ಮುಖ್ಯ ಸುದ್ದಿ
water level: ವಿವಿ ಸಾಗರಕ್ಕೆ ಹೆಚ್ಚಿದ ಒಳಹರಿವು | ಜಲಾಶಯದ ಇಂದಿನ ನೀರಿನ ಮಟ್ಟ
CHITRADURGA NEWS | 07 AUGUST 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ವೇದಾವತಿ ಹಾಗೂ ನೇತ್ರಾವತಿ ನದಿ ಮೂಲಕ ನೀರು ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಒಳ ಹರಿವು ಹೆಚ್ಚಾಗುತ್ತಿದೆ. ಆಗಸ್ಟ್ 7 ರ ಬೆಳಿಗ್ಗೆ 8 ಗಂಟೆಗೆ 1039 ಕ್ಯೂಸೆಕ್ ನೀರು ವಿವಿ ಸಾಗರ ಜಲಾಶಯ ಸೇರಿದೆ.
130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹಿಸಿಡಬಹುದು. ಸದ್ಯ ಹೊರ ಹರಿವು ಇಲ್ಲ. ಇದರಲ್ಲಿ ಕುಡಿಯುವ ಉದ್ದೇಶಕ್ಕಾಗಿ 13 ಕ್ಯೂಸೆಕ್ ಬಳಕೆಯಾಗುತ್ತಿದೆ. 134 ಕ್ಯೂಸೆಕ್ ಆವಿಯಾ ಪ್ರಮಾಣವಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ನೀರನ್ನು ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ.
ಇದನ್ನು ಓದಿ: ಮತ್ತೆ ಬಂದವು ಕರಡಿ | ಶುರುವಾಯಿತು ಆತಂಕ
ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 114.7 ಅಡಿ ಇದೆ. ಡ್ಯಾಮ್ ಭರ್ತಿಯಾಗಲು ಇನ್ನೂ 12 ಟಿಎಂಸಿ ಅಡಿ ನೀರು ಬೇಕಿದೆ. ಭದ್ರಾ ಜಲಾಶಯದಿಂದ ನಿತ್ಯವೂ 700 ಕ್ಯುಸೆಕ್ ನೀರು ಹರಿಸಿದರೆ 17 ದಿನಕ್ಕೆ ಒಂದು ಟಿಎಂಸಿ ಅಡಿಯಷ್ಟು ನೀರು ಬರಲಿದೆ. ಇದರ ಜೊತೆಗೆ ಉತ್ತಮ ಮಳೆಯಾದರೆ ಮತ್ತೊಮ್ಮೆ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.