Connect with us

ರಾಜ್ಯದಲ್ಲಿರುವುದು ಖಾಲಿ ಕೈ ಸರ್ಕಾರ | ಬಂಗಾರು ಹನುಮಂತು

ಪರಿಶಿಷ್ಟ ಪಂಗಡ ಮುನ್ನಡೆಯ ಬಿಜೆಪಿ ಜಿಲ್ಲಾ ಸಮಾವೇಶ

ಚಳ್ಳಕೆರೆ

ರಾಜ್ಯದಲ್ಲಿರುವುದು ಖಾಲಿ ಕೈ ಸರ್ಕಾರ | ಬಂಗಾರು ಹನುಮಂತು

CHITRADURGA NEWS | 24 FEBRUARY 2024

ಚಿತ್ರದುರ್ಗ: ರಾಜ್ಯದ ಕೈ ಸರ್ಕಾರ ಈಗ ಖಾಲಿ ಕೈ ಸರ್ಕಾರವಾಗಿದೆ, ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿದ ಗ್ಯಾರೆಂಟಿಗಳಿಗೆ ಹಣವನ್ನು ನೀಡುವ ಸಲುವಾಗಿ ಎಸ್.ಇ.ಪಿ. ಮತ್ತು ಟಿ.ಎಸ್.ಪಿ ಯೋಜನೆಯ ಹಣವನ್ನು ಪಡೆದು ದುರ್ಬಳಕೆಯನ್ನು ಮಾಡಿದೆ ಎಂದು ಬಿಜೆಪಿಯ ಪರಿಶಿಷ್ಟ ಪಂಗಡ ಘಟಕದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆರೋಪಿಸಿದ್ದಾರೆ.

ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡದ ಮುನ್ನಡೆಯ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಅವರು,

ಇದನ್ನೂ ಓದಿ: ಚಿತ್ರದುರ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಮುಹೂರ್ತ ಫಿಕ್ಸ್| ಅಮೃತ್ ಭಾರತ್ ರೈಲ್ವೆ ಯೋಜನೆಯಡಿ ಕಾಮಗಾರಿ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲೇಬೇಕು ಎಂಬ ದೃಷ್ಟಿಯಿಂದ ರಾಜ್ಯದ ಮತದಾರರಿಗೆ ವಿವಿಧ ರೀತಿಯ ಆಸೆ-ಆಮಿಷಗಳನ್ನು ನೀಡಿತ್ತು, ಇದನ್ನು ನಂಬಿದ ಮತದಾರರು ಕಾಂಗ್ರೇಸ್‍ಗೆ ಮತವನ್ನು ಹಾಕುವುದರ ಮೂಲಕ ಅಧಿಕಾರವನ್ನು ನೀಡಿದರು. ಈಗ ಕಾಂಗ್ರೆಸ್ ಅಧಿಕಾರವನ್ನು ಹಿಡಿದು ಮತದಾರರಿಗೆ ನೀಡಿದ ಮಾತನ್ನು ಉಳಿಸುವ ಸಲುವಾಗಿ ವಿವಿಧ ಯೋಜನೆಗಳ ಹಣವನ್ನು ಪಡೆಯುವುದರ ಮೂಲಕ ಆ ಜನಾಂಗಕ್ಕೆ ಅನ್ಯಾಯವನ್ನು ಮಾಡುತ್ತಿದೆ ಇದು ನಮ್ಮ ನಾಯಕ ಜನಾಂಗಕ್ಕೂ ಸಹಾ ಆನ್ವಯಾಗುತ್ತಿದೆ, ನಮಗೂ ಸಹಾ ಕಾಂಗ್ರೆಸ್ ಪಕ್ಷ ಮೋಸಮಾಡುತ್ತಿದೆ ಎಂದು ತಿಳಿಸಿದರು.

ನಮ್ಮ ಜನಾಂಗಕ್ಕೆ ಮೀಸಲಾತಿಯನ್ನು ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ, ಆದರೆ ಇದರ ಬಗ್ಗೆ ಯಾವ ಸರ್ಕಾರವೂ ಸಹಾ ಗಮನ ನೀಡಿರಲಿಲ್ಲ ಅದರೆ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ನಮ್ಮ ಜನಾಂಗಕ್ಕೆ ಇದ್ದ ಶೇ.3ರ ಮೀಸಲಾತಿಯ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಳ ಮಾಡುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದೆ. ಸಂಘ ಪರಿವಾರದ ವಾದಿರಾಜು ರವರು ನಮ್ಮ ಜನಾಂಗದ ಮೇಲೆ ಆಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಇದರ ಪರಿಣಾಮವಾಗಿ ಸರ್ಕಾರ, ಸಮಾಜದ ಗುರುಗಳಿಗೆ ಹಾಗೂ ಎಸ್.ಸಿ.ಎಸ್.ಟಿ.ಗಳಿಗೆ ಸೇತುವೆ ರೀತಿಯಲ್ಲಿ ಕೆಲಸವನ್ನು ಮಾಡುವುದರ ಮೂಲಕ ಮೀಸಲಾತಿಯ ಪ್ರಮಾಣ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ನಮ್ಮ ಸಮುದಾಯ ಮೀಸಲಾತಿಯನ್ನು ಪಡೆಯುವಲ್ಲಿ ಅವರು ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ ಎಂದರು.

ಇದನ್ನೂ ಓದಿ: ಜನಮನ ರಂಜಿಸಿದ ಸಿದ್ದಯ್ಯನಕೋಟೆ ಜನಪರ ಉತ್ಸವ| ಜಾನಪದ ಸೊಗಡು ಅನಾವರಣ

ಎಸ್.ಸಿ.ಎಸ್.ಟಿ. ಅನುದಾನದ ಸುಮಾರು 11,134 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಅನುದಾನವನ್ನು ರ್ದುಬಳಕೆ ಮಾಡಿಕೊಂಡಿದೆ. ಈಗ ನಾವುಗಳು ಒಗ್ಗಟಾಗಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿಯೂ ಸಹಾ ನಮ್ಮ ಪಾಲಿನ ಅನುದಾನವನ್ನು ರ್ದುಬಳಕೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ, ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಇವರಿಗೆ ತಕ್ಕ ಪಾಠವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ಬಿಜೆಪಿಯೊಂದಿಗೆ ಕೈಜೋಡಿಸಿ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕು ಎಂದು ಹೇಳಿದರು.

ಪರಿಶಿಷ್ಟ ಪಂಗಡ ಮುನ್ನಡೆಯ ಬಿಜೆಪಿ ಜಿಲ್ಲಾ ಸಮಾವೇಶ

ಮಾಜಿ ಶಾಸಕರಾದ ನೇರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸುವ ಕಾರ್ಯ ಇದಾಗಿದೆ. ಈ ಜನಾಂಗವನ್ನು ಬರೀ ಚುನಾವಣೆಯಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ನಂತರ ಅವರನ್ನು ಕೈ ಬಿಡಲಾಗುತ್ತದೆ. ನಮ್ಮ ಸರ್ಕಾರ ಇವರಿಗಾಗಿ ಮಾಡಿದ ಕೆಲಸಗಳನ್ನು ತಿಳಿಸುವ ಕಾರ್ಯ ಇದಾಗಿದೆ.

ಇದನ್ನೂ ಓದಿ: ಪತ್ನಿ ಮೇಲೆ ಬಿತ್ತು ಸ್ವಾಮಿ ಕಣ್ಣು | ಹಾರಿತು ಪ್ರಾಣ ಪಕ್ಷಿ | ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಳೆದ 30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿತು ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಸಹಾ ಇದರ ಬಗ್ಗೆ ಕೂಗಿ ಎತ್ತಲಾಗಿತ್ತಾರೆ ಅದು ಪ್ರಯೋಜನವಾಗಲಿಲ್ಲ, ಆದರೆ ಬಿಜೆಪಿ ಸರ್ಕಾರ ಇದ್ದಾಗ ಇದರ ಬಗ್ಗೆ ಗಮನ ನೀಡುವುದರ ಮೂಲಕ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಿದರು. ಇದನ್ನು ಮತದಾರರಿಗೆ ನಮ್ಮ ಸಮುದಾಯದವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಬಿಜೆಪಿ ಸರ್ಕಾರ ಮೀಸಲಾತಿಯನ್ನು ನೀಡಿದರು ಸಹಾ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು, ಇದಕ್ಕೆ ನಮ್ಮವರೆ ಕಾರಣರಾಗಿದ್ದಾರೆ. ನಮ್ಮವರೆ ನಮ್ಮ ಕಾಲೆಳೆದಿದ್ದಾರೆ, ಆಂತರಿಕದಿಂದ ಪಕ್ಷ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತೆಂದರು.

ರಾಜ್ಯದಲ್ಲಿ ನಮ್ಮ ಪಾಲಿನ ಹಣವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡು ಗ್ಯಾರೆಂಟಿಗಳಿಗೆ ನೀಡಿದ್ದಾರೆ, ನಮ್ಮನ್ನು ಮೂಲೆ ಗುಂಪು ಮಾಡಿದ್ದಾರೆ. ಈಗಿನ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ, ಗೋಶಾಲೆಗಳನ್ನು ಇದುವರೆವಿಗೂ ತೆರೆದಿಲ್ಲ, ಇರುವ ಕಡೆಯಲ್ಲಿ ಗೋವುಗಳಿಗೆ ಮೇವು ನೀರು ನೀಡಿಲ್ಲ, ರೈತರ ಕಷ್ಟಗಳನ್ನು ಕೇಳುವವರಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಳ್ಳಾರಿ ಅಥವಾ ರಾಯಚೂರಿನಲ್ಲಿ ಟಿಕೇಟ್ ನೀಡಿದರೆ ಗೆದ್ದು ಬರುತ್ತೇವೆ. ಪಕ್ಷ ಇದರ ಬಗ್ಗೆ ಪರೀಶೀಲನೆಯನ್ನು ನಡೆಸಬೇಕಿದೆ ಎಂದರು.

ಇದನ್ನೂ ಓದಿ: ಸಿರಿಗೆರೆ ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ| ಸದ್ಧರ್ಮ ಸಿಂಹಾಸನಾರೋಹಣಕ್ಕೆ ಕ್ಷಣಗಣನೆ

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಸಮುದಾಯಕ್ಕೆ ಉತ್ತಮವಾದ ಕೆಲಸವನ್ನು ಮಾಡಿದೆ ಇದೇ ರೀತಿ ಕೇಂದ್ರ ಸರ್ಕಾರವೂ ಸಹಾ ಮಾಡಿದೆ, ಇದರ ಋಣವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತವನ್ನು ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕಿದೆ. ಇದು ಸಮಾಜದ ಮೇಲೆ ಇರುವ ಋಣವಾಗಿದೆ. ಇದ್ದಲ್ಲದೆ ಕೇಂದ್ರ ಸರ್ಕಾರ ಈ ಸಮುದಾಯಕ್ಕೆ ಮಾಡಿದ ಕಾರ್ಯವನ್ನು ಪ್ರತಿಯೊಂದು ಗ್ರಾಮದ ಮತದಾರರಿಗೂ ತಿಳಿಸುವ ಕಾರ್ಯವನ್ನು ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಣ್ಣ, ಪರಿಶಿಷ್ಟ ಘಟಕದ ಉಪಾಧ್ಯಕ್ಷ ಅನಿತ್, ಪ್ರಧಾನ ಕಾರ್ಯದರ್ಶಿ ರಾಮದಾಸ್, ವಾದಿರಾಜ್, ಶ್ರೀನಿವಾಸ್, ಜಯಪಾಲಯ್ಯ, ಓಬಳೇಶ್, ಸಂಪತ್ ದಗ್ಗೆ ಶಿವಪ್ರಕಾಶ್, ರಾಜೇಶ್ವರಿ, ಗೋಪಾಲಕೃಷ್ಣ, ಸೂರೇನಹಳ್ಳಿ ಶ್ರೀನಿವಾಸ್, ಅರುಣ್ ಕುಮಾರ್ ಗಂಗಾಧರ್, ವಿಜಯಕುಮಾರ್, ವೆಂಕಟೇಶ್, ಪಾಲಣ್ಣ, ಇತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version