ಮುಖ್ಯ ಸುದ್ದಿ
ನಾಲೆ ದಡ ಒಡೆದು ನುಗ್ಗುತ್ತಿವೆ ಟ್ರಾಕ್ಟರ್ | ಹೂಳು ತೆಗೆಯುವ ಅವೈಜ್ಞಾನಿಕ ಕ್ರಮಕ್ಕೆ ಆಕ್ರೋಶ
ಚಿತ್ರದುರ್ಗನ್ಯೂಸ್.ಕಾಂ
ನಾಲೆಯ ದಡವನ್ನು ಒಡೆದು, ಟ್ರಾಕ್ಟರ್‌ಗಳನ್ನು ನಾಲೆಯ ಒಳಗೆ ಇಳಿಸಿ ಹೂಳು ತೆಗೆಯುವುದನ್ನು ಮೊದಲು ನಿಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಏಕಾಂತಪ್ಪ ಒತ್ತಾಯಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಬಬ್ಬೂರು ಸಮೀಪ ಹಾದು ಹೋಗಿರುವ ವಾಣಿವಿಲಾಸ ಜಲಾಶಯದ ಎಡನಾಲೆಯಲ್ಲಿ ಅವೈಜ್ಞಾನಿಕವಾಗಿ ಹೂಳು ತುಂಬಲಾಗುತ್ತಿದೆ. ಇದರಿಂದ ನಾಲೆ ಸಂಪೂರ್ಣವಾಗಿ ಹಾಳುಗುತ್ತಿದೆ ಎಂದು ದೂರಿದ್ದಾರೆ.
ಬಬ್ಬೂರು ಗ್ರಾಮದ ಎಕೆ ಕಾಲೊನಿ ಸಮೀಪ ನಾಲೆಯ ದಡವನ್ನು ಒಡೆದು, ಟ್ರಾಕ್ಟರ್‌ಗಳನ್ನು ನಾಲೆಯ ಒಳಗೆ ಇಳಿಸಿ ಮಣ್ಣು ತುಂಬಲಾಗುತ್ತಿದೆ. ಇದರಿಂದ ನಾಲೆಯ ದಡ ಹಾಳಾಗಿದ್ದು, ಜಲಾಶಯದಿಂದ ನೀರು ಬಿಟ್ಟಾಗ ನೀರು ವ್ಯರ್ಥವಾಗಿ ಹರಿದು ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೋರ್ಟ್ ನೋಟೀಸ್ ಬಂದ ದಿನವೇ ಮಾರಣಾಂತಿಕ ಹಲ್ಲೆ | 6 ವರ್ಷ ಕಠಿಣ ಜೈಲು ಶಿಕ್ಷೆ
ನಾಲೆಯನ್ನು ಒಡೆದು ಹಾಕಿರುವ ಕಾರಣ ನಾಲೆಗೆ ನೀರು ಹರಿಸಿದಾಗ ಸಮೀಪ ಇರುವ ಮನೆಗಳಿಗೆ ನುಗ್ಗುವ ಅಪಾಯವಿದೆ. ಆದ್ದರಿಂದ ಮಣ್ಣು ತುಂಬುವ ಕೆಲಸವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ವಕ್ತಾರರಾಗಿ ಕೆ.ಎಸ್.ನವೀನ್ ನೇಮಕ | ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ
ಈ ವಿಚಾರವಾಗಿ ಮಾತನಾಡಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ‘ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿರುವ ಕಾರಣ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವಾದ ಬಿದರಕೆರೆ ಕಡೆಗೆ ನೀರು ಹೋಗುತ್ತಿರಲಿಲ್ಲ. ಹೀಗಾಗಿ ರೈತರಿಗೆ ಉಚಿತವಾಗಿ ಹೂಳು ತುಂಬಿಕೊಳ್ಳಲು ಅನುಮತಿ ನೀಡಿದ್ದೇವೆ. ಮಣ್ಣು ಫಲವತ್ತತೆಯಿಂದ ಕೂಡಿರುವ ಕಾರಣ ತೋಟದ ಬೆಳೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.