ಚಳ್ಳಕೆರೆ
Maghe Male: ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ | ಅಡಿಕೆ ತೊಟ ಜಲಾವೃತ
Published on
CHITRADURGA NEWS | 17 AUGUST 2024
ಚಿತ್ರದುರ್ಗ: ಮಘೇ ಮಳೆ (Maghe Male) ಜಿಲ್ಲೆಯ ಉತ್ತಮ ಶುಭಾರಂಭ ಮಾಡಿದೆ. ಪರಿಣಾಮ ಶುಕ್ರವಾರ ರಾತ್ರಿಯೇ ಜಿಲ್ಲೆಯಾದ್ಯಂತ ಹದವಾದ ಮಳೆಯಾಗಿದೆ.
ರಾತ್ರಿ ಸುರಿದ ಮಳೆಗೆ ಚಳ್ಳಕೆರೆ ತಾಲೂಕಿನ ಹಲವು ಜಮೀನುಗಳು ಜಲಾವೃತಗೊಂಡಿವೆ. ಚಳ್ಳಕೆರೆ ತಾಲೂಕಿನ ವಿಡುಪನಕುಂಟೆ ಗ್ರಾಮದ ಅಡಿಕೆ ತೋಟ ಜಲಾವೃತವಾಗಿದೆ.
ಇದನ್ನೂ ಓದಿ: ವರ ಮಹಾಲಕ್ಷ್ಮೀ ಹಬ್ಬದ ದಿನವೇ ಲಕ್ಷಾಂತರ ಕಳ್ಳತನ | ಮನೆ ಮತ್ತು ಅಡಿಕೆ ಗೋಡಾನ್ ನುಗ್ಗಿದ ಗ್ಯಾಂಗ್
ಇನ್ನೂ ಮಳೆ ನೀರಿಗೆ ರಸ್ತೆ ಕೊಚ್ಚಿ ಹೋಗಿದ್ದು, ಎನ್.ದೇವರಹಳ್ಳಿ ಬಳಿ ಹಳ್ಳದ ಹರಿವಿಗೆ ರಸ್ತೆಯೊಂದು ಕೊಚ್ಚಿ ಹೋದ ಘಟನೆ ನಡೆದಿದೆ.
ನೇರ್ಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ದೇವರಹಳ್ಳಿ – ಭೀಮನಕೆರೆ ನಡುವಿನ ರಸ್ತೆ ಕಿತ್ತು ಹೋಗಿದ್ದು, ವಾಹನಗಳು ಓಡಾಡುವುದು ಕಷ್ಟವಾಗಿದೆ.
Continue Reading
You may also like...
Related Topics:Challakere, Chitradurga, Chitradurga Updates, Garden Waterlogged, heavy rain, Kannada Latest News, Karnataka News, Maghe Rain, ಕನ್ನಡ ಲೇಟೆಸ್ಟ್ ನ್ಯೂಸ್, ಕರ್ನಾಟಕ ಸುದ್ದಿ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ತೋಟ ಜಲಾವೃತ, ಭಾರೀ ಮಳೆ, ಮಘೇ ಮಳೆ
Click to comment