Connect with us

Power outage: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

Power outage on May 1

ಮುಖ್ಯ ಸುದ್ದಿ

Power outage: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

CHITRADURGA NEWS | 06 DECEMBER 2024

ಚಿತ್ರದುರ್ಗ: ಬೆಸ್ಕಾಂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ವಿ.ವಿ ಕೇಂದ್ರದ ಆವರಣದಲ್ಲಿ ಬೃಹತ್ ಕಾಮಗಾರಿ ವಿಭಾಗ ಕೆ.ಪಿ.ಟಿ.ಸಿ.ಎಲ್ ನವರು 66 ಕೆ.ವಿ ಗೋಪುರ ನಿರ್ಮಾಣ ಹಮ್ಮಿಕೊಂಡಿರುವುದರಿಂದ (ನಾಳೆ) ಡಿ.7ರಂದು ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ(Power outage) ಉಂಟಾಗಲಿದೆ.

ಕ್ಲಿಕ್ ಮಾಡಿ ಓದಿ: ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್ | ಮಂಡಲ ಅಧ್ಯಕ್ಷ ಸಿದ್ದೇಶ್ ಏನು ಹೇಳಿದ್ರು?

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

66/11 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ 11ಕೆವಿ ಮಾರ್ಗಗದ ಅನ್ನೆಹಾಳ್, ಹುಲ್ಲೂರು ಎನ್.ಜೆ.ವೈ, ಪಂಡರಹಳ್ಳಿ ಕಾವಲಹಟ್ಟಿ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಸಿಂಗಾಪುರ, ಕಕ್ಕೇರು, ಕಾವಲಹಟ್ಟಿ, ಮಹದೇವನಕಟ್ಟೆ, ಗೊಡಬನಾಳ್, ಸೊಂಡೆಕೊಳ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version