ಮುಖ್ಯ ಸುದ್ದಿ
ಆರೋಗ್ಯದ ಮೇಲೆ ತೆರಿಗೆ ನ್ಯಾಯಸಮ್ಮತವಲ್ಲ | ಐಎಂಎ ಅಧ್ಯಕ್ಷ ಡಾ.ಶ್ರೀನಿವಾಸ್
CHITRADURGA NEWS | 08 APRIL 2024
ಚಿತ್ರದುರ್ಗ: ಆರೋಗ್ಯದ ಮೇಲೆ ಜಿಎಸ್‍ಟಿ ಹಾಕುವುದೆಂದರೆ ಕಾಯಿಲೆಗೆ ತೆರಿಗೆ ಹಾಕಿದಂತೆ. ಆರೋಗ್ಯವನ್ನು ಕಳೆದುಕೊಂಡ ರೋಗಿಯ ಮೇಲೆ ತೆರಿಗೆ ಹಾಕುವುದು ಖಂಡಿತವಾಗಿಯೂ ನ್ಯಾಯ ಸಮ್ಮತವಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ.ಎಸ್.ಶ್ರೀನಿವಾಸ್ ತಿಳಿಸಿದರು.
ಇದನ್ನೂ ಓದಿ: ನಾಲ್ವರು ಪಕ್ಷೇತರರಿಂದ ನಾಮಪತ್ರ ವಾಪಾಸು 20 ಅಭ್ಯರ್ಥಿಗಳು ಕಣದಲ್ಲಿ
ನಗರದ ಭಾರತೀಯ ವೈದ್ಯಕೀಯ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಐಎಂಎ ಆರೋಗ್ಯ ಪ್ರಣಾಳಿಕೆ ಕುರಿತು ಮಾತನಾಡಿದ ಅವರು, ಪ್ರಣಾಳಿಕೆ ಅಂಶಗಳಾದ ಆಧುನಿಕ ವೈದ್ಯಕೀಯ ವಿಜ್ಞಾನದ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ವೈದ್ಯಕೀಯ ಶಾಸ್ತ್ರಗಳಿಗೆ ಆದರದೇಯಾದ ಇತಿಹಾಸ ಮತ್ತು ಕ್ರಮಗಳಿವೆ.
ಎಲ್ಲಾ ವೈದ್ಯಕೀಯ ಶಾಸ್ತ್ರಗಳನ್ನು ಒಳಗೊಳ್ಳುವ ಸಮಗ್ರ ಚಿಕಿತ್ಸಾಶ್ರಮ ನಿಜವಾಗಿಯೂ ರೋಗಿಯ ಆರೋಗ್ಯ ಮತ್ತು ರಕ್ಷಣೆಯ ದೃಷ್ಟಿಯಿಂದ ಖಂಡಿತವಾಗಿಯೂ ಕೆಟ್ಟ ಪರಿಣಾಮವನ್ನು ಬೀರಬಲ್ಲದು, ಇದು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಮಾರಕವಾಗ ಬಲ್ಲದು. ವೈದ್ಯಕೀಯ ಶಾಸ್ತ್ರದ ಆಯ್ಕೆ ರೋಗಿಗೆ ಅವನ ಆಯ್ಕೆಗೆ ಬಿಡುವಂಥದ್ದು ಮಾತ್ರ ಒಪ್ಪಬಹುದಾದ ಒಂದು ಪರಿಹಾರ ಅಷ್ಟೇ.
ಇದನ್ನೂ ಓದಿ: ಬಾಡೂಟ ಸೇವಿಸಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ ಶ್ರೀಗಳು
23 ರಾಜ್ಯಗಳಲ್ಲಿ ಆಸ್ಪತ್ರೆಯ ರಕ್ಷಣೆಗಾಗಿ ಇರುವ ಕಾನೂನುಗಳು ಇನ್ನು ವೈದ್ಯರ ವಿರುದ್ಧ ನಡೆಯುತ್ತಿರುವ ಹಿಂಸೆಗೆ ಯಾವುದೇ ಪರಿಣಾಮಕಾರಿಯಾಗಿ ವರ್ತಿಸಿಲ್ಲ. ಕೇಂದ್ರದ ಅಪೆಡಮಿಕ್ ಡಿಸಿಸ್ ಆಕ್ಟ್ ವೈದ್ಯರ ವಿರುದ್ಧದ ಮತ್ತು ಆಸ್ಪತ್ರೆ ಗಳ ವಿರುದ್ಧದ ಹಿಂಸೆ ತಡೆಯಲು ಸರಿಯಾದ ಹಾಗೂ ಪ್ರಥಮ ಹೆಜ್ಜೆ.
ರೋಗಿಯನ್ನು ಗ್ರಾಹಕನೆಂದು, ವೈದ್ಯರನ್ನು ವ್ಯಾಪಾರಿ ಎಂದು ಮರುನಾಮಕರಣ ಮಾಡಿರುವುದು ರೋಗಿ ಮತ್ತು ವೈದ್ಯರ ಪವಿತ್ರ ಸಂಬಂಧಕ್ಕೆ ಧಕ್ಕೆಯನ್ನು ಉಂಟು ಮಾಡಿದೆ. ಆಯುಷ್ಮಾನ್ ಭಾರತ್ ಪಿಎಂಜೆ ಯ ಅಡ್ಮಿಶನ್ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಒಳಪಡಿಸಬೇಕು.
ಇದನ್ನೂ ಓದಿ: ಮೂರು ದಿನಗಳಲ್ಲಿ ಮಳೆ ಸಾಧ್ಯತೆ
ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಭಾರತದ ವೈದ್ಯಕೀಯ ಕಾಲೇಜುಗಳಿಂದ ಹೊರಬಂದು ಪರವಾನಿಗೆಯ ಪರೀಕ್ಷೆಯನ್ನು ಬರೆಯಬೇಕಾದದ್ದು, ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಯ ಸೋಲನ್ನು ಸೂಚಿಸುತ್ತದೆ, ಆ ಒಂದು ಪರೀಕ್ಷೆ ಹೇಗೆ ವಿದ್ಯಾರ್ಥಿಯ ಜ್ಞಾನವನ್ನು ಪರೀಕ್ಷಿಸುತ್ತದೆಯೋ ಹಾಗೆಯೇ ಮುಂದಿನ ವಿದ್ಯಾಭ್ಯಾಸಕ್ಕೆ ಅಭ್ಯರ್ಥಿ ಆಯ್ಕೆ ಮಾಡುತ್ತದೆ ಎನ್ನುವುದು ಸಮಂಜಸವಲ್ಲ.
ದೇಶಾದ್ಯಂತ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ವೈದ್ಯಾಧಿಕಾರಿಗಳ ಸಂಖ್ಯೆಯನ್ನು ಜನಸಂಖ್ಯೆ ಆಧಾರಿತವಾಗಿ ಹೆಚ್ಚಿಸಬೇಕು. ಈ ಅಂಶಗಳನ್ನು ಲೋಕಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಮನವೊಲಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು. ಈ ಉದ್ದೇಶದಿಂದ ಚಿತ್ರದುರ್ಗ ಲೋಕಸಭೆ ಸ್ಪರ್ಧಿಸಿರುವ ಬಿ.ಎಂ ಚಂದ್ರಪ್ಪ ಮತ್ತು ಗೋವಿಂದ್ ಕಾರಜೋಳ ಅವರ ಜೊತೆ ಪ್ರಣಾಳಿಕೆ ನೀಡಿ ಚರ್ಚಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಬೀದಿಗಿಳಿದ ಗೋವಿಂದ ಕಾರಜೋಳ ಸಂತೆ ಹೊಂಡದ ಬಳಿ ಮಾತಯಾಚನೆ
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಜಿಲ್ಲೆ ಶಾಖೆಯ ಅಧ್ಯಕ್ಷರಾದ ಡಾ. ಪಿ.ಟಿ ವಿಜಯಕುಮಾರ್, ರಾಜ್ಯ ಸಂಘದ ಸಹ ಕಾರ್ಯದರ್ಶಿ ಡಾ.ಮೋಹನ್ ಕುಮಾರ್, ಕಾರ್ಯದರ್ಶಿ ಡಾ.ಕೆ.ಎಂ.ಬಸವರಾಜ್ ಡಾ.ಟಿ.ನಾಗರಾಜ್ ನಾಯಕ್ ಇದ್ದರು.