Connect with us

    ಕೋಟೆನಾಡಿನಲ್ಲಿ ಬರಗೇರಮ್ಮ, ಏಕನಾಥೇಶ್ವರಿ ಸಿಡಿ ಉತ್ಸವದ ವೈಭವ

    ಬರಗೇರಮ್ಮ, ಏಕನಾಥೇಶ್ವರಿ ಸಿಡಿ ಉತ್ಸವ

    ಮುಖ್ಯ ಸುದ್ದಿ

    ಕೋಟೆನಾಡಿನಲ್ಲಿ ಬರಗೇರಮ್ಮ, ಏಕನಾಥೇಶ್ವರಿ ಸಿಡಿ ಉತ್ಸವದ ವೈಭವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 MAY 2024

    ಚಿತ್ರದುರ್ಗ: ಕೋಟೆ ನಾಡಿನ ಗ್ರಾಮ ದೇವರುಗಳಾದ ಬರೆಗೇರಮ್ಮ, ಏಕನಾಥೇಶ್ವರಿ ಸಿಡಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

    ಇದನ್ನೂ ಓದಿ : ಈರುಳ್ಳಿ ಬೆಳೆಗಾರರ ಮೊಗದಲ್ಲಿ ಮಂದಹಾಸ | ರಪ್ತಿಗೆ ಕೇಂದ್ರ ಸರ್ಕಾರದ ಸಮ್ಮತಿ

    ಶುಕ್ರವಾರ ಏಕನಾಥೇಶ್ವರಿ ಹಾಗೂ ಬರಗೇರಮ್ಮ ಮೆರವಣಿಗೆ ವಿಜೃಂಭಣೆಯಿಂದ ಜರುಗಿದ್ದು, ಇಂದು ಅರಿಕೆಯನ್ನು ಹೊತ್ತ ಭಕ್ತಾದಿಗಳು ಸಿಡಿ ಉತ್ಸವವನ್ನು ಆಡುವುದರ ಮೂಲಕ ದೇವರಿಗೆ ತಮ್ಮ ಭಕ್ತಿಯನ್ನು ಸಮರ್ಪಸಿದ್ದರು.

    ದೇವರಿಗೆ ವಿವಿಧ ರೀತಿಯ ಬೇಡಿಕೆಯನ್ನು ಇರಿಸಿದ ಭಕ್ತ ಸಮೂಹ ಅದನ್ನು ಈಡೇರಿಸುವಂತೆ ದೇವರಲ್ಲಿ ಮನವಿ ಮಾಡಿದ್ದು ಅದು ಈಡೇರಿದ್ದರಿಂದ ಇಂದು ತಾಯಿಗೆ ನೀಡಿದ ಮಾತಿನಂತೆ ಒಂದು ವಾರಗಳ ಕಾಲ ಉಪವಾಸ ಇದ್ದು ಇಂದು ಮೈಗೆಲ್ಲ ಅರಿಶಿನವನ್ನು ಲೇಪಿಸಿಕೊಂಡು,

    ಇದನ್ನೂ ಓದಿ : ಚಿತ್ರದುರ್ಗದಲ್ಲಿ ತಂಪಾದ ಮಡಿಕೆ ನೀರಿನ ಅರವಟಿಗೆ ಆರಂಭ | ಎಲ್ಲಿ ಅಂತಿರಾ ಈ ಸುದ್ದಿ ಓದಿ…

    ತಲೆಗೆ ಧಿರಿಸಿಯನ್ನು ಧರಿಸಿ, ಕೈಯಲ್ಲಿ ಖಡ್ಗವನ್ನು ಹಿಡಿದು ಅದಕ್ಕೆ ತುದಿಯಲ್ಲಿ ನಿಂಬೆಹಣ್ಣು ಸಿಗಿಸಿ ದೇವರಿಗೆ ಪ್ರಿಯವಾದ ನಾದದೊಂದಿಗೆ ತಾಯಿ ಸನ್ನಿಧಾನಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸಿದರು.

    ನಂತರ ಸಮಿತಿಯಿಂದ ನಿರ್ಮಾಣ ಮಾಡಿದ್ದ ಕಂಬದಲ್ಲಿ ಕಟ್ಟಿ ಮೂರು ಸುತ್ತು ಸುತ್ತುವರಿದರೊಂದಿಗೆ ತಾಯಿಗೆ ತಮ್ಮ ಹರಕೆಯನ್ನೂ ಸಲ್ಲಿಸಿದರು.

    ಕೋವಿಡ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಸಿಡಿ ಆಡುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದು, ಆದರೆ ಈ ಬಾರಿ ಎಲ್ಲವೂ ಸುಗಮವಾಗಿರುವುದರಿಂದ ಸಿಡಿಯನ್ನು ಆಡಲು ಜಿಲ್ಲಾಡಳಿತ ಸಮಿತಿಗೆ ಅನುಮತಿಯನ್ನು ನೀಡಿದ್ದರ ಹಿನ್ನೆಲೆಯಲ್ಲಿ ಸಮಿತಿಯವರು ಸಿಡಿಯನ್ನು ಆಡೋದಕ್ಕೆ ತಯಾರಿಯನ್ನು ನಡೆಸಿ ತಾಯಿ ಹಾಗೂ ಭಕ್ತರ ಆಸೆಯನ್ನು ಈಡೇರಿಸಿದ್ದಾರೆ.

    ಇದನ್ನೂ ಓದಿ : ಮಠದ ಮುಂದಿನ ಕೆರೆಯ ದುರ್ವಾಸನೆಗೆ ಜನ ಹೈರಾಣ| ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು

    ಯಾವುದೇ ರೀತಿಯ ಅನಾಹುತವಾಗದಂತೆ ಎಚ್ಚರವನ್ನು ಸಮಿತಿ ವಹಿಸಿದ್ದು ಸಹ ನೀಡಲಾಗಿತ್ತು.

    ಈ ವೇಳೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ, ತಹಸಿಲ್ದಾರ್ ನಾಗವೇಣಿ, ಏಕನಾಥೇಶ್ವರಿ ಜೀರ್ಣೋದ್ವಾರ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಜ್ಜ, ಮಲ್ಲಿಕಾರ್ಜುನ್, ಸಿ.ಟಿ ಕೃಷ್ಣಮೂರ್ತಿ, ನಗರ ಸಭೆ ನಾಮ ನಿರ್ದೇಶಕ ಮಾಜಿ ಸದಸ್ಯ ಓಂಕಾರ್ ಸೇರಿದಂತೆ ಭಕ್ತಾದಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top