ಮುಖ್ಯ ಸುದ್ದಿ
ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ದುರ್ಗಕ್ಕೆ ಆಗಮನ | ಪ್ರತಿಭಟನನಿರತ ರೈತರ ಭೇಟಿ

CHITRADURGA NEWS | 11 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ ಎಂಬ ಸ್ಪಷ್ಟ ಸಂದೇಶ ಕೇಂದ್ರದಿಂದ ರವಾನೆಯಾದ ಬೆನ್ನಲ್ಲೇ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಅವರು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಾರೆ. ಇವರ ಪ್ರವಾಸ ಹಾಗೂ ದಿನದ ಕಾರ್ಯಕ್ರಮಗಳು ಕುತೂಹಲ ಮೂಡಿಸಿವೆ.
ಫೆ.1 ಭಾನುವಾರ ಚಿತ್ರದುರ್ಗಕ್ಕೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ 6ನೇ ವಾರ್ಡ್ ವ್ಯಾಪ್ತಿಯ ಸದಾನಂದಯ್ಯ ಬಡಾವಣೆಯಲ್ಲಿ ‘ಮೋದಿ ಮಗದೊಮ್ಮೆ’ ಗೋಡೆ ಬರಹಕ್ಕೆ ಬೆಳಿಗ್ಗೆ 9.30ಕ್ಕೆ ಚಾಲನೆ ನೀಡಲಿದ್ದಾರೆ. ಅಯೋಧ್ಯೆಗೆ ಹೊರಡುವ ವಿಶೇಷ ರೈಲಿಗೆ ಬೆಳಿಗ್ಗೆ 10ಕ್ಕೆ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಬೆಳಿಗ್ಗೆ 11ಕ್ಕೆ ಜಿಲ್ಲಾ ಗಂಗಾಬಿಕೆ ಬೆಸ್ತರ ಸಂಘದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ಚಿತ್ರದುರ್ಗ | ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ
ಭದ್ರಾ ಮೇಲ್ದಂಡೆ ಯೋಜನೆಯ ಅನುದಾನಕ್ಕೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಧ್ಯಾಹ್ನ 12ಕ್ಕೆ ಸಚಿವರು ಭೇಟಿ ಮಾಡಲಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮಕ್ಕೆ 12.30ಕ್ಕೆ ತೆರಳಲಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಚಿವರು ರೈತರಿಗೆ ಏನೂ ಹೇಳುತ್ತಾರೆ ಎಂಬುದು ಸದ್ಯದ ಕುತೂಹಲ.
