ಮುಖ್ಯ ಸುದ್ದಿ
ಪತ್ನಿ ಮೇಲೆ ಬಿತ್ತು ಸ್ವಾಮಿ ಕಣ್ಣು | ಹಾರಿತು ಪ್ರಾಣ ಪಕ್ಷಿ | ಇಬ್ಬರಿಗೆ ಜೀವಾವಧಿ ಶಿಕ್ಷೆ
CHITRADURGA NEWS | 24 FEBRUARY 2024
ಚಿತ್ರದುರ್ಗ: ಪತ್ನಿಯನ್ನು ಕೆಟ್ಟದೃಷ್ಟಿಯಿಂದ ನೋಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸ್ನೇಹಿತ ಜತೆ ಸೇರಿ ಕೊಲೆ ಪತಿ ಕೊಲೆ ಮಾಡಿದ್ದ. ಇದೀಗ ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದ ಮಂಜುನಾಥ ಹಾಗೂ ಮಂಜಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾದವರು. ಇದೇ ಗ್ರಾಮದ ಸ್ವಾಮಿ ಎಂಬಾತ ಮಂಜುನಾಥ್ ಪತ್ನಿಯ ಮೇಲೆ ಕೆಟ್ಟ ದೃಷ್ಟಿ ಬೀರಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಕುಪಿತಗೊಂಡ ಮಂಜುನಾಥ್ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಗ್ರಾಮದ ಹೊರಭಾಗಕ್ಕೆ ಸ್ವಾಮಿಯನ್ನು ಕರೆದೊಯ್ದು 2022ರ ಜೂನ್ 8ರಂದು ಕೊಲೆ ಮಾಡಿದ್ದರು.
ಇದನ್ನೂ ಓದಿ: ಸಿರಿಗೆರೆಗೆ ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಆಗಮನ | ಸದ್ಧರ್ಮ ಸಿಂಹಾಸನಾರೋಹಣಕ್ಕೆ ಕ್ಷಣಗಣನೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ಗುರುವಾರ ಆದೇಶ ಪ್ರಕಟಿಸಿದರು. ಪ್ರಕರಣದ ತನಿಖೆ ನಡೆಸಿದ್ದ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಬಾಲಚಂದ್ರ ನಾಯ್ಕ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಎನ್.ಎಸ್.ಮಲ್ಲಯ್ಯ ಸರ್ಕಾರದ ಪರ ವಾದ ಮಂಡಿಸಿದ್ದರು.