ಮುಖ್ಯ ಸುದ್ದಿ
Hiriyuru: ಹೈವೇನಲ್ಲಿ 10 ಕಿ.ಮೀ ಟ್ರಾಫಿಕ್ ಜಾಮ್ | ಭಾರೀ ಮಳೆ, ಹೆದ್ದಾರಿ ಬ್ರಿಡ್ಜ್ ಕಾಮಗಾರಿ ಹಿನ್ನೆಲೆ
CHITRADURGA NEWS | 05 OCTOBER 2024
ಚಿತ್ರದುರ್ಗ: ಹಿರಿಯೂರು (Hiriyuru) ಹೊರವಲಯದ ಗೊರ್ಲಡ್ಕು ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶನಿವಾರ ನಸುಕಿನಲ್ಲಿ ಸುಮಾರು 10 ಕಿ.ಮೀ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಿರುವ ಘಟನೆ ನಡೆದಿದೆ.
ಗೊರ್ಲಡ್ಕು ಬಳಿ ಹೆದ್ದಾರಿಯಲ್ಲಿ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕಡೆಯಿಂದ ಚಿತ್ರದುರ್ಗ ಕಡೆಗೆ ಬರುವ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವಂತೆ ಮಾಡಲಾಗಿತ್ತು.
ಇದನ್ನೂ ಓದಿ: ಹೊಳಲ್ಕೆರೆ ರಸ್ತೆಯಲ್ಲಿ ಭೀಕರ ಅಪಘಾತ | 30 ಕುರಿ ಸಾವು
ಆದರೆ, ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ಸುರಿದಿದ್ದ ಮಣ್ಣಿನ ರಾಶಿ ಸರ್ವೀಸ್ ರಸ್ತೆಯಲ್ಲಿ ಬಂದು ಜಮಾವಣೆ ಆಗಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗಿಲ್ಲ. ಇದರಿಂದ ಬೆಳಗಿನವರೆಗೆ ಸುಮಾರು ಮೂರ್ನಾಲ್ಕು ತಾಸು ಭಾರೀ ಟ್ರಾಫಿಕ್ ಜಾಮ್ ಆಗಿದೆ.
ಬೆಂಗಳೂರಿನಿಂದ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಹಾರಾಷ್ಟ್ರ, ಬಳ್ಳಾರಿ, ಹೊಸಪೇಟೆ ಕಡೆಗೆ ಸಂಚರಿಸುವ ಎಲ್ಲ ವಾಹನಗಳೂ ಸುಮಾರು ಮೂರು ತಾಸು ಟ್ರಾಫಿಕ್‍ನಲ್ಲಿ ಸಿಲುಕಿವೆ.
ಇದನ್ನೂ ಓದಿ: ಭರ್ಜರಿ ಮಳೆ | ತುಂಬಿ ಹರಿದ ಹಳ್ಳ-ಕೊಳ್ಳ | ಕೋಡಿ ಬಿದ್ದ ಕೆರೆಗಳು
ಬೇರೆ ಬೇರೆ ಕೆಲಸಗಳಿಗೆ, ಆಸ್ಪತ್ರೆಗೆ, ಕಚೇರಿ ಕೆಲಸಕ್ಕೆ ಹೊರಟಿದ್ದವರು ರಸ್ತೆಯಲ್ಲಿ ಸಿಲುಕಿ ಹೈರಾಣಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತ ಪೊಲೀಸರು ಸ್ಥಳಕ್ಕೆ ಧಾವಿಸಿ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಮತ್ತೊಂದು ಅಡಿ ಹೆಚ್ಚಾಯ್ತು ವಿವಿ ಸಾಗರ ನೀರಿನ ಮಟ್ಟ | ಒಳಹರಿವಿನ ಪ್ರಮಾಣ ಹೆಚ್ಚಳ