ಕ್ರೈಂ ಸುದ್ದಿ
ಟೈಯರ್ ಬ್ಲಾಸ್ಟ್ | ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್ | ಪ್ರಯಾಣಿಕರು ಬಚಾವ್
Published on
CHITRADURGA NEWS | 21 DECEMBER 2024
ಚಿತ್ರದುರ್ಗ: ನೋಡು ನೋಡುತ್ತಲೇ ಬಸ್ಸೊಂದು ನಡು ರಸ್ತೆಯಲ್ಲೇ ಧಗ ಧಗನೇ ಹೊತ್ತಿ ಉರಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ಬಳಿಯಿರುವ ಗುಯಿಲಾಳು ಟೋಲ್ ಬಳಿ ಖಾಸಗಿ ಸಂಸ್ಥೆಗೆ ಸೇರಿದ ಬಸ್ಸೊಂದು ಟೈಯರ್ ಬ್ಲಾಸ್ಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಧಗಧಗಿಸಿದೆ.
ಇದನ್ನೂ ಓದಿ: ನಿಮ್ಮ ಕಷ್ಟ ಕಾಲದಲ್ಲಿ ಜೊತೆಗಿದ್ದು ಋಣ ತೀರಿಸುತ್ತೇನೆ | ಕಾರ್ಯಕರ್ತರಿಗೆ ಸಿ.ಟಿ.ರವಿ
ಬೆಂಕಿಯ ಕೆನ್ನಾಲಿಗೆ ಮುಗಿಲು ಮುಟ್ಟಿದೆ. ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದೆ.
ಬಸ್ಸಿನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರನ್ನೂ ಕೆಳಗೆ ಇಳಿಸಲಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Continue Reading
Related Topics:accident, Chitradurga, Chitradurga news, featured, Fire, Guilallu Toll, Highway, Kannada News Chitradurga Updates, Private Bus, Tire Blast, ಅಪಘಾತ, ಕನ್ನಡ ಸುದ್ದಿ ಚಿತ್ರದುರ್ಗ ಅಪ್ಡೇಟ್ಸ್, ಖಾಸಗಿ ಬಸ್, ಗುಯಿಲಾಳು ಟೋಲ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಟೈಯರ್ ಬ್ಲಾಸ್ಟ್, ಬೆಂಕಿ, ಹೆದ್ದಾರಿ
Click to comment