲ ಹೊಳೀವಲ್ಲು ಅವಾಗ ಈ ಊರಿನೋರು ವರದಾಗೆ ನಿಮಾಗೆ ಆರು ಹೊಸಾ ಬಂಡಿ ಮಾಡಿದ್ದಾರೆ. ಅಂಗಮ ನಮ್‌ಕಡೆ ಮಾತಾಡತಿದ್ರು, ‘ಇಂಥಾ ಕಾಲದಾಗೆ ವರದಾಗ ಆರು ಬಂಡಿ ಮಾಡೋದೇನೂ ಸಾಮಾನ್ಯ ವಿಚಾರ ಅಲ್ಲ, ಈ ಊರಿಗೆ ಸಮುದ್ರದಂಥಾ ಕೆರೆ ಇರಬೌದು. ಅಲ್ಲಿಗೆ ಹೋಗಿ ಬಿಡಾನ.

    ಅಲ್ಲಿಗೆ ಹೋಗಿ ಇಳವು ಬಳವು ನೋಡಿಕೊಂಡು ತೀರಾನ ಮಾಡಾನ’ ಅಮ್ಮ ದಣೀಯ ನಡಕಂಡ್ ಬಂದ್ವಿ, ಈ ಯಜಮಾನಪ್ಪಾರು ನಮಿಗೆಲ್ಲಾ ಹೊಟ್ಟೆ ತುಂಬಾ ಹಾಲು ಕುಡ್ಲಿ ಊಟ ಹಾಕಿದ್ರು”. ಅಲ್ಲಿದ್ದ ಗೌಡ್ರು ಗೊಂಚಿಗಾರನ್ನ ತೋರಿ “ಈ ಮಾರಾಯರು ಎಣ್ಣೆ ದಿನದಾಗೆ ಮನೆ ಕಟ್ಟಿಕೊಟ್ರು. ಜಮಾನು ಮಾಡಿಕೊಟ್ಟಿದಾರೆ. ಈ ಊರು ಅಂದ್ರೆ ಸಾಮಾನ್ಯದ ಊರಲ್ಲ ಎಂಥೋರು ಬಂದ್ರೂ ಸಾಕುತ್ತೆ ಸಲಪುತ್ತೆ” ಎಂದು ಅಭಿಮಾನದ ಮಾತಾಡಿದ್ದರು.

    “ನಿಮ್ಮೂರು ನೋಡಿದ್ದೀನಿ. ಆದ್ರೆ ನಿಮ್ಮ ಪರಿಚಯ ಇಲ್ಲ. ಈಗ ನೀವು ಈ ಊರೋರೇ ಆಗಿಬಿಟ್ಟಿದ್ದೀರಿ ಸಂತೋಷ. ಎಲ್ಲಿಯಾದ್ರೂ ಸುಖವಾಗಿದೆ ಸಾಕು”, ಹಿರೇ ಬಡಗಿಯವರು ಮಾತಾಡಿದ್ದರು,

    ಹಿಂದಿನ‌ ಸಂಚಿಕೆ: 13. ಮತ್ತೆರಡು ಬಂಡಿ ತಂದರು

    “ಬರಿ ಸ್ವಾಮಿ ತೊಳಕಾಬರಿ. ಊಟ ಮಾಡಾನ”, ಯಜಮಾನಪ್ಪಾರು ಮತ್ತೆ ಆಹ್ವಾನಿಸಿದ್ದರು. “ಅಷ್ಟೋರೆ ಬೆಳಿಗ್ಗೆ ಕಂತೆ ಭಿಕ್ಷಾ ಉಂಡಿದ್ದೀವಿ. ಈಗ್ಗೆ ಎರಡು ತಿಂಗಳಿಂದ ಬೆಳಿಗ್ಗೆ ಒಂದೂಟ ಮತ್ತು ರಾತ್ರಿಗೆ ಒಂದೂಟ, ಇದಕ್ಕೇ ಹೊಂದಿಕೆಂಡ್ ಬಿಟ್ಟಿದೀವಿ. ಇವತ್ಯಾಕೆ ಅದನ್ನ ಮುರಿಯಾನ” ಮಳಿಯಪ್ಪಯ್ಯ ತಮ್ಮ ಪರಿಸ್ಥಿತಿ ಹೇಳಿಕೊಂಡಿದ್ದರು.

    “ಇವೊತ್ತು ನಿಮ್ ದೇಶದ ಬಡಗಿ ಅಷ್ಟೋರು ಬಂದಿದಾರೆ. ಈಗಾಗಲೇ ಹಗಲೂಟದೊತ್ತು ಮಾರೈತೆ ಇವೊತ್ತೊಂದಿನ ನಿಮ್ಮ ವ್ರತ ಮುರೀರಿ, ಅವರ ಸಂಗಡ ಕುಳಿತು ಊಟ ಮಾಡಾನ. ಇಂಥಾ ಸಂದರ್ಭ ನಾಳಿಕ್ಕೆ ಬರಲ್ಲ ಬರ್ರಿ ಬರಿ” ಗೌಡ್ರು ವಿನಂತಿಸಿದ್ದರು. ಈ ಪ್ರೀತಿಯ ಆಹ್ವಾನವನ್ನು ತಿರಸ್ಕರಿಸಲು ಜಂಗಮಯ್ಯರಿಗೆ ಮನಸ್ಸಾಗಲಿಲ್ಲ.

    ಯಜಮಾನಪ್ಪರ ಪಡಸಾಲೆಯಲ್ಲಿ ಎರಡು ಸಾಲು ಕಂಬಳಿ ಪಂಕ್ತಿ ಹಾಸಲಾಗಿತ್ತು. ಗೌಡ್ರು, ಗೊಂಚಿಕಾರರು ಸಿದ್ದಣ್ಣ ಮತ್ತಿಬ್ಬರು ಮತ್ತು ಯಜಮಾನಪ್ಪರು ಒಂದು ಸಾಲಿಗೆ ಕುಳಿತರೆ. ಹಿರೇ ಬಡಗಿಯವರು ಜಂಗಮಯ್ಯರು ಅವರ ಹೆಣ್ಣು ಮಕ್ಕಳು ಎದುರು ಸಾಲಿಗೆ ಕುಳಿತರು. ಎಲ್ಲಾರಿಗೂ ಮುತ್ತುಗದೆಲೆಯ ಇಸ್ತ್ರದ ಮೇಲೆ ಗೌಲಿ ಪಾಯಸ ಹಾಲು ತುಪ್ಪ ಹರಿದಾಡುವಂತೆ ಬಡಿಸಿದ್ದನ್ನು ಊಟ ಮಾಡಿದರು. “ರಾತ್ರಿಗೆ ಸೀ ಅಡಿಗೆ ಮಾಡಬೇಡಿ, ರಾಗಿ ಮುದ್ದೆ ಬದನೆ ಕಾಯಿ ಬಜ್ಜಿ ಮಾಡಿಸಿರಿ, ಉಂಡು ಬಾಳ ದಿನ ಆಗೈತೆ”, ಹಿರೇಬಡಗಿ ವಿನಂತಿಸಿದ್ದರು.

    ಊಟ ಮಾಡಿದ ಎಲ್ಲರೂ ಹಜಾರಕ್ಕೆ ಆಗಮಿಸಿ ಅಲ್ಲಿ ಹಾಸಿದ್ದ ಕಂಬಳಿ ಮೇಲೆ ಕುಳಿತರು. ಗೌನಳ್ಳಿಯ ಬಹುಪಾಲು ಮಂದಿ ತಾಂಬೂಲ ಹಾಕುತ್ತಿರಲಿಲ್ಲ. ಜಂಗಮಯ್ಯರಿಗೆ ಅಭ್ಯಾಸವಿತ್ತು. ಅವರು ಬಾಯೊಳಗೆ ಅಡಿಕೆ ಎಸೆದುಕೊಂಡು ಬಡಗೀರತ್ರ ತಮ್ಮ ಸೀಮೆಯ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಇವರು ವೀಳೇದೆಲೆಗೆ ಸುಣ್ಣ ಸವರಿಕೊಂಡು ಅಡಿಕೆಲೆಯ ತಟ್ಟೆಯನ್ನು ಒಳಗೆ ಕಳಿಸಿದ್ದರು. ಜಂಗಮಯ್ಯರ ಹೆಣ್ಣುಮಕ್ಕಳು ಅಡಿಕೆ ವೀಳೇದೆಲೆ ಹಾಕಿಕೊಂಡಾದ ಬಳಿಕ ತಮ್ಮ ಮನೆಗೆ ಹೋಗಲು ಸಿದ್ಧರಾಗಿದ್ದರು. ಜಂಗಮಯ್ಯರು ಹಿರೇ ಬಡಗೀರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಬಡಗಿಯವರು ಸಮ್ಮತಿಸಿ ಅವರ ಜತೆ ಹೊರಟಿದ್ದರು. ಜತೆಯಲ್ಲಿ ಸಿದ್ದಣ್ಣ ಗುರುಸಿದ್ದಪ್ಪ ತೆರಳಿದ್ದರು.

    ಗುಂಡಾಚಾರಿಯ ಮನೆಹತ್ತಿರ ಹೋದಾಗ ಅವನು ಅದ್ದಗಲ್ಲ ಮೇಲಿಟ್ಟ ಲೋಹವನ್ನು ಬಡಿಯುತ್ತಿರುವ ಸದ್ದು ಕೇಳಿಸಿತ್ತು. “ಗುಬ್ಬಿಯಿಂದ ದೊಡ್ಡ ಬಡಗಿ ಬಂದಿದಾರೆ, ಮನೆ ಬಳಿಗೆ ಬರಬೇಕಂತೆ ಅಮ್ಮ ಹೇಳಿ ಗುಂಡಾಚಾರಿ ಕರಕಂಡು ಬಾರಪ್ಪ” ಅಂತ ಮಳಿಯಪ್ಪಯ್ಯ ಶಿವಲಿಂಗಯ್ಯರಿಗೆ ಸೂಚಿಸಿದ್ದರು. ಅದರಂತೆ ಅವರು ಅತ್ತ ತೆರಳುತ್ತಲೂ ಬಡಿಯುವ ಸದ್ದು ನಿಂತಿತ್ತು. ಇವರೆಲ್ಲಾ ಮನೆ ಬಳಿಗೆ ಹೋಗಿ ಕದ ತೆಗೆದು ಒಳಗೆ ನಡೆದು ಕೂಡುವಷ್ಟರಲ್ಲಿ ಶಿವಲಿಂಗಯ್ಯ ಗುಂಡಾಚಾರಿ ಆಗಮಿಸಿದ್ದರು.

    ಹಿಂದಿನ‌ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ

    ಆಚಾರಿಯನ್ನು ಮನೆಯೊಳಗೆ ಕರೆದ ಮಳಿಯಪ್ಪಯ್ಯ ಅವನು ಒಳ ಬರುತ್ತಲೆ ಕಲ್ಲುಬಂಡೆ ಮೇಲೆ ಕುಳಿತಿದ್ದ ಹಿರೇ ಬಡಗೀರನ್ನು ಪರಿಚಯಿಸಿದ್ದರು. ಮಾಸೆ ಗಡ್ಡಧಾರಿ ಯುವಕನನ್ನು ಕಂಡು ಹಿರೇಬಡಗಿಯವರಿಗೆ ತುಸು ಆಶ್ಚರವೇ ಆಗಿತ್ತು. ಆಚಾರಿಯ ಮುಖದ ಮೇಲಿನ ದೃಢತೆ, ವರ್ಚಸ್ಸುಗಳು ಇಷ್ಟು ದೂರದ ಊರಲ್ಲಿ ಇಂಥವನೊಬ್ಬನಿದ್ದಾನಲ್ಲ ಅಂದುಕೊಂಡು “ನಿಮ್ಮದ್ಯಾವೂರು ಇದೇ ಊರೋ ಇಲ್ಲ ಬೇರೆ ಕಡೇಲಿಂದ ಬಂದಿದೀರೊ”, ಆಚಾರಿಯನ್ನು ವಿಚಾರಿಸಿದರು. ಬಡಗೀರ ಎದುರು ಚಾಪೆ ಮೇಲೆ ಕುಳಿತ ಗುಂಡಾಚಾರಿ “ನನ್ನೆನ್ನು ಗುಂಡಾಚಾರಿ ಅಮ್ಮ, ಚಿಗನಾಯ್ಕನಹಳ್ಳಿ ಕಡೇಲಿಂದ ಬಂದಿದೀನಿ.

    ನಮ್ಮು ದೊಡ್ಡ ಸಂಬಂಧ ಇತ್ತು. ಈಗಲೂ ಇದೆ. ನಾವು ನಾಲ್ಕು ಜನ ಅಕ್ಕಸಾಲಿಕೆ ಮಾಡ್ತಿದ್ದಿವಿ. ಬೇರೆ ಜಾತಿ ಹುಡುಗೀನ ಇಷ್ಟಪಟ್ಟಿದ್ದೆ. ಆಕೆನೂ ನನ್ನ ಇಷ್ಟ ಪಟ್ಟಿದ್ದು. ನಮ್ಮೋರು ವಿರೋಧ ಮಾಡಿದ್ರು “ಇಗಾ ನೋಡಿ ನನ್ನಿಷ್ಟದಂಗೆ ಇರೋಕೆ ಹೊರಟೋಗ್ತಿನಿ ಅಂತ ತಿಳಿಸಿ ನನ್ನ ಹುಡುಗಿ ಕರಕಂಡ್ ಬಂದ್ ಬಿಟ್ಟೆ. ಹುಳಿಯರು ತನಕ ಒಂದು ಗಾಡಿ, ಆಮೇಲೆ ಕೆಂಕೆರೆ ತನಕ ಇನ್ನೊಂದು ಗಾಡಿ ಹತ್ತಿ ಬಂದೆ. ಬಾ ಯಾರಾ- ರೋ ವಿಚಾರಿಸ್ಕಂಡು ಬಂದು ಈ ಊರ ತಲುಪಿದೆ. ಹೊರಟು ಬರಬೇಕಾದ್ರೆ ನಮ್ಮೋರು ಒಬ್ಬರಾದರೂ ಬೇಡ ಅನ್ನಲಿಲ್ಲ. ಎಲ್ಲಿಗೋಗ್ತಿಯ ಅಂತ ಕೇಳಲಿಲ್ಲ. ದೇವರ ಕರುಣೆ, ಈ ಊರಿನ ಜನರೇ ದೇವುಗಳು. ಅನಾಥನಾಗಿ ಬಂದೋನ್ನ ಕೈಲಿಡಿದ್ರು”. ಸಂಕ್ಷಿಪ್ತವಾಗಿ ತನ್ನ ಪೂರೈತಿಹಾಸವನ್ನು ತಿಳಿಸಿದ್ದ. ಅಷ್ಟೊತ್ತಿಗೆ ಮಳಿಯಪ್ಪಯ್ಯರ ಪತ್ನಿ ನಾಲ್ಕು ಲೋಟಾಗಳ ತುಂಬಾ ಬಿಸಿ ಹಾಲು ತಂದು ಹಿರೇ ಬಡಗಿಯವರಿಗೆ ಗುಂಡಚಾರಿ ಮತ್ತು ಸಿದ್ದಣ್ಣ, ಗುರುಸಿದ್ದಪ್ಪರಿಗೆ ನೀಡಿದರು. ಮಳಿಯಪ್ಪ “ಈ ಊರಿನ ಗೌಡ್ರ ಮನೆತನ ಬಾಳ ದೊಡ್ ಮನೆತನ.

    ಗತಿ ಇಲ್ಲ ಅಮ್ಮ ಬಂದೋರ ಕೈಲಿಡಿದು ವಾಸಕ್ಕೆ ಮನೆ ಕಟ್ಟಿಕೊಟ್ರು. ಎಳ್ಳ ಕಡೆ ಜಮೀನು ಮಾಡಿಕೊಟ್ಟಿದಾರೆ. ಈ ಮನೆಗೆ ಬಂದಾಗಿಂದ ದಿನಾ ಬೆಳಿಗ್ಗೆ ಒಂದು ತಂಬಿಗೆ ತುಂಬಾ ನೊರೆಹಾಲು ಕೊಡ್ತಿದಾರೆ. ಮಕ್ಕಿಲ್ಲಾ ಮರಿ ಇಲ್ಲಾ, ಯಾರಿಗೆ ಹಾಲು ಕುಡಿಸನಾ ಅಂದ್ರೆ ನೀವೇ ಕುಡೀರಿ; ನೀವು ಹಾಲು ಕುಡೀಬಾರೆ ಅನ್ತಾರೆ”, ಅಭಿಮಾನದಿಂದ ನುಡಿದರು.

    ಗುಂಡಾಚಾರಿ “ನಮಗೂ ಹಂಗೇನೇ ಯಾರ್ಯಾರೋ ಹಾಲು ಕೊಡ್ತಾರೆ.

    ದುಡ್ ತಗಳಿ ಅಂದ್ರೆ ಎಮ್ಮೆಗೆ ಆಕಳಿಗೆ ಕಾಲುಜರ ಬಾಯಿಜರ ಬರುತ್ತೆ ದುಡ್ಡ ತಗಂಡ್ರೆ ಆಗ್ತಾರೆ” ಎಂದು ಆತನೂ ಊರ ನಿವಾಸಿಗಳ ಉದಾರತೆಯನ್ನು ಮೆಚ್ಚಿ ಮಾತಾಡಿದ್ದ.

    ಹಿರೇ ಬಡಗಿಯವರು ಎರಡು ದಿನದಿಂದ ಗೌಡ್ರು, ಗೊಂಚಿಕಾರರು, ಯಜಮಾನಪ್ಪರು ಮತ್ತು ಸಿದ್ದಣ್ಣ ಮತ್ತಿತರರ ಸ್ನೇಹಪರತೆಯನ್ನು ಸ್ವತಃ ಅನುಭವಿಸಿದ್ದರು. ಮಳಿಯಪ್ಪಯ್ಯ ಮತ್ತು ಗುಂಡಾಚಾರಿಯ ಮಾತಿನ ಸತ್ಯಾಂಶವನ್ನು ಪರಿಶೀಲಿಸುವ ಅಗತ್ಯ ಕಾಣಿಸಿರಲಿಲ್ಲ. ಜತೆಯಲ್ಲಿದ್ದ ಸಿದ್ದಣ್ಣ ಮತ್ತು ಸಿದ್ದಿಂಗಪ್ಪರಿಗೆ “ಇದೇ ನಮ್ಮ ಬದುಕು ಇದರಾಗೇನು ವಿಶೇಷ” ಅಂದುಕೊಂಡಿದ್ದರು.

    “ಈ ಊರ ಸುತ್ತಾ ಗುಡ್ಡ ಐದಾವೆ. ಪಡುವಗಡೇಗೆ ದೊಡ್ಡ ಅಡವಿ. ಅದರ ಮಗ್ಲಾಗೇ ಗುಡ್ಡದ ಸಾಲು, ಇನ್ನ ಟೆಂಕಡೀಕೆ ಮೂಡಲ ದಿಕ್ಕಿಗೆ ಎಂಟತ್ತು ಮೈಲಿ ದೂರದಾಗೆ ಎಳ್ಳು ಮೂರು ಊರು ಇದಾವಂತೆ. ಅವರಾರೂ ಈ ಊರಿಗೆ ಬರೋಲ್ಲ ಇವೂ ಅತ್ತಾಗೆ ಹೋಗೋದಿಲ್ಲ. ಗುಡ್ಡದೊಳಗಿಂದೇ ಒಂದು ಪ್ರಪಂಚ. ಈ ಊರ ಹೆಣ್ಣು ಗಂಡು ಬೆಳಿಗ್ಗೆಯಿಂದ ಸಂಜೆ ತನಕ ಮೈಮುರೆ ದುಡೀತಾರೆ.

    ಸಂಜೆ, ಹೊತ್ತಿಗೆ ಮುಂಚೆ ಮಲಗತಾರೆ, ಮೊದ್ದ ಕೋಳಿ ಕೂಗೂಲು ಎದ್ದು ಬಿಡತಾರೆ. ದೊಡ್ಡುಂಬೋಹೊತ್ತಿಗೆ ಇಡೀ ಊರಿಗೆ ಊರೇ ಸದ್ದಡಗಿ ಬಿಡುತ್ತೆ. ಎಲ್ಲಾರೂ ಹೊಲಕ್ಕೋಗಿ ಬಿಡ್ತಾರೆ. ಅವರನ್ನ ನೋಡಿ ನಾವೂ ಹೊಲಕ್ಕೋಗಿ ಅಚ್ಚಕಟ್ ಮಾಡಿಕೆಂದ್ವಿ, ಹೊಲದ ಸುತ್ತ ಮ್ಯಾರೇಗೆ ಗುಂಡಿ ತೋಡಿ, ಬೇವಿನ ಗಿಡ, ಹುಣಿಸೆ ಗಿಡ ನೆಟ್ ಬೆಳಸ್ತಾ ಇದೀವಿ. ಇಡೀ ಊರಾಗೆ ಈಯಪ್ಪ ಆಚಾರಿದೇ ಬಡಿಯ ಸದ್ದು ಕೇಳ್ಳುತ್ತೆ” ಎಂದು ಊರಿನ ಚಿತ್ರಣವನ್ನು ಬಿಡಿಸಿಟ್ಟಿದ್ದರು.

    ಗುಂಡಾಚಾರಿ “ನಾನು ನಮ್ಮೂರು ಬಿಟ್ಟಿದ್ದು ಒಳ್ಳೇ ಗಳಿಗೇನೋ ಅಥವಾ ಈ ಊರಿಗೆ ಬಂದಿದ್ದು ಒಳ್ಳೆ ಗಳಿಗೇನೋ ಗೊತ್ತಿಲ್ಲ. ನನ್ನ ಕುಲುಮೇಗೆ ದಿನಾ ಚಿನ್ನ, ಬೆಳ್ಳಿ, ಹಿತ್ತಾಳೆ ಕರಗುಸ್ತೀನಿ. ಅದ್ದಗಲ್ಲ ಮೇಲೆ ಬಡೀತಿದ್ದೀನಿ. ಈ ಊರಜನ ಅಂಗೆ ನನಿಗೆ ಕೆಲ್ಲಾ ಕೊಟ್ಟಿದಾರೆ” ಅಂತ ಸಂತೃಪ್ತಿಯಿಂದ ಮಾತಾಡಿದ್ದ.

    ಹಿರೇ ಬಡಗಿಯವರಿಗೆ ಇವರಿಂದ ಗೌನಹಳ್ಳಿಯ ಪೂರ ಚಿತ್ರ ಸೃಷ್ಟಿಯಾಗಿತ್ತು. “ಈವಾಗ ಈ ಊರಿನ ಜನ ಸಂತೃಪ್ತಿ ಜೀವನ ಮಾಡ್ತಿದಾರೆ. ಇದು ಹಿಂಗೇ ಎಷ್ಟು ದಿನ ನಡೆಯುತ್ತೋ ಯಾರು ಬಲ್ಲರು. ಹಿಂಗೇ ನಡಕಂಡು ಹೋಗಲಿ” ಅಂದುಕೊಂಡಿದ್ದರು.

    ಗುಂಡಾಚಾರಿ ತನ್ನ ಮನೆಗೆ ಆಹ್ವಾನಿಸಿದ್ದರಿಂದ ಜಂಗಮಯ್ಯರ ಮನೆಯಿಂದೆದ್ದು ಆಚಾರಿಯ ಕೆಲಸದ ತಾವು ಬಂದರು. ಅಲ್ಲಿ ಗುಂಡಾಚಾರಿಯ ಯುವ ಪತ್ನಿ ಕುಬುಸದ ಕಣವನ್ನ ಕತ್ತರಿಸಿ ಜೋಡಿಸಿ ಹೊಲಿಯುತ್ತಿದ್ದಳು.
    ಆಕೆಯನ್ನು ನೋಡುತ್ತಲೇ ಆಚಾರಿಯ ಪುಣ್ಯವೊ ಈ ತಾಯಿಯ ಪುಣ್ಯವೋ ಅನುರೂಪ ದಾಂಪತ್ಯದ ಬಡಗಿ ಅಂದುಕೊಂಡಿದ್ದರು. ಆಚಾರಿ ಕೆಂಪು ವಸ್ತ್ರವನ್ನು ಹಾಸಿ ಅದರ ಮೇಲೆ ತಾನು ತಯಾರಿಸಿದ್ದ ಕೆಲವು ಒಡವೆಗಳು, ಎರಡು ದೇವರ ಮುಖಪದ್ಮಗಳನ್ನು ಹರಡಿ ತೋರಿಸಿದ್ದ. ಆಚಾರಿಯ ಕೈ ಚಳಕದಿಂದ ತಯಾರಾಗಿದ್ದ ಆಭರಣಗಳು ಮೆಚ್ಚುಗೆಯಾಗಿದ್ದವು. ಎರಡು ಹಿತ್ತಾಳೆಯ ಮುಖಪದ್ಮಗಳು ಹೆಣ್ಣು ದೇವರಾದರೂ ಭಿನ್ನ ಭಿನ್ನ ರೀತಿಯಲ್ಲಿದ್ದವು. ಮುಖಪದ್ಮಗಳ ಕಣ್ಣುಗಳ ವ್ಯತ್ಯಾಸವನ್ನು ಹಿರೇ ಬಡಗಿ ಅರಿಯದಾದರು.

    ಗುಂಡಾಚಾರಿ ಒಂದು ಮುಖಪದ್ಮವನ್ನು ಕೈಲಿಡಿದು “ಇದು ಮಾರಿದೇವತೆಯದು. ಈಕೆ ಉಗ್ರ ಸ್ವರೂಪಿಣಿ. ಆದ್ದರಿಂದ ಈಕೆಯ ಕಣ್ಣುಗಳಲ್ಲಿ ಉಗ್ರತೆ ಇದೆ. ಇದು ಚೌಡೇಶ್ವರಿ ಅಮ್ಮನದು. ಈಕೆಯದು ಶಾಂತ ಸ್ವಭಾವ, ಜಗದಕ್ಷಕಿ ಈಕೆ. ಅದರಿಂದ ಈಕೆಯ ಕಣ್ಣುಗಳಲ್ಲಿ ಈ ಭಾವನೆ ವ್ಯಕ್ತವಾಗುತ್ತಿದೆ” ಎಂದು ವಿವರಿಸಿದ್ದ. “ಇವನ್ನೆಲ್ಲಾ ನೀನು ಹೆಂಗೆ ಭಾವನೆ ಮಾಡ್ಕೊತೀಯ, ಬಾಳ ಕಷ್ಟಾಪ್ಪ”, ಹಿರೇ ಬಡಗಿ ವಿಸ್ಮಯ ಪಟ್ಟುಕೊಂಡಿದ್ದರು. “ಅಷ್ಟೋರೆ ಅದು ಒಂದು ತಪಸ್ಸು. ಸ್ನಾನ ಮಾಡಿ ಪೂಜೆ ಮಾಡ್ಕಂಡು ಈ ಮುಖಪದ್ಮಗಳನ್ನು ಮನಸ್ಸಲ್ಲಿ ಭಾವಿಸ್ಕಂಡು ಮುಖಪದ್ಮದ ಹಿಂದಿನಿಂದ ಮೂಡಿಸಬೇಕು. ಆರಗು ಕರಗಿದಾಗ ಅಮ್ಮನ ಮುಖ ಕಾಣುಸುತ್ತೆ”, ಗುಂಡಾಚಾರಿ ತನ್ನ ಕಸುಬಿನ ಅಂತಃಶಕ್ತಿಯನ್ನು ತಿಳಿಸಿದ್ದ.

    ಬಡಗಿಯವರು ತಾವು ‘ಗುಂಭದಲ್ಲಿ ಆರೇಕಾಲು ಕೂಡಿಸುವಾಗ ಇದೇ ತನ್ಮಯತೆ ಏಕಾಗ್ರತೆ ಬೇಕಾಗ್ತವೆ’ ಅಂದುಕೊಂಡಿದ್ದರು. ಸಿದ್ದಿಂಗಪ್ಪ ಮನೆಯಲ್ಲಿ ಕೆಲಸ ಇರುವುದಾಗಿ ತಿಳಿಸಿ ತಮ್ಮ ಮನೆಯತ್ತ ನಡೆದಿದ್ದ. ಸಿದ್ದಣ್ಣ ಮತ್ತು ಹಿರೇ ಬಡಗಿಯವರು ಕಮ್ಮಾರಟ್ಟಿ ಬಳಿ ಊರ ಜನ ಸೇರಿರುವುದನ್ನು ನೋಡಿಕೊಂಡು, ಅಲ್ಲಲ್ಲಿ ಚಪ್ಪರದಡಿಯಲ್ಲಿ ನಿರಿಸಿದ್ದ ಗಾಡಿಗಳ ಆರೇಕಾಲು, ಹೊಟ್ಟೆಮರಗಳನ್ನು ಕೈಯಿಂದ ಬಡಿದು ಸಮಾಧಾನ ಪಟ್ಟುಕೊಂಡು ಗೌಡರ ಮನೆ ತಾವು ಬಂದರು.

    ಅಲ್ಲಿ ಗೌಡರು, ಗೊಂಚಿಕಾರರು, ಯಜಮಾನಪ್ಪರು ಕುಳಿತು ನಾಳೆ ಬೆಳಿಗ್ಗೆ ಹಿರೇ ಬಡಗೀರನ್ನು ಎಷ್ಟೊತ್ತಿಗೆ ಕಳಿಸಬೇಕು ವಿಚಾರ ಕುರಿತು ಮಾತಾಡುತ್ತಿದ್ದರು. “ಅಯ್ಯೋರೆ ನಾಳೆ ಬೆಳಿಗ್ಗೆ ನಸುಕಿನಲ್ಲಿ ಎದ್ದು ಬಿಡ್ರಿ ಗಾಡಿ ಮೇಲೆ ನಿಮ್ಮನ್ನ ಹಿರಿಊರಿಗೆ ಬಿಡತೀವಿ. ಅಲ್ಲಿಂದ ನೀವು ಬೆಂಕಿ ಹದೆ ಬಸ್ಸಿನಾಗೆ ತುಮಕೂರಿಗೆ ಹೋಗಿ, ಅಲ್ಲಿಂದ ನಿಮ್ಮೂರಿಗೆ ಜಟಕಾಗಾಡೇಗೆ ಹೋಗಬೌದು. ನಿಮ್ಮ ಜತೀಗೆ ಯಾರಾನ ಬರಿ ಅಂದ್ರೆ ನಮ್ಮ ಸಿದ್ದಣ್ಣ ಬತ್ತಾನೆ. ನಿಮ್ಮನ್ನ ತುಮಕೂರಿಗೆ ತಲುಪಿಸಿ ಜಟಕಾಗಾಡಿ ತಾಬಂದ್ ಮಾಡಿ ಹಿಂದಕ್ಕೆ ಬತ್ತಾನೆ”.

    ಗೌಡ್ರು ತಮ್ಮ ಏರ್ಪಾಡನ್ನು ತಿಳಿಸಿದ್ದರು. ಹಿರೇ ಬಡಗಿಯವರು “ಹಿರಿಯೂರಾಗೆ ಬಸ್ ಹತ್ತಿದರೆ ತುಮಕೂರಿಗೆ ಹೋಗ್ತಿನಿ. ಅಲ್ಲಿಂದ ಜಟಕಾಗಾಡಿ ಸಿಗತಾವೆ. ಜತೀಗೆ ಯಾರೂ ಬರೋದು ಬೇಡ. ಹಿರಿಯೂರಿಗೆ ತಲುಪುಸ್ತೀರಲ್ಲಾ ಅಷ್ಟೇ ಸಾಕು” ಅಂದಿದ್ದರು.

    ಹಿರೇ ಬಡಗಿಯವರಿಗೆ ಅವರ ಕೋರಿಕೆಯಂತೆ ರಾತ್ರಿ ರಾಗಿ ಮುದ್ದೆ ಬದನೆಕಾಯಿ ಬಜ್ಜಿ ಮಾಡಿಸಿದ್ದರು ಯಜಮಾನಪ್ಪ, ಊಟ ಮಾಡಿ ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಮಲಗಿದ್ದರು.

    ಮೊದಲ ಕೋಳಿ ಕೂಗುತ್ತಲೆ ಗೌಡ್ರು, ಗೊಂಚಿಗಾರು ಮತ್ತು ಸಿದ್ದಣ್ಣ ಎಲ್ಲರೂ ಎದ್ದು ಯಜಮಾನಪ್ಪರ ಮನೆಗೆ ಆಗಮಿಸಿ ಹಿರಿಯೂರಿಗೆ ತೆರಳಲಿರುವ ಗಾಡಿ ಅಚ್ಚಿಗೆ ಕೀಲೆಣ್ಣೆ ಸವರಿ ರೊಟ್ಟಿ, ಕೆಂಪಿಂಡಿ, ಬುತ್ತಿ ಮತ್ತು ತುಪ್ಪದ ಗಿಂಡಿಗಳನ್ನು ತಮ್ಮ ಮನೆಗಳಿಂದ ತರಿಸಿಕೊಂಡಿದ್ದರು. ನಾಕೈದು ಮನೆಗಳ ರೊಟ್ಟಿ ಗಂಟುಗಳನ್ನು ಬಿಚ್ಚಿ, ಒಯ್ಯಲು ಸುಲಭವಾಗುವಂತೆ ಒಂದೇ ಗಂಟು ಕಟ್ಟಿದರು.

    ಎರಡನೇ ಜಾವದ ಕೋಳಿ ಕೂಗುವ ಹೊತ್ತಿಗೆ ಮತ್ತು ಯಜಮಾನಪ್ಪರ ಮನೆಯಲ್ಲಿನ ಸಡಗರದ ಸದ್ದಿಗೆ ಎಚ್ಚರಾದ ಹಿರೇ ಬಡಗಿಯವರು ಎದ್ದು ಹೊರಗೆ ಬಂದು ಮೂತ್ರ ವಿಸರ್ಜನೆ ಮಾಡಿ ಮೂಡಲ ದಿಕ್ಕಿಗೆ ನೋಡಿದರೆ ಇನ್ನೂ ಬೆಳ್ಳಿ ಮೂಡಿರಲಿಲ್ಲ.

    ಯಜಮಾನಪ್ಪರು ಇವರಿಗೆ ನಮಸ್ಕರಿಸಿ “ಅಣ್ಣೂರೇ ಬೆಳ್ಳಿ ಆಗಲೇ ಮೂಡೈತೆ. ಮೂಡಲ ಗುಡ್ಡ ಅದಕೆ ಮರೆಯಾಗೈತೆ. ಬರ್ರಿ ಮುಖ ತೊಳಕಾಬರಿ” ಎಂದು ಬಚ್ಚಲಿಗೆ ಆಹ್ವಾನಿಸಿದರು. “ನೀರು ಕಾದೈದಾವೆ ಮೈ ತೊಳಕಂಡ್ ಬಿಡ್ರಿ” ಎಂದೂ ಕೂಡಾ ತಿಳಿಸಿದ್ದರು. “ಬೇಡ ಬೇಡ ಊರಿಗೆ ಹೋಗಿ ತೊಳೀತೀನಿ” ಅಂದು ಮುಖ ಕೈಕಾಲು ತೊಳೆದು ಬಂದರು.

    ಹಜಾರದಲ್ಲಿ ಆಸೀನರಾಗಿದ್ದ ಗೌಡ್ರು, ಗೊಂಚಿಕಾರು, ಸಿದ್ದಣ್ಣ ಮತ್ತೊಂದಿಬ್ಬರು ಹಿರೇ ಬಡಗೀರನ್ನ ಅಲ್ಲಿಗೆ ಕರೆದು ಅವರು ಕುಳಿತ ಮೇಲೆ ವೀಳೇದೆಲೆ ಅಡಿಕೆ ಸಮೇತ ಕೆಲವು ಬೆಳ್ಳಿ ರೂಪಾಯಿಗಳನ್ನು ಅವರಿಗೆ ಎತ್ತಿ- ಕೊಟ್ಟರು. “ಹೆಹೆ ಇದೆಲ್ಲ ಏನೂ ಬೇಡ. ಮೂರುದಿನ ನಿಮ್ಮ ಮನೆಯಾಗೆ ಉಂಡಿದೀನಿ. ನಿಮ್ಮ ಪ್ರೀತಿಗೆ ನಾನೇನೂ ಕೊಡಾಕಾಗಲ್ಲ ಬೇಡ ಬೇಡ” ಅಂದರು. ಯಜಮಾನಪ್ಪಾರು “ತಗಳ್ಳಿ ತಗಳಿ ಬಸ್ ಛಾರ್ಜ್ ಕೊಟ್ಟಿದ್ದೀವಿ ಅಷ್ಟೆ” ಅಂದರು. ಹಿರೇ ಬಡಗೀರಿಗೆ ಮುಂದೆ ಮಾತಾಡಲು ಆಗಲಿಲ್ಲ.

    “ಅಷ್ಟೋರೆ ಬರ್ರಿ ಗಾಡಿ ಹತ್ತು ಬರಿ” ಎಂದು ಅವರನ್ನು ಗಾಡಿ ಬಳಿಗೆ ಕರೆತಂದು ಹತ್ತಿಸಿದರು. “ಇಷ್ಟೊಂದು ಗಂಟು ಯಾಕೆ? ಇವನ್ನೆಲ್ಲಾ ಹೆಂಗೆ ಒಯ್ಯಲಿ”, ಗಾಡಿಯಲ್ಲಿದ್ದ ರೊಟ್ಟಿ ಬುತ್ತಿ ಗಂಟುಗಳನ್ನು ನೋಡಿ ಮಾತಾಡಿದ್ದರು. “ನಿಮಗೇನೂ ತ್ರಾಸಾಗಲ್ಲ, ಗಾಡಿಯಿಂದ ಬಸ್‌ಗೆ ಹಾಕ್ತಿವಿ, ತುಮಕೂರಾಗೆ ಇಳಿಸ್ಕಂಡು ಜಟಕಾಗಾಡೇಗೆ ಹಾಕ್ಯಂಡ್ ಬಿಡಿ. ಸರಿಹೋಗುತ್ತೆ”, ಸಿದ್ದಣ್ಣ ಮಾತಾಡಿ ಗಾಡಿ ಮುಂದೆ ಚಲಿಸಿದ್ದ. ಗಾಡಿ ಹಿಂದೆ ಗೌಡ್ರು, ಗೊಂಚಿಕಾರು ಇನ್ನೊಂದಿಬ್ಬರು ಓಣಿಬಾಯಿ ತನಕ ಬಂದಿದ್ದರು.

    ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು

    ಓಣಿಬಾಯಿ ತಲುಪುವ ಸಮಯಕ್ಕೆ ಮಳಿಯಪ್ಪಯ್ಯ ಗುಂಡಾಚಾರಿ ಧಾವಿಸಿ ಬಂದು ಎಲ್ಲರೂ ಕೈ ಎತ್ತಿ ನಮಸ್ಕರಿಸಿ ಹಿರೇ ಬಡಗೀರನ್ನು ಬೀಳ್ಕೊಟ್ಟಿದ್ದರು. ಹಿರೇಬಡಗೀರಿಗೆ ಕಣ್ಣು ಮಂಜಾಗಿದ್ದವು. ಅವರೂ ಗಾಡಿಯಲ್ಲಿ ಎದ್ದು ನಿಂತು ಎಲ್ಲರಿಗೂ ಕೈ ಜೋಡಿಸಿದ್ದರು. ಮೂಡಲ ಗುಡ್ಡದ ಮೇಲಕ್ಕೆ ಬಂದಿದ್ದ ಬೆಳ್ಳಿ ಮೂಕ ಸಾಕ್ಷಿಯಾಗಿತ್ತು.

    ಗಾಡಿಯಲ್ಲಿದ್ದ ಸಿದ್ದಿಂಗಪ್ಪ ಮಗುದೊಬ್ಬರು ಸುಮ್ಮನೇ ನೋಡಿದ್ದರು. ತಮ್ಮನ್ನು ಬೀಳ್ಕೊಟ್ಟಿದ್ದ ಗೌಡ್ರು, ಗೊಂಚಿಕಾರರು, ಯಜಮಾನಪ್ಪಾರು ಮತ್ತು ಜಂಗಮಯ್ಯರು ನಮಸ್ಕರಿಸಿದ್ದ ಹಿರೇ ಬಡಗಿಯವರಿಗೆ ಓಣಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮರಗಿಡಗಳ ರೆಂಬೆಕೊಂಬೆಗಳು ತಲೆಗೆ ತಗುಲಿದ್ದರಿಂದ ಗಾಡಿಯಲ್ಲಿ ಕುಳಿತುಕೊಂಡರು. ನಸುಕಿನಲ್ಲಿ ಬೀಳ್ಕೊಂಡಿದ್ದರಿಂದ ಯಾರಾರ ಮುಖಭಾವ ಹೇಗಿತ್ತು ಎಂದು ನೋಡಲಾಗಿರಲಿಲ್ಲ. ಗಾಡಿ ಕಲ್ಲುಂಡಿ ಬಳಿಗೆ ಬಂದಾಗ ಸಿಲ್ಲಿಂಗಪ್ಪ ಮತ್ತು ಇನ್ನೊಬ್ಬಾತ ಒಣಗಿದ್ದ ಈಚಲಗರಿಗಳಿಗೆ ಬೆಂಕಿ ಕಾಣಿಸಿ ಬೆಳಕು ನೀಡಿದ್ದರು. ಕಳ್ಳಣಿವೆಯನ್ನು ಸಲೀಸಾಗಿ ದಾಟಿದ್ದರು.

    ಈಚಲಹಳ್ಳ ತಲುಪುವ ಸಮಯಕ್ಕೆ ಬೆಳ್ಳಂಬೆಳಕಾಗಿತ್ತು. ಬೆಳಗಿನ ನಿತ್ಯಕರಗಳನ್ನು ತೀರಿಸಲು ಇದೇ ಸರಿಯಾದ ಸ್ಥಳವೆಂದು ಗಾಡಿ ನಡೆಸುತ್ತಿದ್ದ ಸಿದ್ದಣ್ಣ ಎತ್ತುಗಳ ಪಪ್ಪಿರಿದು ಗಾಡಿ ನಿಧಾನ ಮಾಡಿದ. ಹಿಂದಿನಿಂದ ಗಾಡಿ ಇಳಿದು ಬಂದ ಸಿದ್ದಿಂಗಪ್ಪನಿಗೆ “ನೀರು ಮುಟ್ಟಿಬರಿ” ಎಂದು ಸೂಚಿಸಿ ತಾನೂ ಗಾಡಿ ಇಳಿದು ಹಿರೇಬಡಗಿಯವರಿಗೆ “ಅಣ್ಣಾ ನೀರಕಡೀಕೋಗಾಕೆ ಮುಂದೆ ಜಾಗ ಇಲ್ಲ” ಎಂದು ಹೇಳುತ್ತಲೇ ಅವರೂ ಗಾಡಿ ಇಳಿದು ಈಚಲ ಗಿಡಗಳ ಮರೆಯಲ್ಲಿ ಹೋದರು, ಎತ್ತುಗಳ ಕೊಳ್ಳರಿದು ಗಾಡಿ ನೊಗಕ್ಕೆ ಹಗ್ಗ ತೊಡರಿಸಿ ತಾನೂ ಇನ್ನೊಂದು ದಿಕ್ಕಿನಲ್ಲಿ ಮರೆಯಾದ.

    ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಗಾಡಿ ಬಳಿ ಬರುತ್ತಲೇ ಎಲ್ಲರನ್ನೂ ಗಾಡಿ ಹತ್ತಿಸಿ, ಎತ್ತುಗಳನ್ನು ಗಾಡಿಗೆ ಹೂಡಿ, ಮೂಕಿನ ಮೇಲೆ ಕುಳಿತು ಗಾಡಿ ಮುಂದೆ ನಡೆಸಿದ. ಎತ್ತುಗಳನ್ನು ಅಧಿಸುತ್ತಾ ಚುರುಕು ಮುಟ್ಟಿಸುತ್ತಾ ಚಿಕ್ಕುಂಬೊತ್ತಿಗೆ ಹಿರಿಯೂರು ತಲುಪಿದರು. ಗಾಡಿಯನ್ನು ನೇರವಾಗಿ ಬಸ್ಸು ನಿಲ್ಲಿಸುವ ಸ್ಥಳಕ್ಕೆ ಹೊಡೆದು ರೊಟ್ಟಿ ಬುತ್ತಿಯ ಗಂಟನ್ನು ಗಾಡಿಯಿಂದಿಳಿಸಿದರು. ಹಿರೇ ಬಡಗಿಯವರು ಸುತ್ತ ಮುತ್ತ ನೋಡಿ ಸಿದ್ದಣ್ಣ ಮತ್ತು ಸಿಲ್ಲಿಂಗಪ್ಪ ಮಗದೊಬ್ಬರನ್ನು ನಿದ್ದಿಕಾರ ಭಾವದಿಂದ ನೋಡಿದರು.

    “ಬಸ್ಸು ತುಮಕೂರಿಗೆ ತಲುಪೋತ್ತಿಗೆ ಹಗಲೂಟದ ಹೊತ್ತಾಗಿ ಬಿಡುತ್ತೆ. ಒಂದೀಟು ಬುತ್ತಿ ಅನ್ನ ಉಂಡು ಬಿಡ್ರಿ”, ಸಣ್ಣ ಬುತ್ತಿಗಂಟನ್ನು ತೋರಿಸಿ ವಿನಂತಿಸಿದ. ಹಿರೇ ಬಡಗೀರಿಗೆ ಊಟ ಮಾಡಲು ಮನಸ್ಸಾಗಲಿಲ್ಲ. “ಇಲ್ಲಬಿಡಪ್ಪ” ಅಂದರು. ಸಿದ್ದಣ್ಣ ಬಡಗೀರ ಮುಖವನ್ನೇ ಗಮನಿಸುತ್ತಿದ್ದ. ಅವರು ನಿರ್ಲಿಪ್ತರಂತೆ ಕಂಡಿದ್ದರು.

    ಅಗಾ ಇಗಾ ಅನ್ನುವುದರೊಳಗೆ ಬಸ್ಸು ಬಸುಗುಡುತ್ತಾ ಆಗಮಿಸಿತ್ತು. ಸಿದ್ದಣ್ಣ ಸಿಲ್ಲಿಂಗಪ್ಪ ಕೂಡಲೇ ರೊಟ್ಟಿ ಬುತ್ತಿಗಂಟನ್ನು ಬಮ್ಮೊಳಗೆ ಸೇರಿಸಿ ಪಕ್ಕದ ಜಾಗದಲ್ಲಿ ಬಡಗೀರನ್ನು ಕೂಡಿಸಿದರು. ಎಷ್ಟು ಕಷ್ಟಪಟ್ಟರೂ ಮುಖದಲ್ಲಿ ನಗೆ ಮೂಡಿರಲಿಲ್ಲ, ಬಡಗೀರಿಗೆ. ಬರೀ ಕೈ ಎತ್ತಿ ನಮಸ್ಕರಿಸಿದ್ದರು. ಸಿದ್ದಣ್ಣ ಸಿಲ್ಲಿಂಗಪ್ಪರು ಮುಗುಳ್ಳಗೆಯಿಂದ ಕೈ ಬೀಸಿದ್ದರು, ಬಸ್ಸು ಕುಂಯ್ ಗುಡುತ್ತ ಹೊರಟೇಬಿಟ್ಟಿತ್ತು. ಕೆಲವು ಗಜ ದೂರ ಬಸ್ಸಿನ ಜತೆಯಲ್ಲೇ ನಡೆದು ಹಿರೇ ಬಡಗೀರಿಗೆ ಬೀಳ್ಕೊಡುಗೆ ನೀಡಿ ನಿಂತರು.

    ಬಸ್ಸು ಸೀರಾ ರಸ್ತೆಯಲ್ಲಿ ಮುಂದೆ ಚಲಿಸಿತ್ತು. ಬಡಗೀರನ್ನು ಬೀಳ್ಕೊಟ್ಟು ಸಿದ್ದಣ್ಣ ಸಿಲ್ಲಿಂಗಪ್ಪ ಒಂದೀಟೀಟು ಬುತ್ತಿ ಉಂಡು ಗಾಡಿಕಟ್ಟಿ ಊರ ಹಾದಿ ಹಿಡಿದರು. ಹಿರೇಬಡಗೀರು ಮಾತೇ ಆಡಲಿಲ್ಲ. ಸುಮ್ಮನೆ ಕೈ ಎತ್ತಿದ್ದರು. ಅವರು ಏನು ಯೋಚಿಸುತ್ತಿದ್ದರೋ ಸಿದ್ದಣ್ಣ ಗುರುಸಿದ್ದಪ್ಪರಿಗೆ ಅರ್ಥ ಆಗಿರಲಿಲ್ಲ. ಊರಿಗೆ ತೆರಳುವ ದಾರಿಯಲ್ಲಿ ಎತ್ತುಗಳು ನಡೆದಿದ್ದವು.

    Click to comment

    Leave a Reply

    Your email address will not be published. Required fields are marked *

    More in ಸಂಡೆ ಸ್ಪಷಲ್

    To Top