ಮುಖ್ಯ ಸುದ್ದಿ
SRS ಶಾಲೆಯಲ್ಲಿ ಬೆಳಗಿದವು ಸಾವಿರಾರು ದೀಪಗಳು

ಚಿತ್ರದುರ್ಗ ನ್ಯೂಸ್.ಕಾಂ: ಚಳ್ಳಕೆರೆ ನಗರದ SRS ಹೆರಿಟೇಜ್ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಿಸಲಾಯಿತು.
ಸುಮಾರು 5-6 ಸಾವಿರ ದೀಪಗಳನ್ನು ಬೆಳಗಿಸಿ, ಕರ್ನಾಟಕ ರಾಜ್ಯದ ನಕ್ಷೆ ಹಾಗೂ ಎಸ್ ಆರ್ ಎಸ್ ಶಾಲೆಯ ಲೋಗೋವನ್ನು ದೀಪಗಳ ಬೆಳಕಿನಲ್ಲಿ ಮೂಡಿಸಲಾಯಿತು. ಈ ಅದ್ಬುತ ದೃಶ್ಯ ಕಣ್ಮನ ಸೆಳೆಯಿತು.
ಹೂವು ಹಾಗೂ ಮಣ್ಣಿನ ದೀಪಗಳ ಅಲಂಕಾರ ವಿಶೇಷ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಸಂಘಟಕರು ಸೇರಿ ದೀಪಗಳನ್ನು ಬೆಳಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಇದನ್ನೂ ಓದಿ: ಚಿತ್ರಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಎಸ್ ಆರ್ ಎಸ್ ಸಂಸ್ಥೆಯ ನಿರ್ದೇಶಕಿ ಲಿಖಿತಾ ಅಮೋಘ್ ದೀಪಾವಳಿ ಹಬ್ಬದ ಶುಭಾಷಯ ಕೋರುತ್ತಾ, ದೀಪಾವಳಿಯನ್ನು ದೀಪಗಳನ್ನು ಬೆಳಗಿಸಿ ಆಚರಣೆ ಮಾಡಬೇಕು. ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳನ್ನು ವಿವರಿಸಿದರು.
ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ, ಶಾಲೆಯ ಪ್ರಾಂಶುಪಾಲರಾದ ಬಿ.ಎಸ್. ವಿಜಯ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
