ಹೊಸದುರ್ಗ
ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ
CHITRADURGA NEWS | 19 MAY 2024
- ಒಂದೇ ಮಳೆಗೆ ತುಂಬಿದ ಕೆರೆ
- ಮಳೆ ರಭಸಕ್ಕೆ ಕೊಚ್ಚಿ ಹೋದ ರಸ್ತೆ
- ಹಲವು ಗ್ರಾಮಗಳ ಸಂಪರ್ಕ ಕಡಿತ
ಹೊಸದುರ್ಗ: ಭೀಕರ ಬರದ ದಿನಗಳನ್ನು ಮರೆಯಿಸಿ, ರೈತರಲ್ಲಿ ಸಂತಸ ಮೂಡುವಂತೆ ವರುಣದೇವ ಕೃಪೆ ತೋರಿದ್ದಾನೆ.
ಕೋಟೆನಾಡು ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೇ.18 ಶನಿವಾರ ರಾತ್ರಿ ಉತ್ತಮವಾದ ಮಳೆಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಧಾರಾಕಾರ ಮಳೆ | ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆ
ಕೆಲವೆಡೆ ಬಿರು ಮಳೆ ಸುರಿದರೆ, ಇನ್ನೂ ಕೆಲವೆಡೇ ರಾತ್ರಿಯಿಡೀ ನೆನೆ ಮಳೆಯಾಗಿದೆ. ಕಾದು ಕಾವಲಿಯಂತಾಗಿದ್ದ ಭೂಮಿ ನೆನೆ ನೆನೆದು ನೀರು ಕುಡಿದಿದೆ. ಪರಿಣಾಮ, ಕೆರೆ ಕಟ್ಟೆಗಳಿಗೆಲ್ಲಾ ನೀರು ಹರಿದಿದೆ.
ಹೊಸದುರ್ಗ ತಾಲೂಕಿನ ಕಡದಿನಕೆರೆ ಗ್ರಾಮದ ಬಳಿ ಶನಿವಾರ ರಾತ್ರಿ ಮಳೆಗೆ ರಸ್ತೆಯೇ ಕಿತ್ತುಕೊಂಡು ಹೋಗಿದೆ.
ಕೆರೆಯ ಪಕ್ಕದಲ್ಲೇ ಇದ್ದ ರಸ್ತೆಯ ಮೇಲಿನ ಡಾಂಬರ್ ಸಮೇತ ಕಿತ್ತು ಹೋಗಿದ್ದು, ಈ ಭಾಗದ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲೊಂದು ರಸ್ತೆ ಇತ್ತು ಎನ್ನುವ ಅನುಮಾನ ಮೂಡುವಂತಾಗಿದೆ.
ಇದನ್ನೂ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಹೊಸದುರ್ಗದಿಂದ ಕಡದಿನಕೆರೆ, ಚೌಳಹಿರಿಯೂರು, ಕೊರಟಿಕೆರೆ, ಕಂಗುವಳ್ಳಿ ಸೇರಿದಂತೆ ಕಡೂರುವರೆಗೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ರಾತ್ರಿ ಮಳೆಗೆ ಕಾಣೆಯಾಗಿದೆ.
ಇದರಿಂದ ಈ ಭಾಗದ ಜನ ಸದ್ಯಕ್ಕೆ ಹೊಸದುರ್ಗ ಮತ್ತಿತರೆಡೆ ಹೋಗಲು ಬೇರೆ ಊರುಗಳ ಮೂಲಕ ಸುತ್ತಿ ಬಳಸಿ ಓಡಾಡುವಂತಾಗಿದೆ.
ಇದನ್ನೂ ಓದಿ: ಜಯದೇವ ಗುರುಗಳ ನೆಚ್ಚಿನ ಶಿಷ್ಯ ಜಯವಿಭವ ಸ್ವಾಮೀಜಿ | ಮುರುಘಮಠದಲ್ಲಿ ಸ್ಮರಣೋತ್ಸವ
ಭದ್ರಾ ಮೇಲ್ದಂಡೆ ಯೋಜನೆಯಡಿ ಕಡದಿನಕೆರೆಗೆ ನೀರು ತುಂಬಿಸಲು ಪೈಪ್‍ಲೈನ್ ಕಾಮಗಾರಿ ನಡೆಸಿದ್ದ ಕಾರಣ ಸಡಿಲಗೊಂಡಿದ್ದ ರಸ್ತೆ ರಾತ್ರಿ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.
ಒಂದೇ ಮಳೆಗೆ ಕೋಡಿ ಬಿದ್ದ ಕೆರೆ:
ಶನಿವಾರ ತಡರಾತ್ರಿವರೆಗೆ ಸುರಿದ ಒಂದೇ ಮಳೆಗೆ ಕಡದಿನಕೆರೆ ಊರ ಮುಂದಿನರುವ ಕೆರೆ ತುಂಬಿ ಕೋಡಿ ಬಿದ್ದಿದೆ.
ಸುಮಾರು 20 ಎಕರೆ ಪ್ರದೇಶದಲ್ಲಿರುವ ಈ ಕೆರೆ ಒಂದೇ ಮಳೆಗೆ ತುಂಬಿ ಕೋಡಿ ಬಿದ್ದಿರುವುದು ಇದೇ ಮೊದಲಿರಬೇಕು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.