Dam: ವಿವಿ ಸಾಗರ ಜಲಾಶಯ ಬಹುತೇಕ ಭರ್ತಿ | ಕೋಡಿಯಲ್ಲಿ ಜಮಾವಣೆಯಾದ ನೀರು
CHITRADURGA NEWS | 27 OCTOBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ, ರಾಜ್ಯದ ಮೊದಲ ಅಣೆಕಟ್ಟು ಎಂದೇ ಖ್ಯಾತಿಯಾಗಿರುವ ಮೈಸೂರು ಮಹಾರಾಜರು ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ನಿರ್ಮಾಣ ಮಾಡಿರುವ ವಾಣಿವಿಲಾಸ ಸಾಗರ ಜಲಾಶಯ (Dam) ಬಹುತೇಕ ಭರ್ತಿಯಾಗಿದೆ.
ಅಧಿಕೃತವಾಗಿ ಇಲಾಖೆಯ ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ ಜಲಾಶಯ ಭರ್ತಿಯಾಗಬೇಕು ಎನ್ನುವುದನ್ನು ಬಿಟ್ಟರೆ ಈಗಾಗಲೇ ಡ್ಯಾಂ ತುಂಬಿದ್ದು, ಕೋಡಿಗೆ ನೀರು ಬಂದು ಜಮಾವಣೆಯಾಗಿದೆ.
ಇದನ್ನೂ ಓದಿ:
ಲಕ್ಕಿಹಳ್ಳಿ ಕಡೆಯಿಂದ ಸಿಗುವ ವಿವಿ ಸಾಗರದ ಬಲ ಬದಿಯಲ್ಲಿರುವ ಶ್ರೀ ಹಾರನಕಣಿವೆ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲೇ ಕೋಡಿ ಇದ್ದು, ಈಗಾಗಲೇ ನೀರು ಇಲ್ಲಿಗೆ ಬಂದಿದೆ.
ರಂಗಪ್ಪನ ದೇವಸ್ಥಾನದಿಂದ ಜನರಲ್ ತಿಮ್ಮಪ್ಪ ಸಾಹಸ ಅಕಾಡೆಮಿಗೆ ಹೋಗುವ ದಾರಿ ಬಹುತೇಕ ನೀರಿನಿಂದ ಆವೃತವಾಗಿದೆ.
ಇದನ್ನೂ ಓದಿ: ಹೆತ್ತ ತಂದೆಯನ್ನೇ ಕೊಂದ ಪಾಪಿ ಪುತ್ರ
ಜಲಾಶಯದ ಕೋಡಿ ಬಳಿಯಿರುವ ಸಿಮೆಂಟ್ ಕಟ್ಟೆಯನ್ನು ದಾಟಿ ನೀರು ಮುಂದೆ ಹರಿದರೆ ಜಲಾಶಯ ಕೋಡಿ ಬಿದ್ದಿದೆ ಎಂದು ಘೋಷಣೆಯಾಗುತ್ತದೆ. ಆದರೆ, ಆ ಭಾಗದ ರೈತರು ಕೋಲು, ಕಡ್ಡಿ ಹಿಡಿದು ಅಳತೆ ಮಾಡಿದಾಗ ಕೋಡಿಯ ಕಟ್ಟೆಯಿಂದ ಕೆಳಗೆ ಮೂರುಕಾಲು ಅಡಿ ಅಂತರಕ್ಕೆ ನೀರು ಬಂದಿದೆ.
ಜಲಾಶಯದಲ್ಲಿ ಇಂದು 27.69 ಟಿಎಂಸಿ ನೀರು ಸಂಗ್ರಹವಾಗಿದ್ದು, 130 ಅಡಿ ಎತ್ತರದ ಡ್ಯಾಮಿನಲ್ಲಿ 126.75 ಅಡಿವರೆಗೆ ನೀರು ಬಂದು ನಿಂತಿದೆ. ಅ.28 ಬೆಳಗ್ಗೆ ವೇಳೆಗೆ ಜಲಾಶಯಕ್ಕೆ 1386 ಅಡಿ ಕ್ಯೂಸೆಕ್ ಒಳಹರಿವು ಇದೆ.
ಇದನ್ನೂ ಓದಿ: 8. ಮೋಜಣಿಕೆ ಮಾಡಿದರು | ಹಬ್ಬಿದಾ ಮಲೆ ಮಧ್ಯದೊಳಗೆ
ಈ ಬಾರಿ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿದರೆ, ನಿರ್ಮಾಣವಾದ ನಂತರ ಈಗ ಮೂರನೇ ಬಾರಿಗೆ ಕೋಡಿ ಬೀಳುತ್ತಿದೆ ಎನ್ನಬಹುದು.
89 ವರ್ಷಗಳ ನಂತರ 2022ರಲ್ಲಿ ಕೋಡಿ ಬಿದ್ದಿದ್ದ ಜಲಾಶಯ ಮತ್ತೆ ಎರಡೇ ವರ್ಷದಲ್ಲಿ ಭರ್ತಿಯಾಗಿರುವುದು ಬಯಲು ಸೀಮೆ ರೈತರ ಸಂತಸಕ್ಕೆ ಪಾರವೇ ಇಲ್ಲ ಎನ್ನಬಹುದು.