ಹಿರಿಯೂರು
Vani vilasa Sagar: ಮತ್ತಷ್ಟು ಹೆಚ್ಚಾಯಿತು ವಾಣಿ ವಿಲಾಸ ಒಳಹರಿವು | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ ?
Published on
CHITRADURGA NEWS | 04 OCTOBER 2024
ಚಿತ್ರದುರ್ಗ: ಜಿಲ್ಲೆಯ ಕೆಲ ಭಾಗ ಹಾಗೂ ಭದ್ರಾ ಜಲಾಶಯ, ಎತ್ತಿನಹೊಳೆಯಿಂದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಾಗಿದೆ.
ಭದ್ರಾ ಜಲಾಶಯದಿಂದ ಪ್ರತಿ ದಿನ 500 ರಿಂದ 650 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ, ಅಕ್ಟೋಬರ್ 04 ರಂದು ನಡೆಸಿದ ಮಾಪನದ ವೇಳೆ ಒಳಹರಿವಿನ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಕ್ಲಿಕ್ ಮಾಡಿ ಓದಿ: ನೋಟಿಸ್ ನೀಡಿಲ್ಲ, ಬೆಳೆ ಪರಿಹಾರ ಕೊಡುತ್ತಿಲ್ಲ | ಭದ್ರಾ ಕಾಮಗಾರಿ ನಡೆಸಲು ಬಿಡುವುದಿಲ್ಲ
ಅ.4 ರಂದು ಬೆಳಗ್ಗೆ ವೇಳೆಗೆ ವಿವಿ ಸಾಗರ ಜಲಾಶಯಕ್ಕೆ 1386 ಕ್ಯೂಸೆಕ್ ನೀರು ಹರಿದು ಬಂದಿದೆ. ಮಳೆ ಇನ್ನೂ ಇರುವುದರಿಂದ ಈ ಒಳಹರಿವು ಹೆಚ್ಚಾಗುವ ಸಾಧ್ಯತೆಯೂ ಇದೆ.135 ಅಡಿ ಎತ್ತರದ ವಿವಿ ಸಾಗರದಲ್ಲಿ ಸದ್ಯ 122.60 ಅಡಿವರೆಗೆ ನೀರು ಬಂದಿದೆ.
Continue Reading
You may also like...
Related Topics:Chitradurga, Chitradurga news, Hiriyur, Inflow, Kannada Latest News, Rain, Updates, Vanivilasa, ಅಪ್ಡೇಟ್ಸ್, ಒಳಹರಿವು, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಮಳೆ, ವಾಣಿವಿಲಾಸ, ಹಿರಿಯೂರು
Click to comment