ಮುಖ್ಯ ಸುದ್ದಿ
Chitradurga fort: ಕೋಟೆಯ ಒನಕೆ ಓಬವ್ವನ ಕಿಂಡಿಯಲ್ಲಿ ಕುಸಿದು ಬಿದ್ದ ವ್ಯಕ್ತಿ | ಸಕಾಲಕ್ಕೆ ಹೊತ್ತು ತಂದು ಆಸ್ಪತ್ರೆ ಸೇರಿಸಿ ರಕ್ಷಿಸಿದ ಪ್ರವಾಸಿ ಮಿತ್ರರು
CHITRADURGA NEWS | 10 AUGUST 2024
ಚಿತ್ರದುರ್ಗ: ಕೋಟೆಯಲ್ಲಿರುವ (Chitradurga fort) ಒನಕೆ ಓಬವ್ವನ ಕಿಂಡಿಯಲ್ಲಿ ನುಸುಳುತ್ತಿದ್ದ ಪ್ರವಾಸಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಅಲ್ಲಿಂದ ಹೊರಗೆ ಹೊತ್ತು ತಂದು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಅಪರೂಪದ ಘಟನೆ ಶನಿವಾರ ನಡೆದಿದೆ.
ಕೋಟೆಯಲ್ಲಿ ಒನಕೆ ಓಬವ್ವನ ಕಿಂಡಿ ಬಳಿ ಹೋದ ಪ್ರವಾಸಿಗರು ಓಬವ್ವ ಹೈದರಾಲಿಯ ಸೈನಿಕರನ್ನು ಸದೆಬಡಿದ ದೃಶ್ಯವನ್ನು ಅನುಕರಿಸಿ ಕಿರಿದಾದ ಕಿಂಡಿಯಲ್ಲಿ ನುಸುಳಿ ಪೋಟೊ ತೆಗೆಸಿಕೊಳ್ಳುವ ಸಾಹಸ ಮಾಡುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಇದನ್ನೂ ಓದಿ: ನಮ್ಮೂರಿನ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ವೋಟ್ ಮಾಡಿ | ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ ನೋಡಿ
ಅದೇ ರೀತಿ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಯೊಬ್ಬರು ಒನಕೆ ಓಬವ್ವನ ಕಿಂಡಿಯಲ್ಲಿ ನುಸಿಯಲು ಹೋಗಿದ್ದಾರೆ. ಕಿಂಡಿಯ ಒಳಗಿರುವ ಹೆಬ್ಬಂಡೆಗಳು ಹಾಗೂ ನುಸುಳಲು ಇರುವ ಅತ್ಯಂತ ಕಿರಿದಾದ ಜಾಗ ನೋಡಿ ಗಾಬರಿಯಾಗಿದ್ದಾರೆ.
ಈ ವೇಳೆ ಎದೆ ನೋವು ಕಾಣಿಸಿಕೊಂಡು ಅಲ್ಲೇ ಕುಸಿದು ಬಿದ್ದಿದ್ದಾರೆ. ಕಿಂಡಿಯ ಹೊರಗಿದ್ದ ವ್ಯಕ್ತಿಯ ಮಕ್ಕಳು ಮತ್ತು ಪತ್ನಿ ಗಮನಿಸಿ ಆತಂಕದಿಂದ ಕೂಗಿಕೊಂಡಿದ್ದಾರೆ.
ಇದನ್ನೂ ಓದಿ: ಕಣಿವೆ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ | ಶ್ರಾವಣ ಮಾಸದ ವಿಶೇಷ ಪೂಜೆ ಉತ್ಸವ
ಅಲ್ಲೇ ಇದ್ದ ಪ್ರವಾಸಿ ಮಿತ್ರರನ್ನು ಕೂಗಿಕೊಂಡು ಪತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ತಕ್ಷಣ ಪ್ರವಾಸಿ ಮಿತ್ರರಾದ ರವಿಕುಮಾರ್, ಮಾರುತಿ, ಮಲ್ಲಿಕಾರ್ಜುನ್ ಮತ್ತಿತರರು ನೆರವಿಗೆ ಬಂದು ಆ ವ್ಯಕ್ತಿಯನ್ನು ಅಲ್ಲಿಂದ ಸ್ಟ್ರೆಚ್ಚರ್ ಸಹಾಯದಿಂದ ಕೋಟೆಯ ಪ್ರವೇಶ ದ್ವಾರಕ್ಕೆ ಹೊತ್ತು ತಂದು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಪಡೆದ ನಂತರ ಗುಣಮುಖರಾದ ವ್ಯಕ್ತಿಯನ್ನು ಕುಟುಂಬದವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಅಡಿಕೆ, ದಾಳಿಂಬೆ ಮತ್ತು ಮಾವು ಬೆಳೆವಿಮೆ ನೋಂದಣಿ | ಆಗಸ್ಟ್ 16 ಕೊನೆ ದಿನ
ಸಕಾಲಕ್ಕೆ ನೆರವಾಗಿ ಕೋಟೆಯೊಳಗೆ ಕಡಿದಾದ ದಾರಿಯಲ್ಲಿ ಎದೆನೋವು ಕಾಣಿಸಿಕೊಂಡ ವ್ಯಕ್ತಿಯನ್ನು ಹೊತ್ತು ತಂದು ಆಸ್ಪತ್ರೆ ಸೇರಿಸಿದ ಪ್ರವಾಸಿ ಮಿತ್ರರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.