Connect with us

    ಕೇಂದ್ರದ ಜಾತಿ ಗಣತಿ ನಿರ್ಧಾರ ಸ್ವಾಗತಾರ್ಹ | ಎಚ್.ಆಂಜನೇಯ

    H. Anjaneya

    ಮುಖ್ಯ ಸುದ್ದಿ

    ಕೇಂದ್ರದ ಜಾತಿ ಗಣತಿ ನಿರ್ಧಾರ ಸ್ವಾಗತಾರ್ಹ | ಎಚ್.ಆಂಜನೇಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 MAY 2025

    ಚಿತ್ರದುರ್ಗ: ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿದ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿಯೇ ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

    Also Read: ನಕಲಿ ಕಾರ್ಮಿಕ ಕಾರ್ಡ್ ಪತ್ತೆ ಮಾಡಿ | ಶಾಸಕ ವೀರೇಂದ್ರ (ಪಪ್ಪಿ)

    ಸಿದ್ದರಾಮಯ್ಯ ಅವರು ಜಾತಿಗಣತಿಗೆ ಮುಂದಾದಾಗ ಕೆಲವರು ರಾಜಕೀಯ ಕಾರಣಕ್ಕೆ ಟೀಕೆ ಮಾಡಿದ್ದರು. ಆದರೆ, ನಾವುಗಳು ಅಂತಹ ಹಾದಿಯಲ್ಲಿ ಸಾಗುವುದಿಲ್ಲ. ಇಡೀ ದೇಶದಲ್ಲಿಯೇ ಜನಗಣತಿ ಜೊತೆಗೆ ಜಾತಿಗಣತಿ ಕಾರ್ಯ ಮಾಡಲು ಕೈಗೊಂಡಿರುವ ನರೇಂದ್ರ ಮೋದಿ ಅವರ ಕಾರ್ಯ ಸ್ವಾಗತಾರ್ಹ ಎಂದಿದ್ದಾರೆ.

    ಮುಖ್ಯವಾಗಿ ಎಲ್ಲ ಧರ್ಮ, ಜಾತಿಯವರ ಸಮಗ್ರ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಅನುಕೂಲವಾಗುವ ಕೈಪಿಡಿ ಸಿದ್ಧಪಡಿಸಿ ತುರ್ತಾಗಿ ಜಾತಿಗಣತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪರಿಶಿಷ್ಟ ಸಮುದಾಯದಲ್ಲಿ ಮೀಸಲಾತಿ ಬಳಕೆಯಲ್ಲಿ ಆಗಿರುವ ಅಸಮಾನತೆ ಹೊಗಲಾಡಿಸಲು ಒಳಮೀಸಲಾತಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ 30 ವರ್ಷಗಳ ಹೋರಾಟದ ಫಲ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

    Also Read: ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 

    ಒಳಮೀಸಲಾತಿ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯ ಎಲ್ಲರಿಗೂ ಅನುಕೂಲವಾಗಲಿದೆ. ಎಸ್ಸಿಯಲ್ಲಿಯೇ ಗುಂಪುಗಳನ್ನಾಗಿಸಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡುವುದರಿಂದ ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಲಿದೆ ಎಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿಗೆ ಹಾಗೂ ಯಾವ ಸಮುದಾಯಕ್ಕೂ ಅನ್ಯಾಯವಾದ ರೀತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ.

    Also Read: ನಾಳೆ SSLC RESULT | ನಿಮ್ಮ ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ..

    ಈ ನಡೆ ಎಸ್ಸಿಯಲ್ಲಿರುವ ಎಲ್ಲ ಜಾತಿ ಜನರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಮಾನದಂಡವಾಗಲಿದೆ ಎಂದು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top