ಮುಖ್ಯ ಸುದ್ದಿ
ಕೋಟೆನಾಡಿಗೆ ಹೊಸ ವರ್ಷಕ್ಕೆ ವರುಣಾಗಮನ; ಮೂರು ದಿನ ಮಳೆ
ಚಿತ್ರದುರ್ಗ ನ್ಯೂಸ್.ಕಾಂ
ವರ್ಷಾಂತ್ಯ ಸಮೀಪಿಸುತ್ತಿದ್ದಂತೆ ಚಳಿಯ ತೀವ್ರತೆ ಸಹ ಹೆಚ್ಚಾಗುತ್ತಿದೆ. ಮುಂಜಾನೆ, ಇಳಿ ಸಂಜೆ ವೇಳೆಗೆ ಜಿಲ್ಲಾದ್ಯಂತ ಮೈ ಕೊರೆವ ಚಳಿ ಜನರನ್ನು ನಡುಗಿಸುತ್ತಿದೆ. ಇಂತಹ ವಾತಾವರಣಕ್ಕೆ ಮಳೆರಾಯ ಸಹ ಜತೆಯಾಗಲು ಸಿದ್ಧತೆ ನಡೆಸಿದ್ದಾನೆ.
ಇದನ್ನೂ ಓದಿ: ಗರ್ಭದಲ್ಲೇ ಉಸಿರು ನಿಲ್ಲಿಸಿದ ಕಂದಮ್ಮ; ವೈದ್ಯರ ನಿರ್ಲಕ್ಷ್ಯಕ್ಕೆ ಬಾರದ ಲೋಕಕ್ಕೆ ಪಯಣಿಸಿದ ಶಿಕ್ಷಕಿ; ಮುಗಿಲು ಮುಟ್ಟಿದ ಆಕ್ರಂದನ
ಹಸಿರು ಬರದಿಂದ ದಿಕ್ಕು ತೋಚದ ಸ್ಥಿತಿಗೆ ಸಿಲುಕಿರುವ ಜಿಲ್ಲೆಗೆ ವರುಣಾಗಮನಕ್ಕೆ ದಿನಗಣನೆ ಶುರುವಾಗಿದೆ. ಜನವರಿ 1 ರಿಂದ ಮೂರು ದಿನ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಗುರುವಾರ ರಾತ್ರಿ ವೇಳೆಗೆ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಇನ್ನೂ ನಾಲ್ಕೈದು ದಿನಕ್ಕೆ ಒಂದರೆಡು ಡಿಗ್ರಿ ಸೆಲ್ಸಿಯಸ್ ನಷ್ಟು ಏರುಪೇರಾಗುವ ಸಾಧ್ಯತೆ ಇದೆ. ಶೇ 38 ರಷ್ಟು ಮೋಡ ಮುಸುಕಿದ ವಾತಾವರಣವಿದ್ದು, ಗಾಳಿಯ ಗುಣಮಟ್ಟ ತುಂಬಾ ಅನಾರೋಗ್ಯಕರವಾಗಿದೆ.
ಇದನ್ನೂ ಓದಿ: ಹತ್ತು ಲಕ್ಷ ದರೋಡೆ ಪ್ರಕರಣ; ಒಂದೇ ತಿಂಗಳಲ್ಲಿ ಆರೋಪಿ ಬಂಧನ
ಆರೋಗ್ಯ ಸಮಸ್ಯೆ ಇರುವವರು ಸಾಧ್ಯವಾದಷ್ಟು ಮನೆಯಲ್ಲಿದ್ದರೆ ಉತ್ತಮ. ಆರೋಗ್ಯಕರ ವ್ಯಕ್ತಿಗಳು ಸಹ ಉಸಿರಾಟದ ಸಮಸ್ಯೆ ಮತ್ತು ಗಂಟಲಿನ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಮುಂಜಾನೆ, ಸಂಜೆ ಮನೆಯಿಂದ ಹೊರಗೆ ಬಾರದಿರುವುದು ಉತ್ತಮ ಎನ್ನುತ್ತದೆ ಹವಾಮಾನ ಇಲಾಖೆ ಸೂಚನೆ.
ಇದನ್ನೂ ಓದಿ: ಮುರುಘಾ ಶ್ರೀ ಪ್ರಕರಣ; ಎರಡನೇ ಆರೋಪಿ ವಾರ್ಡನ್ ರಶ್ಮಿ ಬಿಡುಗಡೆ