ಮುಖ್ಯ ಸುದ್ದಿ
Inflow: ವಿವಿ ಸಾಗರದ ಒಳಹರಿವು ಮತ್ತಷ್ಟು ಹೆಚ್ಚಳ | ಭರ್ತಿಗೆ 1.40 ಅಡಿ ಬಾಕಿ
CHITRADURGA NEWS | 27 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಇಂದು ಮತ್ತಷ್ಟು ಒಳಹರಿವು(Inflow) ಹೆಚ್ಚಾಗಿದೆ. ನ.27 ರಂದು ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಇದರಿಂದಾಗಿ ಜಲಾಶಯದ ಮಟ್ಟ 128.60 ಅಡಿಗೆ ತಲುಪಿದ್ದು, ಇನ್ನು 1.40 ಅಡಿವರೆಗೆ ನೀರು ಬಂದರೆ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯಲಿದೆ.
ಇದನ್ನೂ ಓದಿ: GOOD NEWS | ವಿವಿ ಸಾಗರ ಕೋಡಿ ಬೀಳೋದು ಪಕ್ಕಾ | ಭದ್ರಾದಿಂದ ಜನವರಿವರೆಗೆ ನೀರು ಹರಿಸಲು ಆದೇಶ
30 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 29.24 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಜಲಾಶಯದ ಮಟ್ಟ 128.60 ಅಡಿಗೆ ತಲುಪಿದ್ದು, ಇನ್ನು 1.40 ಅಡಿವರೆಗೆ ನೀರು ಬಂದರೆ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯಲಿದೆ.
ಈಗ ಜಲಸಂಪನ್ಮೂಲ ಇಲಾಖೆಯಿಂದ ವಿವಿ ಸಾಗರಕ್ಕೆ ಜನವರಿವರೆಗೆ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲು ಆದೇಶ ಮಾಡಿರುವುದರಿಂದ ಈ ವರ್ಷಾಂತ್ಯದೊಳಗೆ ಜಲಾಶಯ ಭರ್ತಿಯಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ಇದನ್ನೂ ಓದಿ: ಹಿಂಗಾರು ಈರುಳ್ಳಿ ಬೆಳೆಗೆ ಫಸಲ್ ಬಿಮಾ ನೊಂದಣಿ ಪ್ರಾರಂಭ