Connect with us

    ಒನಕೆ ಓಬವ್ವ ವೃತ್ತಕ್ಕೆ ತರಕಾರಿ ತಂದ ಚಿಣ್ಣರು | ವಾರದ ಸಂತೆ ನಮ್ಮ ಜೊತೆ ಎಂದ ಎಸ್‌ಆರ್‌ಎಸ್‌ ಪುಟಾಣಿಗಳು

    ಮುಖ್ಯ ಸುದ್ದಿ

    ಒನಕೆ ಓಬವ್ವ ವೃತ್ತಕ್ಕೆ ತರಕಾರಿ ತಂದ ಚಿಣ್ಣರು | ವಾರದ ಸಂತೆ ನಮ್ಮ ಜೊತೆ ಎಂದ ಎಸ್‌ಆರ್‌ಎಸ್‌ ಪುಟಾಣಿಗಳು

    CHITRADURGA NEWS | 07 FEBRUARY 2024
    ಚಿತ್ರದುರ್ಗ: ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಎಸ್‌ಆರ್‌ಎಸ್‌ ಹೆರಿಟೇಜ್‌ ಶಾಲೆಯ ಪುಟಾಣಿಗಳು ‘ವಾರದ ಸಂತೆ ನಮ್ಮ ಜೊತೆ’ ಎನ್ನುತ್ತಾ ತರಕಾರಿ ಸಂತೆ ನಡೆಸಿದರು.

    ಇದನ್ನೂ ಓದಿ: ಕೋಟೆನಾಡಿಗೆ ಬರುತ್ತಿದ್ದಾರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ

    ಶಾಲೆಯ 5 ನೇ ತರಗತಿಯ 150 ವಿದ್ಯಾರ್ಥಿಗಳು ಹಿರಿಯುರು ನಾಚುವಂತೆ ಸಂತೆ ನಡೆಸಿದರು. ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಹೀರೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಬೀನ್ಸ್‌, ಆಲೂಗಡ್ಡೆ, ಸೌತೆಕಾಯಿ, ಎಲೆಕೋಸು, ಮೂಲಂಗಿ, ಬಟಾನಿ, ಜವಳಿಕಾಯಿ, ಮೆಣಸಿನಕಾಯಿ, ಸೊಪ್ಪು- ಮೆಂತ್ಯ, ಪುದೀನ, ಕೊತ್ತುಂಬರಿ, ಸಬ್ಸಿಗೆ, ಅರಿವೆ ಕರಿಬೇವು, ಪಾಲಕ್‌, ನಿಂಬೆಹಣ್ಣು ಹೀಗೆ ಬಗೆ ಬಗೆಯ ಮತ್ತು ತಾಜಾ ತರಕಾರಿಗಳನ್ನು ಮಾರಾಟ ಮಾಡಿದರು.

    ಇದನ್ನೂ ಓದಿ: ರಾಜೇಂದ್ರ ಸಿಂಗ್ ಬಾಬು ಸೇರಿ ಐವರಿಗೆ ಭಗೀರಥ ರತ್ನ ಪ್ರಶಸ್ತಿ | ಭಗೀರಥ ಶ್ರೀಗಳ ರಜತ ಮಹೋತ್ಸವ

    ಈ ಮೇಳದಲ್ಲಿ ಪೋಷಕರು ಶಿಕ್ಷಕರು, ಸಾರ್ವಜನಿಕರು,ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ತರಕಾರಿಗಳನ್ನು ವಿದ್ಯಾರ್ಥಿಗಳೊಂದಿಗೆ ಚೌಕಾಸಿ ಮಾಡಿ ಖರೀದಿಸಿದರು.

    ಇದನ್ನೂ ಓದಿ: ಸಾಹಿತಿ ಬಿ.ಎಲ್‌.ವೇಣು ಅವರಿಗೆ ಸಂದ ಮದಕರಿ ನಾಯಕ ಪ್ರಶಸ್ತಿ ಗೌರವ – ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಅಂತಿಮ ಸಿದ್ಧತೆ

    ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತರಕಾರಿ ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಎಸ್‌ಆರ್‌ಎಸ್‌ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್‌.ಅಮೋಘ, ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್‌.ರವಿ, ಶೈಕ್ಷಣಿಕ ಸಂಯೋಜಕ ಡಿ.ಎಂ.ಜಗದೀಶ್‌, ಸಹ ಪಠ್ಯೇತರ ವಿಭಾಗ ಸಂಯೋಜಕ ಸುನೀಲ್‌ ಭಟ್‌, ಪ್ರಾಂಶುಪಾಲ ಎಂ.ಎಸ್‌.ಪ್ರಭಾಕರ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top