ಕ್ರೈಂ ಸುದ್ದಿ
Attack: ಹಳ್ಳದ ಬಳಿ ಸಹೋದರಿಯರ ಮೇಲೆ ಹಲ್ಲೆ | ಚಿನ್ನದ ಸರ ಕಿತ್ತು ಪರಾರಿ
CHITRADURGA NEWS |05 SEPTEMBER 2024
ಚಿತ್ರದುರ್ಗ: ಸ್ಕೂಟಿಯಲ್ಲಿ ತೆರಳುತ್ತಿದ್ದ ಸಹೋದರಿಯರ ಮೇಲೆ ಹಲ್ಲೆ ನಡೆಸಿದ ಕಳ್ಳರು ಚಿನ್ನದ ಸರ ಕಿತ್ತು ಕೊಂಡ ಹೋದ ಘಟನೆ ಹೊಸದುರ್ಗ ತಾಲ್ಲೂಕಿನ ಸೋಮನಹಳ್ಳಿ ಸಮೀಪದ ಹಳ್ಳದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕುರುಬರಹಳ್ಳಿ ಗ್ರಾಮದ ಸಹೋದರಿಯರಾದ ಭಾರತಮ್ಮ ಹಾಗೂ ಲಾವಣ್ಯ ಶ್ರೀರಾಂಪುರದಿಂದ ಗವಿರಂಗಾಪುರ ಮಾರ್ಗವಾಗಿ ಬನ್ನಿಕೆರೆ ಹಳ್ಳದ ಮೂಲಕ ಗ್ರಾಮಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಬನ್ನಿಕೆರೆ ಹಳ್ಳದಲ್ಲಿ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಸಹೋದರಿಯರನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಯುವತಿಗೆ ಚಾಕು ತೋರಿಸಿ ಚಿನ್ನದ ಸರ ಕಸಿದು ಸೋಮೇನಹಳ್ಳಿ, ಕುರುಬರಹಳ್ಳಿ ಮಾರ್ಗವಾಗಿ ಪರಾರಿಗೆ ಯತ್ನಿಸಿದ್ದಾರೆ.
ಕ್ಲಿಕ್ ಮಾಡಿ ಓದಿ:ದಿನ ಭವಿಷ್ಯ | ಸೆಪ್ಟೆಂಬರ್ 05 | ಹಠಾತ್ ಪ್ರಯಾಣ, ಹೊಸ ವಸ್ತ್ರ, ಆಭರಣ ಖರೀದಿ
ಈ ವೇಳೆ ಕುರುಬರಹಳ್ಳಿ ಗ್ರಾಮದಿಂದ ಕಿಡುಕನಹಳ್ಳಿ ರಸ್ತೆ ತಿರುವಿನಲ್ಲಿ ಕಳ್ಳರು ಕುರುಬರಹಳ್ಳಿ ಗ್ರಾಮದಲ್ಲಿ ಮಹಿಳೆಗೆ ಬೈಕ್ ಡಿಕ್ಕಿಪಡಿಸಿ ಕೆಳಗೆ ಬಿದ್ದಿದ್ದಾರೆ. ಈ ವೇಳೆಗಾಗಲೇ ವಿಷಯ ತಿಳಿದಿದ್ದ ಕುರುಬರಹಳ್ಳಿ ಗ್ರಾಮಸ್ಥರು ಬೈಕ್ ನಲ್ಲಿ ಬಿದ್ದಿದ್ದವರನ್ನು ಹಿಡಿದು ವಿಚಾರಿಸಿದ್ದಾರೆ. ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.