ಮುಖ್ಯ ಸುದ್ದಿ
ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
CHITRADURGA NEWS | 18 JUNE 2024
ಚಿತ್ರದುರ್ಗ: ನಗರದ ವಿಆರ್‌ಎಸ್ ಬಡಾವಣೆಯ ರೇಣುಕಾಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ತಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ನಟ ದರ್ಶನ್ ಮತ್ತು ಆತನ ಸಹಚರರಿಂದ ಹತ್ಯೆಯಾಗಿರುವ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ವಿಜಯೇಂದ್ರ ಮಂಗಳವಾರ ಆಗಮಿಸುತ್ತಿದ್ದಾರೆ. ನಿಗಧಿಯಂತೆ ಬೆಳಿಗ್ಗೆ 10.45 ರಿಂದ 11.30 ರೊಳಗೆ ರೇಣುಕಾ ಸ್ವಾಮಿಗೆ ಮನೆಗೆ ಆಗಮಿಸಿ ರೇಣುಕಾಸ್ವಾಮಿ ಪತ್ನಿ, ತಂದೆ, ತಾಯಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಬೋವಿ ಗುರುಪೀಠಕ್ಕೆ ತೆರಳಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿಂದ ಚನ್ನಗಿರಿಗೆ ಪ್ರವಾಸ ಬೆಳೆಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: ರೇಣುಕಸ್ವಾಮಿ ಮನೆಗೆ ಗೃಹ ಸಚಿವರ ಬಾಲ ಹಿಡಿದು ಬರ್ತಾರಾ
ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಪ್ರವಾಸ ಪ್ರಾರಂಭಿಸಲಿರುವ ವಿಜಯೇಂದ್ರ 8.45ಕ್ಕೆ ತುಮಕೂರಿಗೆ ಆಗಮಿಸಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು ರೇಣುಕಾಸ್ವಾಮಿ ನಿವಾಸಕ್ಕೆ ಬರುತ್ತಿದ್ದಾರೆ.