Connect with us

    ಇಂದು ಮದಕರಿ ನಾಯಕರ ಪುಣ್ಯಸ್ಮರಣೆ | ಮದಕರಿ ನಾಯಕರ ಸಾಧನೆ ಸ್ಮರಿಸಿದ ನಾಡಿನ ಗಣ್ಯರು

    ವೀರ ಮದಕರಿ ನಾಯಕ

    ಮುಖ್ಯ ಸುದ್ದಿ

    ಇಂದು ಮದಕರಿ ನಾಯಕರ ಪುಣ್ಯಸ್ಮರಣೆ | ಮದಕರಿ ನಾಯಕರ ಸಾಧನೆ ಸ್ಮರಿಸಿದ ನಾಡಿನ ಗಣ್ಯರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 15 MAY 2024

    ಚಿತ್ರದುರ್ಗ: ಅತ್ಯಂತ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಮಾಡಿದ ನಾಡದೊರೆ, ದುರ್ಗದ ಹುಲಿ, ಗಂಡುಗಲಿ ಮದಕರಿ ನಾಯಕರ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದೆ.

    ನಾಡಿನ ಹಲವು ಗಣ್ಯರು ಮದಕರಿ ನಾಯಕರ ಪುಣ್ಯಸ್ಮರಣೆಯ ಭಾವಚಿತ್ರಗಳನ್ನು ತಮ್ಮ ಫೇಸ್‍ಬುಕ್, ಎಕ್ಸ್(ಟ್ವಿಟರ್) ಖಾತೆಗಳಲ್ಲಿ ಹಾಕುವ ಮೂಲಕ ಸ್ಮರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮ ದೇವಿಗೆ ಬಂಗಾರದ ಮುಖಪದ್ಮ

    ಬಿಜೆಪಿ ಕರ್ನಾಟಕ, ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಚಿವರಾದ ಬಿ.ನಾಗೇಂದ್ರ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಬಿ.ಶ್ರೀರಾಮುಲು, ಗೋವಿಂದ ಎಂ.ಕಾರಜೋಳ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಆರಗ ಜ್ಞಾನೇಂದ್ರ ಮದಕರಿ ನಾಯಕರ ಕಿರಿ ವಯಸ್ಸಿನ ಸಾಧನೆಯನ್ನು ಶ್ಲಾಘಿಸಿದ್ದಾರೆ.

    ಇದನ್ನೂ ಓದಿ: ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ

    ಶಾಸಕರಾದ ಟಿ.ರಘುಮೂರ್ತಿ, ಎ.ಆರ್.ಕೃಷ್ಣಮೂರ್ತಿ, ಗುರುರಾಜ್ ಗಂಟಿಹೊಳಿ, ಜ್ಯೋತಿ ಗಣೇಶ್, ಎಸ್.ಮುನಿರಾಜು, ಜೆ.ಟಿ.ಪಾಟೀಲ್, ಗುರ್ಮೆ ಸುರೇಶ್ ಶೆಟ್ಟಿ, ಎಸ್.ಆರ್.ವಿಶ್ವನಾಥ್, ನಯನ ಮೋಟಮ್ಮ, ಶರಣು ಸಲಗರ, ಸಿಮೆಂಟ್ ಮಂಜು, ಡಾ.ಭರತ್ ಶೆಟ್ಟಿ, ಭಾರತಿ ಶೆಟ್ಟಿ, ಶಾರದಾ ಪೂರ್ಯನಾಯ್ಕ್, ಡಾ.ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಪಿ.ರಾಜೀವ್. ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಡಿ.ಸಿ.ತಮ್ಮಣ್ಣ, ಪ್ರಮುಖರಾದ ಹರಿಪ್ರಕಾಶ್ ಕೋಣೆಮನೆ, ಶರಣು ಅಂಗಡಿ, ರಾಜು ಎಂ.ತಲ್ಲೂರು, ಡಾ.ನಾಗಲಕ್ಷ್ಮೀ, ಎಸ್.ಎಂ.ಹರೀಶ್‍ಗೌಡ, ಡಾ.ಸೈಯದ್ ರೋಷನ್ ಅಬ್ಬಾಸ್, ಡಾ.ಗೋಪಾಲ ಕಾರಜೋಳ ಸೇರಿದಂತೆ ಹಲವು ರಾಜಕೀಯ ನಾಯಕರು ಸ್ಮರಣೆ ಮಾಡಿದ್ದಾರೆ.

    ಇದನ್ನೂ ಓದಿ: ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು

    ಡಿ.ಬಾಸ್ ಫ್ಯಾನ್ಸ್ ಪೇಜ್, ಕಿಚ್ಚ ಸುದೀಪ್ ಫ್ಯಾನ್ಸ್ ಪೇಜ್, ಸೌತ್ ವೆಸ್ಟ್ರನ್ ರೈಲ್ವೇ ಪೇಜ್, ಕರ್ನಾಟಕ ನಾಯಕರು ಪೇಜ್, ಹರಿವು ಬುಕ್ಸ್ ಸೇರಿದಂತೆ ಸಹಸ್ರಾರು ಜನ ಮದಕರಿ ನಾಯಕರ ಅಭಿಮಾನಿಗಳು ಮದಕರಿ ನಾಯಕರನ್ನು ಸ್ಮರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top