ಕ್ರೈಂ ಸುದ್ದಿ
ಈಜಲು ಹೋಗಿದ್ದ ಯುವಕ ನೀರು ಪಾಲು | ಸಂಬಂಧಿಕರ ಆಕ್ರಂಧನ
CHITRADURGA NEWS | 29 DECEMBER 2024
ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ಮುಳುಗಿ ಮೃತಪ್ಟಿರುವ ಘಟನೆ ನಡೆದಿದೆ.
ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಸಾಗರ ಜಲಾಶಯ | ಇಂದಿನ ನೀರಿನ ಮಟ್ಟ
ಚಳ್ಳಕೆರೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಮೃತ ಯುವಕನನ್ನು 19 ವರ್ಷದ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಸಮಿಪದ ತಿಪ್ಪಯ್ಯನಕೊಟೆ ಕೆರೆಯಲ್ಲಿ ಈಜಕಿ ಹೋಗಿದ್ದಾಗ ದುರಂತ ನಡೆದಿದೆ.
ಶನಿವಾರ ಸ್ನೇಹಿತರ ಜೊತೆ ಈಜಲು ಹೋಗಿದ್ದ ಶಿವಕುಮಾರ್, ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದಾಗ ಬಂದು ಹುಡುಕಾಟ ನಡೆಸಿದ್ದಾರೆ. ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ.
ಕ್ಲಿಕ್ ಮಾಡಿ ಓದಿ: ರೈಲ್ವೆ ಹಳಿ ನವೀಕರಣ | ರಸ್ತೆ ಮಾರ್ಗ ಬದಲಾವಣೆ
ಅಗ್ನಿಶಾಮಕ ಸಿಬ್ಬಂದಿ ಹಾಗು ಪೊಲೀಸರು ಮೃತ ದೇಹವನ್ನು ಹುಡುಕಿ ಹೊರಗೆ ತೆಗೆದಿದ್ದಾರೆ.
ಕೆರೆಯಲ್ಲಿ ಯುವಕನ ಶವ ಪತ್ತೆಯಾಗುತ್ತಿದ್ದಂತೆ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.
ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.