Connect with us

    ಅಪ್ಪಾಜಿ ನಡೆದಾಡಿದ ಚಿತ್ರದುರ್ಗ ನನ್ನೂರು | ಕೋಟೆನಾಡಲ್ಲಿ ಸೆಂಚುರಿ ಸ್ಟಾರ್‌ ಸಂಚಲನ | ಅಭಿಮಾನಿಗಳ ನಡುವೆ ಜತೆ ಹಾಡಿ, ಕುಣಿದ ಶಿವಣ್ಣ

    ಮುಖ್ಯ ಸುದ್ದಿ

    ಅಪ್ಪಾಜಿ ನಡೆದಾಡಿದ ಚಿತ್ರದುರ್ಗ ನನ್ನೂರು | ಕೋಟೆನಾಡಲ್ಲಿ ಸೆಂಚುರಿ ಸ್ಟಾರ್‌ ಸಂಚಲನ | ಅಭಿಮಾನಿಗಳ ನಡುವೆ ಜತೆ ಹಾಡಿ, ಕುಣಿದ ಶಿವಣ್ಣ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 MARCH 2024
    ಚಿತ್ರದುರ್ಗ: ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್‌ ಕೋಟೆನಾಡಿನಲ್ಲಿ ಅಭಿಮಾನಿಗಳ ಜತೆ ಹಾಡುತ್ತಾ, ಕುಣಿದು ಕುಪ್ಪಳಿಸಿದರು. ಮೈಕ್‌ ಹಿಡಿದು ವೇದಿಕೆ ಶಿವಣ್ಣ ಬರುತ್ತಿದ್ದಂತೆ ಚಿತ್ರದುರ್ಗದ ಬಸವೇಶ್ವರ ಚಿತ್ರ ಮಂದಿರದ ಆವರಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಜೈಕಾರ ಹಾಕಿದರು.

    ಯಶಸ್ವಿಯಾಗಿ ಮುನ್ನುಗುತ್ತಿರುವ ‘ಕರಟಕ ದಮನಕ’ ಚಿತ್ರದ ವಿಜಯ ಯಾತ್ರೆಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜಕುಮಾರ್‌ ಹಾಗೂ ನಿರ್ದೇಶಕ ಯೋಗರಾಜ್‌ ಭಟ್ ಅವರನ್ನು ಕಣ್ತುಂಬಿಕೊಳ್ಳಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

    ಚಿತ್ರದ ಟೈಟಲ್‌ ಸಾಂಗ್‌ ಹಾಡುತ್ತಲೆ ಸೂಪರ್‌ ಆಗಿ ಸ್ಟೇಪ್ ಹಾಕಿದ ಶಿವಣ್ಣ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ನೀವು ಎಲ್ಲೇ ಇರಿ ಆದರೆ ಊರಿನ ನಂಟು ಮಾತ್ರ ಬಿಡಬೇಡಿ. ನಾನು ನಮ್ಮೂರು ಗಾಜನೂರಿಗೆ ಹೋಗುವಂತೆ ನೀವು ಸಹ ನಿಮ್ಮೂರಿಗೆ ಹೋಗಿ ಅಲ್ಲಿನ ಹಬ್ಬ, ಜಾತ್ರೆಗಳಲ್ಲಿ ಸಂಭ್ರಮಿಸಿ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ತಿಳಿಸಿದರು.

    ಕ್ಲಿಕ್ ಮಾಡಿ ಓದಿ: https://chitradurganews.com/rescheduling-of-charges-against-muruga-sharanru/

    ‘ನನಗೆ ಚಿತ್ರದುರ್ಗ ಸಹ ಸ್ವಂತ ಊರಿನಂತೆ. ಅಪ್ಪಾಜಿ ಕಂಪನಿ ನಾಟಕಗಳಲ್ಲಿ ಅಭಿನಯಿಸಿದ್ದು ಸಹ ಇದೇ ಊರಿನಲ್ಲಿ. ಅಪ್ಪಾಜಿ ನಡೆದಾಡಿದ ಊರು ನಮ್ಮೂರು ಅಲ್ವಾ…ವೇದ ಚಿತ್ರದ ಹಾಡೊಂದನ್ನು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡಲಾಗಿತ್ತು. ಜೋಗಿ, ಮೈಲಾರಿ, ಶಿವ ಸೇರಿ ಹಲವು ಚಿತ್ರಗಳಿಗೆ ಇಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಪುಟ್ಟಣ್ಣ ಕಣಗಾಲ್‌ ಅವರು ಚಿತ್ರದುರ್ಗವನ್ನು ಸಿನಿಮಾಗಳಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.

    ‘ಪ್ರತಿಯೊಬ್ಬರೂ ಹುಟ್ಟಿದ ಊರುಗಳನ್ನು ಮರೆಯಬಾರದು. ಊರಿನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. ಊರಿನಲ್ಲಿರುವ ಬೇರುಗಳನ್ನು ಕಾಪಾಡಿಕೊಳ್ಳಬೇಕು. ಕೃಷಿ, ನೀರು ಕಾಪಾಡಿಕೊಳ್ಳಬೇಕು. ಈ ಸಿನಿಮಾ ಮಾಡುವಾಗ ಗಾಜನೂರು ತುಂಬಾ ಕಾಡಿತು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕ್ಲಿಕ್ ಮಾಡಿ ಓದಿ: https://chitradurganews.com/pr-thippeswamy-memorial-and-putthali-unveiling-minister-d-sudhakar/

    ‘ನಟ ಪ್ರಭುದೇವ ಅವರೊಂದಿಗೆ ಸಿನಿಮಾದಲ್ಲಿ ಅಭಿನಯಿಸಿದ್ದು ಖುಷಿ ಕೊಟ್ಟಿದೆ. ಇದೊಂದು ಅದ್ಭುತ ಜೋಡಿ ಎಂಬುದನ್ನು ಸಿನಿಮಾ ನೋಡಿದ ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಅತ್ಯುತ್ತಮ ಡಾನ್ಸರ್ ಹಾಗೂ ಕೊರಿಯೊಗ್ರಾಫರ್‌ ಪ್ರಭುದೇವ ಅವರೊಂದಿಗೆ ಹಲವು ಬಾರಿ ಚರ್ಚಿಸಿ ಚಿತ್ರ ರೂಪಿಸಿದ್ದೇವೆ. ನಿರ್ದೇಶಕ ಯೋಗರಾಜ್‌ ಭಟ್‌ ಅದ್ಭುತವಾದ ಕಥೆಯೊಂದನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ’ ಎಂದರು.

    ಕ್ಲಿಕ್ ಮಾಡಿ ಓದಿ: https://chitradurganews.com/application-invited-for-filling-9144-posts-in-railway-department/

    ‘ಹುಟ್ಟಿದ ಊರು, ಕುಡಿದ ನೀರು, ಅಲ್ಲಿನ ತೇರನ್ನು ಯಾರೂ ಮರೆಯಬಾರದು ಎನ್ನುವ ಸಂದೇಶ ಚಿತ್ರದಲ್ಲಿದೆ. ಚಿತ್ರದುರ್ಗ ಜನರು ಸಹೃದಯತೆ, ಪ್ರೀತಿಯಿಂದ ಕಾಣುತ್ತಾರೆ’ ಎಂದು ನಿರ್ದೇಶಕ ಯೋಗರಾಜ ಭಟ್ ಹೇಳಿದರು.

    ಜೆಡಿಎಸ್‌ ಮುಖಂಡ ಬಿ.ಕಾಂತರಾಜ್‌, ಬಸವೇಶ್ವರ ಚಿತ್ರಮಂದಿರ ಮಾಲೀಕ ಮಧು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top