ಹೊಸದುರ್ಗ
ಕುಂಚಿಟಿಗ ಮಠಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ | ಶ್ರೀ ಶಾಂತವೀರ ಸ್ವಾಮೀಜಿ ಅವರಿಂದ ಸನ್ಮಾನ
CHITRADURGA NEWS | 22 DECEMBER 2024
ಹೊಸದುರ್ಗ: ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭಾನುವಾರ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ ನೀಡಿ ಶ್ರೀ ಶಾಂತವೀರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಮೆದೇಹಳ್ಳಿ ಅಂಡರ್‍ಪಾಸ್ ಇನ್ನುಮುಂದೆ ಜಯದೇವ ವೃತ್ತ(ಸರ್ಕಲ್)
ಇದೇ ವೇಳೆ ಶ್ರೀಗಳ ಆಶೀರ್ವಾದ ಪಡೆದು, ಗೌರವಿಸಿದರು. ಶಾಸಕರನ್ನು ಮಠದಿಂದ ಶ್ರೀಗಳು ಹಾಗೂ ಭಕ್ತರು ಗೌರವಿಸಿ ಸನ್ಮಾನಿಸಿದರು.
ಹೊಸದುರ್ಗದಲ್ಲಿ ವಧು-ವರರ ಸಮಾವೇಶ:
ಇದೇ ವೇಳೆ ನಡೆದ ಸಭೆಯಲ್ಲಿ, ಪ್ರತಿ ವರ್ಷ ನಡೆಯುವ ಸಂಗಮೇಶ್ವರ ಜಯಂತಿ ಕಾರ್ಯಕ್ರಮವನ್ನು ಈ ವರ್ಷ ಹೊಸದುರ್ಗದಲ್ಲೇ ವಧು-ವರರ ಸಮಾವೇಶವಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.
ಇದನ್ನೂ ಓದಿ:ವಾಣಿವಿಲಾಸ ಸಾಗರದಲ್ಲಿ 29.74 ಟಿಎಂಸಿ ನೀರು ಜಮಾವಣೆ
2009 ರಿಂದ ಪ್ರತಿ ತಿಂಗಳು ನಡೆಯುತ್ತಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ಪ್ರತಿ ತಿಂಗಳ 10ನೇ ತಾರೀಖಿನಂದು ಪ್ರತಿ ತಿಂಗಳು ಒಂದೊಂದು ಹಳ್ಳಿಯಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಎಸ್.ಲಿಂಗಮೂರ್ತಿ, ಗುರುಸ್ವಾಮಿ, ಕಲ್ಕೆರೆ ಶೇಖರಪ್ಪ, ದ್ಯಾಮಣ್ಣ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ತಂಡಗದ ಕಲ್ಲೇಶಣ್ಣ, ತಣಿಗೆಕಲ್ಲು ಲೋಕೇಶ್, ಕೋಡಿಹಳ್ಳಿ ಧರಣಪ್ಪ, ಮಂಜುನಾಥ್ ಇತರರಿದ್ದರು.