Connect with us

    ಶಿವರಾತ್ರಿಗೆ ಕಬೀರಾನಂದ ಮಠ | ನವರಾತ್ರಿಗೆ ಮುರುಘಾ ಮಠ | ಶ್ರೀ ಶಿವಲಿಂಗಾನಂದ ಸ್ವಾಮೀಜಿ ಬಣ್ಣನೆ

    ಕಬೀರಾನಂದ ಮಠದಲ್ಲಿ ಮಾರ್ಚ್ 4 ರಿಂದ 9 ರವರೆಗೆ 94ನೇ ವರ್ಷದ ಶಿವರಾತ್ರಿ ಮಹೋತ್ಸವ ಹಾಗೂ ಶಿವನಾಮ ಸಪ್ತಾಹ

    ಮುಖ್ಯ ಸುದ್ದಿ

    ಶಿವರಾತ್ರಿಗೆ ಕಬೀರಾನಂದ ಮಠ | ನವರಾತ್ರಿಗೆ ಮುರುಘಾ ಮಠ | ಶ್ರೀ ಶಿವಲಿಂಗಾನಂದ ಸ್ವಾಮೀಜಿ ಬಣ್ಣನೆ

    CHITRADURGA NEWS | 2 FEBRUARY 2024

    ಚಿತ್ರದುರ್ಗ: ನಗರದ ಕಬೀರಾನಂದ ಮಠದಲ್ಲಿ ಮಾರ್ಚ್ 4 ರಿಂದ 9 ರವರೆಗೆ 94ನೇ ವರ್ಷದ ಶಿವರಾತ್ರಿ ಮಹೋತ್ಸವ ಹಾಗೂ ಶಿವನಾಮ ಸಪ್ತಾಹ ನಡೆಯಲಿದೆ ಎಂದು ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶಿವನನ್ನು ರಾತ್ರಿಯಿಡಿ ಧ್ಯಾನಿಸುವುದೇ ಮಹಾಶಿವರಾತ್ರಿಯ ಮಹತ್ವ. 1924 ರಿಂದಲೂ ಕಬೀರಾನಂದಾಶ್ರಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

    ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೂ ಚಿತ್ರದುರ್ಗದಿಂದ ಕಚೇರಿ ಎತ್ತಂಗಡಿ

    ಶಿವರಾತ್ರಿ ಎಂದರೆ ಕಬೀರಾನಂದಶ್ರಮ, ನವರಾತ್ರಿ ಎಂದರೆ ಮುರುಘಾಮಠ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಎರಡು ಮಠಗಳು ಪ್ರಸಿದ್ದಿ ಪಡೆದಿವೆ. ಈ ಬಾರಿಯ ಮಹಾಶಿವರಾತ್ರಿ ಮಹೋತ್ಸವಕ್ಕೆ ಬಹಳಷ್ಟು ಜನರ ಸಹಕಾರವಿದೆ. ಯುವ ಬಳಗ ಹೆಚ್ಚಿನ ಸಂಖ್ಯೆಯಲ್ಲಿದೆ. ಹೊಸ ಹೊಸ ಮಠಾಧೀಶರನ್ನು ಶಿವರಾತ್ರಿ ಮಹೋತ್ಸವಕ್ಕೆ ಆಹ್ವಾನಿಸಿದ್ದೇವೆ. ಮನರಂಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಇರುತ್ತದೆ ಎಂದು ತಿಳಿಸಿದರು.

    ಮಹಾಶಿವರಾತ್ರಿ ಮಹೋತ್ಸವದ ಮೊದಲ ದಿನ ಸಂಜೆ 6.30 ಕ್ಕೆ ಆರಂಭವಾಗುವ ಕಾರ್ಯಕ್ರಮದ ಸಾನಿಧ್ಯವನ್ನು ಹುಬ್ಬಳ್ಳಿ ವಿಜಯಪುರ ಶಾಂತಾಶ್ರಮದ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು, ಜಡೇಶ್ವರ ಮಠದ ರಾಮಾನಂದ ಭಾರತಿ ಸ್ವಾಮಿಗಳು, ಬಾಗಲಕೋಟೆ ಅರಿಕೆರೆಯ ಕೌಧೀಶ್ವರ ಮಹಾಸಂಸ್ಥಾನದ ಮಾಧವಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕಕ್ಕೆ ವಿರೋಧ

    ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಭಾ ಮಂಟಪ ಉದ್ಘಾಟಿಸುವರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಹಾ ಶಿವರಾತ್ರಿ ಮಹೋತ್ಸವ ಉದ್ಗಾಟಿಸಲಿದ್ದಾರೆ.

    ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಜಿಲ್ಲಾ ರಕ್ಷಣಾಧಿಕಾರಿ ಧಮೇರ್ಂದ್ರಕುಮಾರ್ ಮೀನಾ, ನಿವೃತ್ತ ಐ.ಎ.ಎಸ್.ಅಧಿಕಾರಿ ಬಿ.ಭೀಮಯ್ಯ, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಆರ್ ತಿಮ್ಮಾಪುರ. ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಜಿ.ಟಿ.ಸುರೇಶ್ ಸಿದ್ದಾಪುರ, ಎಂ.ಎ.ಸೇತುರಾಂ, ವಾಣಿಜ್ಯೋದ್ಯಮಿ ರೇವಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಸೋಮಶೇಖರ್, ಮಚೆರ್ಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷರಾದ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ದ್ಯಾಮೇಗೌಡರು ಆಗಮಿಸಲಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಮುರುಘಾ ಮಠದ ಆಡಳಿತ ನಿರ್ವಹಣೆಗೆ ನಿವೃತ್ತ ಐಎಎಸ್ ಅಧಿಕಾರಿ

    ಸುದ್ದಿಗೋಷ್ಠಿಯಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷ ಕೆ.ಸಿ.ನಾಗರಾಜ್, ಪರಮೇಶ್, ವಿ.ಎಲ್.ಪ್ರಶಾಂತ್, ಡಿ.ಗೋಪಾಲಸ್ವಾಮಿ ನಾಯಕ, ನಾಗರಾಜ್ ಸಂಗಂ, ನ್ಯಾಯವಾದಿ ಪ್ರತಾಪ್ ಜೋಗಿ, ಓಂಕಾರ್ ಮತ್ತಿತರರಿದ್ದರು.

    ಇದನ್ನೂ ಓದಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಬೆಲೆಯಲ್ಲಿ 459 ರೂ. ಹೆಚ್ಚಳ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top