Connect with us

    ರೈತರ ಗಮನಕ್ಕೆ…ಬೋರ್‌ವೆಲ್‌ ಪ್ರತಿ ಅಡಿಗೆ ರೂ.105 ಫಿಕ್ಸ್‌ | ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್

    ಮುಖ್ಯ ಸುದ್ದಿ

    ರೈತರ ಗಮನಕ್ಕೆ…ಬೋರ್‌ವೆಲ್‌ ಪ್ರತಿ ಅಡಿಗೆ ರೂ.105 ಫಿಕ್ಸ್‌ | ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 MARCH 2024
    ಚಿತ್ರದುರ್ಗ: ಬರದ ಸಂಕಷ್ಟದಲ್ಲಿದ್ದ ರೈತರನ್ನು ಬೋರ್‌ವೆಲ್‌ ದರ ಮತ್ತಷ್ಟು ಸಮಸ್ಯೆಗೆ ಸಿಲುಕಿಸಿತ್ತು. ಆದರೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ತೆಗೆದುಕೊಂಡ ನಿರ್ಧಾರ ಅನ್ನದಾತರಿಗೆ ನೆಮ್ಮದಿ ತಂದಿದೆ.

    ಹಿರಿಯೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ದರ ನಿಗದಿ ಸಭೆಯಲ್ಲಿ 300 ಅಡಿಯವರೆಗೆ ಪ್ರತಿ ಅಡಿಗೆ 105 ರೂಪಾಯಿ ದರ ನಿಗಧಿಗೊಳಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ATR ನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್

    ಕೊಳವೆಬಾವಿ ಕೊರೆಯಲು 300 ಅಡಿಯವರೆಗೆ ಪ್ರತಿ ಅಡಿಗೆ ₹ 105, 300 ರಿಂದ 400 ಅಡಿಯವರೆಗೆ ಪ್ರತಿ ಅಡಿಗೆ ₹ 5, ಹಾಗೂ 400 ರಿಂದ 500 ಅಡಿವರೆಗೆ ಪ್ರತಿ ಅಡಿಗೆ ₹ 8 ಹೆಚ್ಚು ದರ ನಿಗದಿಪಡಿಸಲಾಗಿದೆ. 500 ಅಡಿ ನಂತರದ ಕೊಳವೆ ಬಾವಿ ಕೊರೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. 500 ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಸಿದಲ್ಲಿ ಏಜೆನ್ಸಿಯವರು ಯಾವುದೇ ರೀತಿಯ ಸಾಗಣಿಕೆ ವೆಚ್ಚವನ್ನು ಭರಿಸತಕ್ಕದ್ದಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

    ಕ್ಲಿಕ್ ಮಾಡಿ ಓದಿ: ಒಂದೇ ದಿನಕ್ಕೆ ಲಕ್ಷಾಂತರ ಹಣ ಸೀಜ್‌ | ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಕಣ್ಗಾವಲು

    ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಗಳು ಬತ್ತುತ್ತಿರುವುದನ್ನು ಮನಗಂಡಿರುವ ಕೊಳವೆಬಾವಿ ಕೊರೆಯುವ ಯಂತ್ರಗಳ ಮಾಲೀಕರು ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿದ್ದರು. ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ನೂರಾರು ರೈತರು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ರೈತಸಂಘದ ಪದಾಧಿಕಾರಿಗಳು, ಬೋರ್ ವೆಲ್ ಮಾಲೀಕರ ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಸಲಾಯಿತು.

    ಕ್ಲಿಕ್ ಮಾಡಿ ಓದಿ: ರಾಮನಗರದಲ್ಲಿ ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್‌ ಜ್ಯೋತಿರಾಜ್‌

    ರಿಗ್‌ ಯಂತ್ರದವರು ವಿಫಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮತ್ತು ಕ್ರಮಬದ್ಧವಾಗಿ ಮುಚ್ಚಬೇಕು. ಯಾವುದೇ ಅವಘಡಗಳಿಗೆ ಅವಕಾಶ ಕೊಡಬಾರದು ಎಂದು ಸಭೆಯಲ್ಲಿ ಎಚ್ಚರಿಸಲಾಯಿತು.

    ತಹಶೀಲ್ದಾರ್‌ ರಾಜೇಶ್‌ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ವಿ.ಮಂಜುನಾಥ್‌, ರೈತಸಂಘದ ಕೆ.ಸಿ.ಹೊರಕೇರಪ್ಪ, ಬಿ.ಒ.ಶಿವಕುಮಾರ್, ಕೆ.ಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ ಹಾಗೂ ಬೋರ್ ವೆಲ್ ಮಾಲೀಕರು ಹಾಜರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top