ಮುಖ್ಯ ಸುದ್ದಿ
RAIN; ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು? ಈ ವರದಿ ಓದಿ..
CHITRADURGA NEWS | 15 JULY 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ ಸುರಿದ ಮಳೆ ವಿವರದನ್ವಯ ಹೊಳಲ್ಕೆರೆಯಲ್ಲಿ 13.4 ಮಿ.ಮೀ, ರಾಮಗಿರಿ 6.4 ಮಿ.ಮೀ, ಚಿಕ್ಕಜಾಜೂರು 9.2 ಮಿ.ಮೀ, ಬಿ.ದುರ್ಗ 8.2 ಮಿ.ಮೀ, ಹೆಚ್.ಡಿ.ಪುರ 12.3, ತಾಳ್ಯದಲ್ಲಿ 5.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: LAWYER; ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 10.8 ಮಿ.ಮೀ, ಬಾಗೂರು 7.2 ಮಿ.ಮೀ, ಮಾಡದಕರೆ 10 ಮಿ.ಮೀ, ಶ್ರೀರಾಂಪುರದಲ್ಲಿ 9 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 6.2 ಮಿ.ಮೀ, ಇಕ್ಕನೂರು 5.4 ಮಿ.ಮೀ, ಈಶ್ವರಗೆರೆ 3.2 ಮಿ.ಮೀ, ಬಬ್ಬೂರು 3.8 ಮಿ.ಮೀ, ಸೂಗೂರು 3.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: Rain Alert; ಚಿತ್ರದುರ್ಗ ಜಿಲ್ಲೆಗೆ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 5.4 ಮಿ.ಮೀ, ಚಿತ್ರದುರ್ಗ-2ರಲ್ಲಿ 5.4 ಮಿ.ಮೀ, ತುರುವನೂರು 4.4 ಮಿ.ಮೀ, ಭರಮಸಾಗರ 7 ಮಿ.ಮೀ, ಹಿರೇಗುಂಟನೂರು 1.1 ಮಿ.ಮೀ, ಸಿರಿಗೆರೆ 8.2 ಮಿ.ಮೀ ಹಾಗೂ ಐನಹಳ್ಳಿಯಲ್ಲಿ 13.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.