ಹೊಸದುರ್ಗ
Gas Leakage; ಹೊಸದುರ್ಗದಲ್ಲಿ ವಾಟರ್ ಫಿಲ್ಟರ್ ಗ್ಯಾಸ್ ಸೋರಿಕೆ | 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
CHITRADURGA NEWS | 09 SEPTEMBER 2024
ಹೊಸದುರ್ಗ: ಹೊಸದುರ್ಗ ಪಟ್ಟಣದ APMC ಬಳಿ ಇರುವ ಪುರಸಭೆ ವಾಟರ್ ಪೀಲ್ಟರ್ ಪಂಪ್ ಹೌಸ್ ನಲ್ಲಿ ಸಿಲಿಂಡ್ ಸೋರಿಕೆ(Gas Leakage)ಯಾಗಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರಾದವರನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಸೆಪ್ಟಂಬರ್ 9 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಹೊಸದುರ್ಗದಲ್ಲಿ ವಾಟರ್ ಫಿಲ್ಟರ್ ಗ್ಯಾಸ್ ಸೋರಿಕೆ
ಕ್ಲೋರಿನ್ ಅನಿಲ ಸೋರಿಕೆಯಿಂದ ಫಿಲ್ಟರ್ ಹೌಸ್ ಬಳಿ ಸಂಚರಿಸಿದ ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.
ಹೊಸದುರ್ಗ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಕ್ಲೋರಿನ್ ಅನಿಲ ಸೋರಿಕೆಯನ್ನು ನಿಯಂತ್ರಣ ಮಾಡಿದ್ದಾರೆ.
ಕೆಲ್ಲೋಡು ಬ್ಯಾರೇಜ್ನಿಂದ ಸಪ್ಲೆ ಆಗುವ ನೀರನ್ನು ಫಿಲ್ಟರ್ ಮಾಡುವ ಹೌಸ್ ಇದಾಗಿದೆ.
ಸ್ಥಳಕ್ಕೆ ತಹಶಿಲ್ದಾರ್ ತಿರುಪತಿ ಪಾಟೀಲ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತಿಮ್ಮರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.