ಮುಖ್ಯ ಸುದ್ದಿ
ವಿಜೃಂಭಣೆಯ ಹಿರೇಗುಂಟನೂರು ದ್ಯಾಮಲಾಂಭ ದೇವಿ ರಥೋತ್ಸವ | ಸಹಸ್ರಾರು ಭಕ್ತರ ನಡುವೆ ಸಾಗಿದ ದೇವಿಯ ತೇರು

CHITRADURGA NEWS | 04 MAY 2024
ಚಿತ್ರದುರ್ಗ: ಹಿರೇಗುಂಟನೂರು ಶ್ರೀ ದ್ಯಾಮಲಾಂಭ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಮೇ.28 ರಿಂದ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವದಲ್ಲಿ ಸಿಡಿ, ತೇರು ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ಜರುಗಿದವು.
ಇದನ್ನೂ ಓದಿ: ದುರ್ಗದ ಅಧಿದೇವತೆಗಳ ಅದ್ದೂರಿ ಮೆರವಣಿಗೆ | ಏಕನಾಥೇಶ್ವರಿ, ಬರಗೇರಮ್ಮ ದೇವಿಯರ ಕಣ್ತುಂಬಿಕೊಂಡ ಭಕ್ತರು
ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಬಂದು ದೇವಿಯ ಜಾತ್ರೆಯಲ್ಲಿ ಭಾಗವಹಿಸಿ ಪುನೀತರಾದರು.
ಏಪ್ರಿಲ್ 28 ರಂದು ಸಂಜೆ ಕಲ್ಯಾಣೋತ್ಸವದ ಮೂಲಕ ಪ್ರಾರಂಭವಾದ ಜಾತ್ರಾ ಮಹೋತ್ಸವ, ಏ.29 ರಂದು ನವಿಲೋತ್ಸವ, ಏ.30 ರಂದು ಅಶ್ವೋತ್ಸವ, ಮೇ.1 ರಂದು ಮೀಸಲು ಪೂಜೆ, ಗಜೋತ್ಸವಗಳು ಜರುಗಿದವು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ
ಮೇ.2 ಸಂಜೆ 5 ಗಂಟೆಗೆ ಗ್ರಾಮದ ರಾಜ ಬೀದಿಯಲ್ಲಿ ದ್ಯಾಮಲಾಂಭ ದೇವಿಯ ರಥೋತ್ಸವ ಶ್ರದ್ಧಾಭಕ್ತಿಯಿಂದ ಸಾಗಿತು.

ವಿಜೃಂಭಣೆಯ ಹಿರೇಗುಂಟನೂರು ದ್ಯಾಮಲಾಂಭ ದೇವಿ ರಥೋತ್ಸವ |
ಮೇ.3 ರಂದು ಸಂಜೆ ಸಿಡಿ, ರಾತ್ರಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರು ದೇವಿಯ ಸೊಬಗನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ನಾಡಿನ ಬೇರೆ ಬೇರೆ ಜಿಲ್ಲೆಗಳು, ಹೊರ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಬಂದು ಭಾಗವಹಿಸಿದ್ದರು.
ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಟ್ರ್ಯಕ್ಟರ್, ಕಾರು ಸೇರಿದಂತೆ ವಿವಿಧ ರೀತಿಯ ವಾಹನಗಳಲ್ಲಿ ಹಿರೇಗುಂಟನೂರಿಗೆ ಆಗಮಿಸಿ ದೇವಿಯ ಜಾತ್ರೆಯಲ್ಲಿ ಭಾಗವಹಿಸಿದ ಭಕ್ತ ವೃಂದ ಈ ವರ್ಷ ಉತ್ತಮ ಮಳೆ, ಬೆಳೆಯಾಗಲೆಂದು ಪ್ರಾರ್ಥನೆ ಮಾಡಿದರು. ತಾವು ಮಾಡಿಕೊಂಡಿದ್ದ ಹರಕೆಗಳನ್ನು ತೀರಿಸಿದರು.
ಇದನ್ನೂ ಓದಿ: ಹಿರೇಗುಂಟನೂರು ದ್ಯಾಮಲಾಂಬ ದೇವಿ ಜಾತ್ರಾ ಮಹೋತ್ಸವ | ಸಿದ್ದತೆ ಪ್ರಾರಂಭ
