Connect with us

ಟೋಲ್‌ ಶುಲ್ಕ ಕಡಿತಕ್ಕೆ ವಾರದ ಗಡುವು | ವಾಹನ ನಿಲ್ಲಿಸಿ ಪ್ರತಿಭಟನೆ ಎಚ್ಚರಿಕೆ

GUILALA TOOL

ಮುಖ್ಯ ಸುದ್ದಿ

ಟೋಲ್‌ ಶುಲ್ಕ ಕಡಿತಕ್ಕೆ ವಾರದ ಗಡುವು | ವಾಹನ ನಿಲ್ಲಿಸಿ ಪ್ರತಿಭಟನೆ ಎಚ್ಚರಿಕೆ

CHITRADURGA NEWS | 05 JUNE 2024
ಚಿತ್ರದುರ್ಗ:‌ ಟೋಲ್‌ ಶುಲ್ಕ ಕಡಿತಗೊಳಿಸಲು ಒಂದು ವಾರ ಸಮಯ ಕೊಡುತ್ತೇವೆ. ಅಷ್ಟರ ಒಳಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು. ಹೆಚ್ಚಿಸಿರುವ ಶುಲ್ಕವನ್ನು ಕಡಿಮೆ ಮಾಡದೇ ಇದ್ದರೆ ಟೋಲ್ ಸಮೀಪ ಎಲ್ಲಾ ವಾಹನಗಳನ್ನು ತಂದು ನಿಲ್ಲಿಸಿ ಧರಣಿ ನಡೆಸುತ್ತೇವೆ ಎಂದು ಕ್ರೂಸರ್ ಮಾಲೀಕರು–ಚಾಲಕರ ಸಂಘದ ಪದಾಧಿಕಾರಿಗಳು ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.

ಟೋಲ್‌ ಸಂಗ್ರಹದ ಮೊತ್ತ ಹೆಚ್ಚಿಸಿರುವ ಕಾರಣ ತೀವ್ರ ಸಮಸ್ಯೆಯಾಗಿದೆ. ಸಾರಿಗೆ ಇಲಾಖೆಗೆ ತ್ರೈಮಾಸಿಕ ಶುಲ್ಕವಾಗಿ ₹4,165 ಕಟ್ಟುತ್ತಿದ್ದೇವೆ. ಚಿತ್ರದುರ್ಗ–ಹಿರಿಯೂರು ನಗರಗಳ ನಡುವೆ ಅಂದಾಜು 70 ವಾಹನಗಳು ಸಂಚರಿಸುತ್ತವೆ. ನೂರಾರು ಕುಟುಂಬಗಳು ಈ ವಾಹನಗಳ ಆದಾಯವನ್ನೇ ನಂಬಿ ಬದುಕುತ್ತಿವೆ. ಈ ಕಾರಣ ಕಡಿತಗೊಳಸುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕ್ಲಿಕ್ ಮಾಡಿ ಓದಿ: ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ

ಟೋಲ್ ಶುಲ್ಕ, ಸಾರಿಗೆ ಇಲಾಖೆ ತೆರಿಗೆ, ಡೀಸೆಲ್, ವಾಹನ ನಿರ್ವಹಣೆ ಎಲ್ಲವನ್ನು ಸರಿದೂಗಿಸಬೇಕಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಕ್ರೂಸರ್ ತರಹದ ವಾಹನಗಳತ್ತ ಪ್ರಯಾಣಿಕರು ಮುಖ ಮಾಡುತ್ತಿಲ್ಲ. ನಿಲ್ದಾಣಗಳಲ್ಲಿ ಗೋಗರೆದು ಹತ್ತಿಸಿಕೊಳ್ಳಬೇಕಿದೆ. ಹೀಗಾಗಿ, ಇನ್ನಷ್ಟು ಹೊರೆ ಎನಿಸಿರುವ ಟೋಲ್ ಶುಲ್ಕವನ್ನು ಇಳಿಸಲೇ ಬೇಕು ಎಂದು ಒತ್ತಾಯಿಸಿದರು.

ಕ್ಲಿಕ್ ಮಾಡಿ ಓದಿ: ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು

ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ವ್ಯವಸ್ಥಾಪಕರಿಗೆ ಕ್ರೂಸರ್ ಮಾಲೀಕರು–ಚಾಲಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು

ಟೋಲ್ ಸಂಗ್ರಹ ಆರಂಭವಾದ ಹೊಸತರಲ್ಲಿ ಕ್ರೂಸರ್, ಮ್ಯಾಕ್ಸಿಮಾ ಹಾಗೂ ಸುಪ್ರಾ ವಾಹನಗಳಿಂದ ತಿಂಗಳಿಗೆ ₹325 ಪಡೆಯಲಾಗುತ್ತಿತ್ತು. ಕೋವಿಡ್ ಆರಂಭವಾದ ನಂತರ ಮಾಸಿಕ ಶುಲ್ಕವನ್ನು ₹650ಕ್ಕೆ ಹೆಚ್ಚಿಸಲಾಯಿತು. ಆದರೆ ಈಗ ಮಾಸಿಕ ಪಾಸ್ ಬದಲಿಗೆ ದಿನವೊಂದಕ್ಕೆ ₹140 ಪಡೆಯಲಾಗುತ್ತಿದೆ. ಇದರಿಂದ ಟೋಲ್‌ಗೆಂದೇ ತಿಂಗಳಿಗೆ ₹4,200 ಪಾವತಿಸಬೇಕಿದೆ. ಇದು ತುಂಬಾ ದುಬಾರಿ. ಕೋವಿಡ್ ಸಮಯದಲ್ಲಿ ವಿಧಿಸುತ್ತಿದ್ದಂತೆ ತಿಂಗಳಿಗೆ ₹650ಕ್ಕೆ ಶುಲ್ಕ ಪಡೆಯಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಟೋಲ್ ವ್ಯವಸ್ಥಾಪಕ ಕಿರಣ್, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ, ಸ್ವಲ್ಪ ಕಾಲಾವಕಾಶ ಕೊಡಿ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೆ ಮುಂಗಾರು ಮಳೆ ಸಂಭ್ರಮ | ತುಂಬಿ ಹರಿದ ಹಳ್ಳಕೊಳ್ಳ

ಸಂಘದ ಅಧ್ಯಕ್ಷ ವಸಂತನಗರದ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಸೈಯದ್, ಕಾರ್ಯದರ್ಶಿ ಬದರೀನಾಥ್, ಖಜಾಂಚಿ ಸೈಯದ್ ಇಕ್ಬಾಲ್, ಇರ್ಫಾನ್ ಪಾಷಾ, ಗಜೇಂದ್ರ, ಮುನಿ, ಮುರಳಿ, ಸಿದ್ದಪ್ಪ, ನಜರ್, ಮಂಜುನಾಥ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version