ಮೊಳಕಾಳ್ಮೂರು
Bear; ಬೋನಿಗೆ ಬಿದ್ದು, ಸಲಾಕೆಯನ್ನೇ ಮುರಿದು ತಪ್ಪಿಸಿಕೊಂಡ ಕರಡಿ | ದೈತ್ಯ ಕರಡಿ ಆರ್ಭಟ ಕಂಡ ಜನ ಕಂಗಾಲು
CHITRADURGA NEWS | 15 SEPTEMBER 2024
ಮೊಳಕಾಲ್ಮುರು: ಹಲವು ದಿನಗಳಿಂದ ಪಟ್ಟಣದ ಜನರ ನಿದ್ದೆಗೆಡಿಸಿದ್ದ ಕರಡಿ(bear)ಯು ಅರಣ್ಯ ಇಲಾಖೆಗೆ ಹಾಕಿದ್ದ ಬೋನಿಗೆ ಬಿದ್ದು ಕ್ಷಣಾರ್ಧದಲ್ಲಿಯೇ ತಪ್ಪಿಸಿಕೊಂಡು ಹೋಗಿದೆ.
ಕ್ಲಿಕ್ ಮಾಡಿ ಓದಿ: Gaurasandra Maramma; ಸೆ.19ವರೆಗೆ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ
ಪಟ್ಟಣದ ಬಯಲು ಆಂಜನೇಯ ಬಡಾವಣೆಯಲ್ಲಿ ಸಂಜೆಯಾಗುತ್ತಲೇ ಕಾಣಿಸಿಕೊಳ್ಳುತ್ತಿದ್ದ ಕರಡಿಯಯಿಂದಾಗಿ ಜನರು ಭಯಭೀತರಾಗಿದ್ದರು,ಕರಡಿಯನ್ನು ಸೆರೆ ಹಿಡಿಯುವಂತೆ ಹಲವಾರು ಬಾರಿ ಅರಣ್ಯ ಇಲಾಖೆ(Forest Department)ಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಎರಡು ವಾರಗಳಿಂದ ಬೋನ್ ಇಟ್ಟಿದ್ದರು.
ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ರಾತ್ರಿ 8 ಗಂಟೆಗೆ ಕರಡಿ ಬಿದ್ದು ಕಿರುಚಾಡಿದೆ, ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಇಲಾಖೆಯ ಸಿಬ್ಬಂದಿಗಳು ಸೆರೆ ಬಿದ್ದ ಕರಡಿಯನ್ನು ಬೋನ್ ಸಮೇತವಾಗಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ದೈತ್ಯ ಕರಡಿಯು ಬೋನಿನ ಸಲಾಕೆಗಳನ್ನು ಕಿತ್ತು ಪಕ್ಕದಲ್ಲಿಯೇ ಇರುವ ಗುಡ್ಡದ ಕಡೆ ಓಡಿ ಹೋಗಿದೆ. ಅದೃಷ್ಟವಶತ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿಲ್ಲ ಎನ್ನುವುದೇ ಸಮಾಧಾನಕರ.
ಕ್ಲಿಕ್ ಮಾಡಿ ಓದಿ: Novel: 3. ಎಲ್ಲರೂ ಲಿಂಗವಂತರಾದರು
ಬೋನಿಗೆ ಬಿದ್ದ ಕರಡಿ ತಪ್ಪಿಸಿಕೊಂಡು ಹೋಗಿದ್ದು ಜನರಿಗೆ ಇನ್ನಷ್ಟು ಆತಂಕಕ್ಕೆ ತಳ್ಳಿದರೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವು ತರಿಸಿದೆ. ಇನ್ನೂ ಮುಂದೆ ಕರಡಿಯು ಯಾವ ಕ್ಷಣದಲ್ಲಾದರೂ ಬಡಾವಣೆಯ ಜನರ ಮೈ ಮೇಲೆ ಎರಗಬಹುದು ಎಂದು ಆತಂಕದಿಂದಲೇ ಇಲ್ಲಿನ ಜನರು ಕಾಲ ಕಳೆಯುವಂತಾಗಿದೆ.
ಒಟ್ಟಿನಲ್ಲಿ ಹಲವಾರು ದಿನಗಳಿಂದ ಕರಡಿ ಸೆರೆಗಾಗಿ ಬೋನ್ ಇರಿಸಿ ಕರಡಿ ಸೆರೆಹಿಡಿಯಲು ಅರಣ್ಯ ಇಲಾಖೆ ರೂಪಿಸಿದ್ದ ಪ್ಲಾನ್ ಫೇಲ್ ಆಗಿದೆ.