Connect with us

ಚಿತ್ರದುರ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ | ತೀವ್ರ ಬಿಸಿಲು, ಬಿಸಿಗಾಳಿಯ ಎಚ್ಚರಿಕೆ | ಸುರಕ್ಷಿತವಾಗಿರಲು ಇಲ್ಲಿವೆ ಸೂಕ್ತ ಸಲಹೆ

ತೀವ್ರ ಬಿಸಿಲು, ಬಿಸಿಗಾಳಯ ಎಚ್ಚರಿಕೆ

ಮುಖ್ಯ ಸುದ್ದಿ

ಚಿತ್ರದುರ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ | ತೀವ್ರ ಬಿಸಿಲು, ಬಿಸಿಗಾಳಿಯ ಎಚ್ಚರಿಕೆ | ಸುರಕ್ಷಿತವಾಗಿರಲು ಇಲ್ಲಿವೆ ಸೂಕ್ತ ಸಲಹೆ

CHITRADURGA NEWS | 02 MAY 2024

ಚಿತ್ರದುರ್ಗ: ಮನೆಯಲ್ಲಿದ್ದವರು ಯಪ್ಪಾ ಏನ್ ಸೆಕೆನೋ ಮಾರಾಯ ಅಂದ್ರೆ, ಹೊರಗೆ ಕೆಲಸ ಮಾಡುವವರು ಸೂರ್ಯನ ಶಾಖಕ್ಕೆ ಎಲ್ಲಿ ತಂದೂರಿ ಆಗ್ತಿವೋ ಎನ್ನುತ್ತಿದ್ದಾರೆ.

ವಿಪರೀತ ಬಿಸಿಲು, ಬಿಸಿಗಾಳಿ ಇದ್ದು, ಮನೆಯಲ್ಲಿರುವ ಫ್ಯಾನ್, ಕೂಲರ್‍ಗಳು ಕೂಡಾ ಕೆಲಸ ಮಾಡದಂತಾಗಿವೆ. ಫ್ಯಾನ್ ಎಷ್ಟೇ ತಿರುಗಿದರೂ ಬಿಸಿ ಗಾಳಿಯೇ ಬರುತ್ತಿದೆ.

ಇದನ್ನೂ ಓದಿ: ಮೇ.27 ರವರೆಗೆ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನಕ್ಕೆ | ಮತ್ತೆ ಚಿತ್ರದುರ್ಗ ಕಾರಾಗೃಹ ಸೇರಿದ ಮುರುಘಾಶ್ರೀ

ಇತ್ತ ಮನೆಯಲ್ಲೂ ಇರಲಾರದೆ, ಹೊರಗೂ ಹೋಗಲಾರದೆ ಜೀವನ ನರಕ ಎನ್ನುವಂತಹ ಸ್ಥಿತಿ ತಲುಪಿದೆ.
ಫ್ಯಾನ್ ಇಲ್ಲದ ಸಾಮಾನ್ಯ ಕುಟುಂಬಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ದೇವರೆ ಯಾವಾಗ ಮಳೆ ಸುರಿಸಿ ವಾತಾವರಣ ತಂಪು ಮಾಡುತ್ತೀಯಾ ಎನ್ನುತ್ತಿದ್ದಾರೆ, ಜನ, ಜಾನುವಾರುಗಳು.

ಇದರ ನಡುವೆ ಹವಾಮಾನ ಇಲಾಖೆ ಇನ್ನೂ ಐದು ದಿನ ಬಿಸಿಲು ಹಾಗೂ ಬಿಸಿಗಾಳಿಯ ಎಚ್ಚರಿಕೆ ನೀಡಿದ್ದು, ಚಿತ್ರದುರ್ಗಕ್ಕೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಕೋಣ ಗುದ್ದಿ ವ್ಯಕ್ತಿ ಸಾವು | ಜಾತ್ರೆಗಾಗಿ ಮನೆಯಲ್ಲಿ ಸಾಕಿದ್ದ ಕೋಣ ಗುದ್ದಿ ಘಟನೆ

ಎರಡು ವಾರಗಳ ಹಿಂದೆ ಅಲ್ಲಲ್ಲಿ ಮಳೆ ಬಿತ್ತಾದರೂ ಅದು ತಂಪಾಗುವ ಬದಲು ಇನ್ನಷ್ಟು ಬಿಸಿ ಏರಿಸುತ್ತಿದೆ. ಈಗ ತುರ್ತಾಗಿ ಮಳೆ ಬೇಕು. ಅದೂ ಅಂತಿಂಥಾ ಮಳೆಯಲ್ಲಾ ಗಂಟೆಗಟ್ಟಲೆ ಸುರಿದು ಕೆರೆ, ಕಟ್ಟೆಗಳಿಗೆ ನೀರು ಬರುವಂತಹ ಮಳೆ ಬೇಕಾಗಿದೆ.

ಇದನ್ನೂ ಓದಿ: ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೇಯಿಸಲು ಸರಿಯಾದ ಸಮಯ ಯಾವುದು ಗೊತ್ತಾ..

ಯಾವ ಯಾವ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್: 

ಮೇ.5 ರವರೆಗೆ ತೀವ್ರ ಬಿಸಿಗಾಳಿಯ ಎಚ್ಚರಿಕೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನೀಡಿದೆ.
ದಕ್ಷಿಣ ಒಳನಾಡು ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಿತ್ರದುರ್ಗ, ಚಾಮರಾಜನಗರ, ಕೊಡಗು, ತುಮಕೂರು, ದಾವಣಗೆರೆ, ಹಾಸನ, ಶಿವಮೊಗ್ಗ ಹಾಗೂ ಉತ್ತರ ಒಳನಾಡು ವ್ಯಾಪ್ತಿಯ ಬೆಳಗಾವಿ, ಬೀದರ್, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಇನ್ನಿತರೆ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಬಿಸಿಗಾಳಿ ಮುಂದುವರೆಯುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ

ಬಿಸಿಲು, ಬಿಸಿಗಾಳಿಯಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆಗಳು: (Precautions to avoid heatstroke)

  • ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯುತ್ತಿರಬೇಕು.
  • ಸಾಧ್ಯವಾದಷ್ಟು ತೆಳು, ಹಗುರವಾದ ಕಾಟನ್ ಬಟ್ಟೆಗಳನ್ನು ಧರಿಸಬೇಕು.
  • ಮಧ್ಯಾಹ್ನ 11 ಗಂಟೆಯಿಂದ 3 ಗಂಟೆವರೆಗೆ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಿ.
  • ಬಿಸಿಲಿಗೆ ಹೋಗುವ ಸಂದರ್ಭವಿದ್ದರೆ ಛತ್ರಿ, ಕನ್ನಡಕ, ಟೋಪಿ, ಚಪ್ಪಲಿ ಇರಲಿ.
  • ಶ್ರಮದಾಯಕ ಚಟುವಟಿಕೆಗಳಿಂದ ದೂರವಿರಿ.
  • ಪದೇ ಪದೇ ಆಲ್ಕೋಹಾಲ್, ಕಾಫಿ, ಟೀ, ತಂಪು ಪಾನೀಯ ಕುಡಿಯುವುದನ್ನು ತಪ್ಪಿಸಿ, ಇವುಗಳಿಂದ ದೇಹ
  • ಬೇಗ ನಿರ್ಜಲಿಕರಣ ಆಗುತ್ತದೆ.
  • ಹಳೆಯ ಆಹಾರ ಸೇವನೆ ಮಾಡದೇ, ತಾಜಾ ಆಹಾರ ಸೇವಿಸಿ.
  • ಬಿಸಿಲಿನಲ್ಲಿ ವಾಹನ ನಿಲ್ಲಿಸಬೇಡಿ. ಅಂತಹ ವಾಹನಗಳಲ್ಲಿ ಮಕ್ಕಳು, ಪ್ರಾಣಿಗಳನ್ನು ಬಿಡುವುದನ್ನು ತಪ್ಪಿಸಿ.
  • ಮನೆಯಲ್ಲೇ ತಯಾರಿಸಿದ ಲಸ್ಸಿ, ಮಜ್ಜಿಗೆ, ಅಕ್ಕಿ ನೀರು, ನಿಂಬೆ ಶರಬತ್ತು ಕುಡಿಯಿರಿ.
  • ಮನೆಯ ಬಳಿ ತಂಪಾದ ವಾತಾವರಣ ಇರುವಂತೆ ಶೇಡ್‍ನೆಟ್ ಇತರೆ ಬಳಕೆ ಮಾಡಿ. ಆಗಾಗ ತಣ್ಣೀರು ಸ್ನಾನ ಮಾಡಿ.
Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version