ಮುಖ್ಯ ಸುದ್ದಿ
BREAKING NEWS ಚಿತ್ರದುರ್ಗ ಜಿಲ್ಲೆ ತೀವ್ರ ಬರಪೀಡಿತ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನ | 125 ವರ್ಷಗಳಲ್ಲೇ ಅತೀ ಕಡಿಮೆ ಮಳೆ
ಚಿತ್ರದುರ್ಗ ನ್ಯೂಸ್.ಕಾಂ: ಮಳೆಯ ಅಭಾವದಿಂದಾಗಿ ಸೃಷ್ಟಿಯಾಗಿರುವ ಮೇವು, ನೀರಿನ ಕೊರತೆ, ಬೆಳೆ ಸಮೀಕ್ಷೆ ಮತ್ತಿತರೆ ಅಂಶಗಳನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸೆಪ್ಟಂಬರ್ 13 ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಬರ ಘೋಷಣೆಯ ಕಡತ ಮುಖ್ಯಮಂತ್ರಿಗಳ ಕಚೇರಿಗೆ ರವಾನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಅಂಕಿತ ಹಾಕಬೇಕಾಗಿದೆ.
ರಾಜ್ಯದ 31 ಜಿಲ್ಲೆಗಳ 235 ತಾಲೂಕುಗಳ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಇದರಲ್ಲಿ 161 ತಾಲೂಕುಗಳಿ ತೀವ್ರ ಬರಪೀಡಿತ ಹಾಗೂ ಉಳಿದ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವಿಂಗಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳು ತೀವ್ರ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ.
ಇದನ್ನೂ ಓದಿ: ಕೃಷಿ ಸಚಿವರ ಜೊತೆಗೆ ನಡೆದ ಸಂವಾದದಲ್ಲಿ ಜಿಲ್ಲೆಯ ರೈತರು ಮಂಡಿಸಿದ ವಿಚಾರಗಳ ಪೂರ್ಣ ವಿವರ
ವಾಡಿಕೆಯಂತೆ ಮಳೆಗಾಲ ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗಿದ್ದು, ರಾಜ್ಯದಲ್ಲಿ 14 ದಿನ ತಡವಾಗಿ ಮಳೆಯಾಯಿತು. ಈ ವೇಳೆ ಮುಂಗಾರು ದುರ್ಬಲಗೊಂಡು ಶೇ.56 ರಷ್ಟು ಮಳೆ ಕೊರತೆಯಾಯಿತು. ಜುಲೈ ತಿಂಗಳಲ್ಲಿ ಮತ್ತೆ ಮಳೆ ಚುರುಕುಗೊಂಡು ಅಕಾಲಿಕವಾಗಿ ವಾಡಿಕೆಗಿಂತ ಶೇ.29 ರಷ್ಟು ಹೆಚ್ಚಾಗಿಯೇ ಬಂದಿತ್ತು. ಆದರೆ, ಈ ಮಳೆ ಕೇವಲ ಒಂದು ವಾರದಲ್ಲಿ ಸುರಿದಿತ್ತು. ಆಗಸ್ಟ್ ತಿಂಗಳಲ್ಲಿ ಶೇ.73 ರಷ್ಟು ಮಳೆ ಕೊರತೆಯಾಯಿಗಿ ಎಲ್ಲ ಬೆಳೆಗಳು ಒಣಗಿ ಹೋದವು. ಇದು 125 ವರ್ಷಗಳಲ್ಲೇ ಅತೀ ಕಡಿಮೆ ಮಳೆಯಾಗಿ ದಾಖಲಾಯಿತು.
ಈ ಎಲ್ಲಾ ಅಂಗಳನ್ನು ಪರಿಗಣಿಸಿ ರಾಜ್ಯದ ಹವಾಮಾನ ಅವಲೋಕನ ಸಮಿತಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಬರ ಘೋಷಣೆಗೆ ತೀರ್ಮಾನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಬರ ಕೈಪಿಡಿ-2020ರ ಅನ್ವಯ ಎಲ್ಲ ಅಂಶಗಳನ್ನು ದಾಖಲಿಸಿದ್ದು, ಕೇಂದ್ರ ಸರ್ಕಾರ ಕೂಡಾ ಇದಕ್ಕೆ ನೆರವು ನೀಡಬೇಕಿದೆ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)