ಕ್ರೈಂ ಸುದ್ದಿ
ಪಕ್ಕದ ಮನೆ ಗೆಳತಿ ಸೈಕಲ್ ಕೊಟ್ಟಿಲ್ಲವೆಂದು ಬಾಲಕಿ ಆತ್ಮಹತ್ಯೆ
CHITRADURGA NEWS | 26 APRIL 2025
ಹಿರಿಯೂರು: ಪಕ್ಕದ ಮನೆ ಗೆಳತಿ ಸೈಕಲ್ ಕೊಟ್ಟಿಲ್ಲ ಎಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಿರಿಯೂರಿನಲ್ಲಿ ನಡೆದಿದೆ.
Also Read: ಕಾಶ್ಮೀರದ ಉಗ್ರ ದಾಳಿ ಖಂಡಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ | ಬಗ್ಗು ಬಡಿಯಲು ಪ್ರಧಾನಿಗೆ ಮನವಿ
ಗೋಪಾಲ ಮತ್ತು ರುದ್ರಮ್ಮ ದಂಪತಿ ಪುತ್ರಿ ಸ್ಪಂದನಾ (ವರ್ಷ 11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮನೆಯಲ್ಲಿ ರೂಂ ಬಾಗಿಲು ಹಾಕಿಕೊಂಡು ಸ್ಪಂದನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಕ್ಕದ ಮನೆಯ ಸ್ನೇಹಿತೆ ಜೊತೆ ಬಾಲಕಿ ನಿತ್ಯ ಸೈಕಲ್ ಆಡುತ್ತಿದ್ದಳು. ಸದ್ಯ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
Also Read: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಇಳಿಕೆ ಕಂಡ ಅಡಿಕೆ
ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.