Connect with us

    ಕೇಂದ್ರ ಬಜೆಟ್ ಬಗ್ಗೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಸಮಧಾನ

    ಬಿ.ಎ.ಲಿಂಗಾರೆಡ್ಡಿ

    ಮುಖ್ಯ ಸುದ್ದಿ

    ಕೇಂದ್ರ ಬಜೆಟ್ ಬಗ್ಗೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಸಮಧಾನ

    https://chat.whatsapp.com/Jhg5KALiCFpDwME3sTUl7x

    CHITRDURGA NEWS | 01 FEBRUARY 2024

    ಚಿತ್ರದುರ್ಗ: ಮಧ್ಯ ಕರ್ನಾಟಕ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಂದ್ರ ಬಜೆಟ್‍ನಲ್ಲಿ ಪ್ರಸ್ತಾಪ ಆಗದಿರುವ ಬಗ್ಗೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.

    ಕಳೆದ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ 5300 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ, ಈವರೆಗೆ ಹಣ ಬಿಡಗಡೆ ಆಗಿಲ್ಲ. ಇಂದು ಮಂಡನೆಯಾದ ಬಜೆಟ್‍ನಲ್ಲಿ ಮತ್ತೆ ಪ್ರಸ್ತಾಪವಾಗುವ ನಿರೀಕ್ಷೆ ಇತ್ತು. ಆದರೆ, ಆಗಿಲ್ಲ ಈ ಬಗ್ಗೆ ಪ್ರಸ್ತಾಪ ಆಗಿಲ್ಲ. ಒಮ್ಮೆ ಬಜೆಟ್‍ನಲ್ಲಿ ಪ್ರಸ್ತಾಪ ಆದರೆ, ಮತ್ತೆ ಆಗುವುದಿಲ್ಲ ಎನ್ನುವ ಮಾಹಿತಿ ಇದೆ. ಆದರೆ, ಕಳೆದ ಬಜೆಟ್‍ನಲ್ಲಿ ಘೋಷಣೆಯಾದ ಅನುದಾನದಲ್ಲಿ ಈವರೆಗೆ ಒಂದು ಪೈಸೆ ಬಿಡುಗಡೆ ಆಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ | ಇನ್ನು ಮುಂದೆ 2 ಹೆಕ್ಟೇರ್ ವರೆಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ

    ಭದ್ರಾ ಮೇಲ್ಡಂಡೆ ಬದಲು ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ (PಒಏSಙ_ಂIಃP) ಅಡಿ ಅನುದಾನ ಒದಗಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿತ್ತು.

    ಈ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಕೇಂದ್ರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ವರ್ಷಗಳು ಉರುಳಿದರೂ ಹಣ ಬಿಡುಗಡೆಯಾಗಿಲ್ಲ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಈ ಬಗ್ಗೆ ಜಿಲ್ಲೆಯ ಜನತೆ ಮುಂದೆ ಸ್ಪಷ್ಟನೆ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.

    ಇದನ್ನೂ ಓದಿ: ವಿವಾಹಿತೆಯ ಪ್ರೀತಿಗೆ ಪೀಡಿಸಿ ಆಕೆಯ ಗಂಡನ ಕೊಂದವರಿಗೆ ಜೀವಾವಧಿ ಶಿಕ್ಷೆ

    ಒಮ್ಮೆ ಬಜೆಟ್‍ನಲ್ಲಿ ಘೋಷಣೆಯಾದರೆ ಮತ್ತು ಈ ವಿಷಯ ಪ್ರಸ್ತಾಪವಾಗುವುದಿಲ್ಲವೆಂಬ ಸಂಗತಿ ಸಮಿತಿಗೆ ಗೊತ್ತಿದೆ. ಆದರೆ ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಅಡಿಯಾದರೂ ಅನುದಾನ ಒದಗಿಸುವ ಭರವಸೆಯನ್ನು ಕೇಂದ್ರ ಬಜೆಟ್‍ನಲ್ಲಿ ನೀಡಬೇಕಾಗಿತ್ತು. ಅದು ಸಾಧ್ಯವಾಗದೇ ಹೋಗಿದೆ. ಪ್ರಧಾನ ಮಂತಿ ನರೇಂದ್ರ ಮೋದಿ ತಕ್ಷಣವೇ ಕಳೆದ ಬಜೆಟ್ ಘೋಷಣೆಯ 5300ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು.

    ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪೂರಕ ದಾಖಲೆಗಳ ಪೂರೈಕೆ ಮಾಡುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top