Connect with us

    Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ

    ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ

    ಹೊಸದುರ್ಗ

    Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ

    CHITRADURGA NEWS | 13 OCTOBER 2024

    ಹೊಸದುರ್ಗ: ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ತಾಯಮ್ಮದೇವಿ, ಶ್ರೀ ವೀರನಾಗಪ್ಪಸ್ವಾಮಿ ಹಾಗೂ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿಯ ಜಲಧಿ ಉತ್ಸವ(Jaldhi festival)ದಲ್ಲಿ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

    ಕ್ಲಿಕ್ ಮಾಡಿ ಓದಿ: Bichchugatti Bharamanna Nayaka; ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ

    ನಂತರ ಆಶೀರ್ವಚನ ನೀಡಿದ ಶ್ರೀಗಳು, ಕುಂಚಿಟಿಗ ಜನಾಂಗ ಜಾತ್ರೆಯಿಂದ ಜಾಗೃತರಾಗಿ ಹೋರಾಟದಿಂದ ಮೀಸಲಾತಿ ಪಡೆಯಿರಿ, ದೇವರಿಗೆ ಜಲದಿಂದ ಶುದ್ದಿ ಮಾನವನಿಗೆ ಆತ್ಮನಿವೇದನೆಯಿಂದ ಸುದ್ದಿ ಎಂದು ತಿಳಿಸಿದರು.

    ಬುಡಕಟ್ಟು ಸಂಪ್ರದಾಯದಂತೆ ಜಲಧಿ ಉತ್ಸವವು ನಡೆದು ದೇವರುಗಳನ್ನು ಕರೆದುಕೊಂಡು ಬಂದು ಜಲದ ಬಾವಿಯ ಪಕ್ಕ ಆಸೀನ ಮಾಡಿ ಆ ಜಲದಿಂದ ದೇವರುಗಳಿಗೆ ಪ್ರೋಕ್ಷಣೆ ಮಾಡಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ, ಹಾಗೆಯೇ ಮಾನವರಾದ ನಾವು ಮಾನವೀಯತೆಯ ಜಲದಿಂದ ಮಾನವತ್ವ, ದಿವ್ಯತ್ವವನ್ನು ಬೆಳೆಸಿಕೊಂಡು ಸಮಾಜದಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವಂತ ವ್ಯಕ್ತಿತ್ವ ರೂಪಿಸಬೇಕು.

    ಜಲಧಿ ಉತ್ಸವ ಮಾಡಿ ಖುಷಿಪಟ್ಟಂತೆ ಮನೋತ್ಸಹವನ್ನು ಹೆಚ್ಚಿಸಿಕೊಂಡು ಸಂತೋಷ ಕೊಡುವುದೇ ಆಧ್ಯಾತ್ಮ ಆದ್ಯರು ನಮಗೆ ಕೊಟ್ಟ ಸಾಂಸ್ಕೃತಿಕ ಬಳುವಳಿಯನ್ನು ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಸೊಬಗನ್ನು ಸಂಸ್ಕಾರದ ಜೀವನವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಬುಡಕಟ್ಟು ಸಮುದಾಯಗಳಾದ ಕುಂಚಿಟಿಗ, ಯಾದವ, ಕುರುಬ, ನಾಯಕ ಸೇರಿದಂತೆ ಇತರೆ ಸಮುದಾಯಗಳಲ್ಲಿ ಪ್ರತಿವರ್ಷ ದೇವರನ್ನು ಜಲದ ಬಳಿಗೆ ತೆಗೆದುಕೊಂಡು ಜಲಧಿ ಮಾಡುವುದು.

    ಕ್ಲಿಕ್ ಮಾಡಿ ಓದಿ: Folk art fair; ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ | ರಾಜಬೀದಿಯಲ್ಲಿ ಸಾಗಿದ ಶರಣರು

    ಬುಡಕಟ್ಟು ಸಂಪ್ರದಾಯದ ಜಾತ್ರೆಯಂತೆ ಸೇರಿದ ಜನಗಳು ಬದುಕಿನ ತಪತ್ರಗಳನ್ನು ರಾಗ ದ್ವೇಷಗಳನ್ನು ಮರೆತು ನವೋತ್ಸಾಹದ ಜೊತೆಗೆ ದೇವರನ್ನು ನಂಬಿ ನಡೆಯುತ್ತಾರೆ, ನಂಬಿಕೆಯೇ ದೇವರು ಜಲ ಪ್ರಕೃತಿಗೆ ಮೂಲ ಹಾಗೆಯೇ ಕುಂಚಿಟಿಗ ಜನಾಂಗವನ್ನು ಕಾಪಾಡಿದ್ದು ಕೂಡ ಜಲಧಿ ಕುಲದವರು, 33 ಬಂಡಿ ಮನೆಯನ್ನು ಹೊಂದಿರುವ ವಶಿಷ್ಠ ಪರಂಪರೆಯೊಂದಿಗೆ ಸಾಗುತ್ತಿರುವುದು ಸಂತಸದ ಸಂಗತಿ.

    ಐತಿಹಾಸಿಕ ಪರಂಪರೆಯೊಂದಿಗೆ ಆಧುನಿಕ ಸಮಾಜದ ಅನಿವಾರ್ಯವಾದ ಶಿಕ್ಷಣ, ಕಾಯಕ, ದಾಸೋಹ, ಸೌಹಾರ್ದತೆ, ಸಮಾನತೆ ಇವುಗಳನ್ನು ಪಾಲಿಸುವುದು ಸಂವಿಧಾನಕ್ಕೆ ಕೊಟ್ಟ ಗೌರವ. ವರ್ತಮಾನ ಕಾಲದಲ್ಲಿ ಸಂವಿಧಾನವೇ ನಮ್ಮ ಶ್ರೇಷ್ಠ ಗ್ರಂಥ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪಾಲಿಸುವುದು ಭಾರತೀಯರಾದ ನಮ್ಮ ಆಧ್ಯ ಕರ್ತವ್ಯ.

    ಕುಂಚಿಟಿಗ ಜನಾಂಗವು ಸಂಘಟನೆ ಯಾಗದಿದ್ದರೆ ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಧ್ಯವಿಲ್ಲ, ನಮ್ಮ ಹೋರಾಟದ ಫಲವಾಗಿ ಆಂಜನೇಯನವರ ಸಹಕಾರದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬೆಂಬಲದಿಂದ 2015 ರಲ್ಲಿ ನಡೆದ ಸಮಾಜದ ಕುಲಶಾಸ್ತ್ರ ಅಧ್ಯಯನ ಈಗಾಗಲೇ ಸರ್ಕಾರದ ಕೈ ಸೇರಿದ್ದು.

    ಅದರ ಯಥಾವತ್ ಜಾರಿಗಾಗಿ ಸಮಾಜದ ಸಂಘಟನೆಗಳು, ಮಠಗಳು ಸಾರ್ವಜನಿಕರು ಹೆಚ್ಚೆಚ್ಚು ರಾಜಕೀಯ ಒತ್ತಡಗಳನ್ನು ತಂದು ಜಾರಿಗೊಳಿಸಿದರೆ ಸಮಾಜದ ಬಡವರಿಗೆ, ನಿರ್ಗತಿಕರಿಗೆ ಮೀಸಲಾತಿ, ಸಾಮಾಜಿಕ ನ್ಯಾಯ, ಸರ್ಕಾರದ ಸೌಕರ್ಯಗಳು ಸಿಗಲು ಸಾಧ್ಯ.

    ಕ್ಲಿಕ್ ಮಾಡಿ ಓದಿ: MOLAKALMURU: ಬರದ ನಾಡಿನಲ್ಲಿ ಭರ್ಜರಿ ಮಳೆ | ರಂಗಯ್ಯನದುರ್ಗ ಜಲಾಶಯ ಭರ್ತಿ

    ಆ ನಿಟ್ಟಿನಲ್ಲಿ ಕುಂಚಿಟಿಗ ಸಮಾಜ ಜಾಗೃತರಾಗಬೇಕು ಕೇವಲ ಜಾತ್ರೆಯಿಂದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ನಾವುಗಳು ಕರೆಕೊಟ್ಟಾಗ ಸಮಾಜದ ಎಲ್ಲ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿ ಕುಂಚಿಲಿಗ ಸಮಾಜದ ಹೇಳಿಗೆಗಾಗಿ ಸಹಕರಿಸಬೇಕೆಂದು ಎಂದು ತಿಳಿಸಿದರು.

    ಸಮಾರಂಭದಲ್ಲಿ ಶ್ರೀ ಶೈಲ ಮೂರ್ತಿಗಳು, ಶ್ರೀ ಚಿದಾನಂದ ಭಾರತಿ ಸ್ವಾಮಿಗಳು, ಶ್ರೀ ತಾಯಿ ಮುದ್ದಮ್ಮದೇವಿ. ಶ್ರೀ ವೀರನಾಗಪ್ಪಸ್ವಾಮಿ, ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಭಕ್ತಾದಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top