Connect with us

    ಸಾಣೇಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಒಡಿ ಸೌಲಭ್ಯ

    ಮುಖ್ಯ ಸುದ್ದಿ

    ಸಾಣೇಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಒಡಿ ಸೌಲಭ್ಯ

    https://chat.whatsapp.com/Jhg5KALiCFpDwME3sTUl7x

    CHITRADUGA NEWS | 01 FEBRUARY 2024

    ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಫೆಬ್ರವರಿ 2 ಮತ್ತು 3 ರಂದು ನಡೆಯಲಿರುವ ಚಿತ್ರದುರ್ಗ-ಚಿಕ್ಕಮಗಳೂರು ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಅನ್ಯಕಾರ್ಯ ನಿಮಿತ್ತ (ಒಒಡಿ) ಸೌಲಭ್ಯ ಕಲ್ಪಿಸಿದೆ.

    ಕನ್ನಡ ಸಾಹಿತ್ಯ ಪರಿಷತ್ ಇದೇ ಮೊದಲ ಬಾರಿಗೆ ಎರಡು ಜಿಲ್ಲೆಗಳನ್ನು ಸೇರಿಸಿ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಈ ಹೊಸ ಪ್ರಯೋಗ ಚಿತ್ರದುರ್ಗ-ಚಿಕ್ಕಮಗಳೂರು ಜಿಲ್ಲೆಗಳನ್ನು ಜಂಟಿಯಾಗಿಸಿ, ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: ಫೆಬ್ರವರಿ 2 ಮತ್ತು 3 ರಂದು ಸಾಣೇಹಳ್ಳಿಯಲ್ಲಿ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

    ರಾಜ್ಯದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪ್ರಯೋಗಕ್ಕೆ ಶಿಕ್ಷಕರು ಭಾಗವಹಿಸಲಿ ಎನ್ನುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲಾಡಳಿತ ಅನ್ಯಕಾರ್ಯ ನಿಮಿತ್ತ (ಒಒಡಿ) ಸೌಲಭ್ಯ ಕಲ್ಪಿಸಿದೆ.

    ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಈ ಸೌಲಭ್ಯವನ್ನು ಒದಗಿಸಿದೆ.

    ಈ ಸೌಲಭ್ಯವನ್ನು ಪಡೆಯುವ ಸಿಬ್ಬಂದಿಗಳು ಹಾಜರಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ಹಾಜರಾಗಿರುವುದನ್ನು ದೃಢೀಕರಿಸಬೇಕು ಎನ್ನುವ ನಿಬಂಧನೆಯೊಂದಿಗೆ ಸೌಲಭ್ಯವನ್ನು ನೀಡಲಾಗಿದೆ.

    ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ | ಇನ್ನು ಮುಂದೆ 2 ಹೆಕ್ಟೇರ್ ವರೆಗೂ ಸ್ಪ್ರಿಂಕ್ಲರ್ ಸೌಲಭ್ಯ

    ಸಮ್ಮೇಳನದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಪರಿಷತ್ತು ಹಾಜರಾತಿ ಪ್ರಮಾಣ ಪತ್ರ ನೀಡಲಿದೆ. ಪ್ರತಿನಿಧಿಯಾಗಿ ಭಾವಹಿಸುವ ಸಿಬ್ಬಂದಿ 300 ರೂಗಳ ಶುಲ್ಕವನ್ನು ಪಾವತಿಸಿ ಸಮ್ಮೇಳನ ಪ್ರತಿನಿಧಿಯಾಗಿ ಭಾಗವಹಿಸಬಹುದು.

    ಸಮ್ಮೇಳನದಲ್ಲಿ ಭಾಗವಹಿಸುವ ಆಸಕ್ತ ಸಾರ್ವಜನಿಕರು, ನೌಕರ ಸಿಬ್ಬಂದಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕೋಶಾಧ್ಯಕ್ಷರನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ 9880031083, 9449510078, 9449759219, 9448666878.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top