Connect with us

    ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ

    ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ

    ಕ್ರೈಂ ಸುದ್ದಿ

    ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 FEBRUARY 2025

    ಚಿತ್ರದುರ್ಗ: ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಸಮಾಧಿಯಿಂದ ಹೊರತೆಗೆದು ತನಿಖೆ ಕೈಗೆತ್ತಿಕೊಂಡ ವಿಶೇಷ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ.

    ಮೊಳಕಾಲ್ಮೂರು ತಾಲೂಕು ಕಚೇರಿಯಲ್ಲಿ ಎಸ್‍ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಚ್.ಸುರೇಶ್(46) ಜಾಂಡೀಸ್ ಕಾಯಿಲೆಯಿಂದ ಮೃತಪಟ್ಟಿದ್ದಾರೆಂದು ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ | ನಿಯಮ ಮೀರಿದರೆ ಕ್ರಮದ ಎಚ್ಚರಿಕೆ

    ಆದರೆ, ಮೃತ ಸುರೇಶ್ ತಾಯಿ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಅವರ ಸಮ್ಮುಖದಲ್ಲಿ ಮೃತ ದೇಹವನ್ನು ಹೊರಗೆ ತೆಗೆಯಲಾಯಿತು.

    ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿಯಿರುವ ಹಿಂದು ರುದ್ರಭೂಮಿಯಲ್ಲಿ ಸುರೇಶ್ ಶವ ಹೂಳಲಾಗಿತ್ತು. ಮೃತ ಶರೀರದ ಕೆಲ ಭಾಗಗಳನ್ನು ತೆಗೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನೆ ಮಾಡಲಾಗಿದೆ.

    ಏನಿದು ಸಾವಿನ ಸುತ್ತ ಅನುಮಾನದ ಹುತ್ತ ?

    ಸರ್ಕಾರಿ ನೌಕರನಾಗಿದ್ದ ಎಚ್.ಸುರೇಶ್, 14 ವರ್ಷಗಳ ಹಿಂದೆ ನಾಗರತ್ನ ಎಂಬುವವರ ಜೊತೆ ಮದುವೆಯಾಗಿದ್ದರು. ಪತಿ ಪತ್ನಿ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು. ತಾಯಿಯ ಜೊತೆಗಿರಲು ಪತ್ನಿ ಬಿಡುತ್ತಿರಲಿಲ್ಲ ಎಂದು ಸ್ವತಃ ಸುರೇಶ್ ತಾಯಿ ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಮಹೋತ್ಸವ | ವಾಹನಗಳ ಪಾರ್ಕಿಂಗ್ ಮಾಡುವ ಜಾಗ ಇಲ್ಲಿವೆ ನೋಡಿ.. 

    ಸುರೇಶ್‍ಗೆ ಜಾಂಡೀಸ್ ಬಂದಿದೆ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ವೇಳೆಯೇ 2024 ಅಕ್ಟೋಬರ್ 8 ರಂದು ಸುರೇಶ್ ಮೃತಪಟ್ಟಿದ್ದರು.

    ಮೃತ ದೇಹವನ್ನು ತಾಯಿ ಮನೆಗೆ ತಂದ ಪತ್ನಿ ಹಾಗೂ ಸಂಬಂಧಿಕರು, ತಡಮಾಡದೆ ಅಂತ್ಯಕ್ರಿಯೆ ಮಾಡಬೇಕು ಎಂದು ಹೇಳಿದ್ದಾರೆ. ಮಗನ ಸಾವಿನ ದುಃಖದಲ್ಲಿದ್ದ ತಾಯಿಗೆ ಏನೊಂದು ತಿಳಿಯದೆ ಸಮ್ಮತಿಸಿದ್ದಾರೆ.

    ಆದರೆ, ಮೃತ ದೇಹದ ಪೋಟೋ ಯಾರೋ ತೆಗೆದಿಟ್ಟುಕೊಂಡಿದ್ದು, ಅದರಲ್ಲಿ ಕೈ ಕಾಲುಗಳ ಮೇಲೆ ರಕ್ತ ಹೆಪ್ಪುಗಟ್ಟಿದ ಕಲೆಗಳಿದ್ದು, ಹಲ್ಲೆ ನಡೆದಿರುವ ಸಂಶಯ ಬಂದಿತ್ತು.

    ಇದನ್ನೂ ಓದಿ: ಭರಮಸಾಗರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ | ಮುರುಡೇಶ್ವರದಿಂದ ಬಂದಿವೆ ಬೋಟ್

    ಸಮಾಧಿಯಲ್ಲೂ ವಾಮಾಚಾರ ಮಾಡಿರುವ ಚಿತ್ರಗಳು ಸಿಕ್ಕಿದ್ದವು. ಇದರಿಂದ ತಾಯಿ ಸುರೇಶ್ ತಾಯಿ ಸರೋಜಮ್ಮನಿಗೆ ಅನುಮಾನ ಬಲವಾಗಿದ್ದು, ಮಗನ ಸಾವಿನ ಕುರಿತು ತನಿಖೆ ನಡೆಸುವಂತೆ ಪೊಲೀಸರ ಬಳಿ ದೂರು ನೀಡಿದ್ದಾರೆ. ಈಗಾಗಲೇ ಅಂತ್ಯಕ್ರಿಯೆ ಆಗಿದ್ದರಿಂದ ಪೊಲೀಸರು ನಿರ್ಲಕ್ಷಿಸಿದ್ದಾರೆ.

    ಲೋಕಾಯುಕ್ತರ ಬಳಿ ದುಃಖ ತೋಡಿಕೊಂಡ ತಾಯಿ:

    ಕಳೆದ ವಾರವಷ್ಟೇ ಉಪಲೋಕಾಯುಕ್ತರಾದ ನ್ಯಾ.ಫಣೀಂದ್ರ ಅವರು ಜಿಲ್ಲೆಗೆ ಆಗಮಿಸಿ ಮೂರು ದಿನಗಳ ಕಾಲ ಇದ್ದು, ದೂರು ಆಲಿಸಿದ್ದರು. ಈ ವೇಳೆ ಸರೋಜಮ್ಮ ತಮ್ಮ ಮಗನ ಸಾವಿನ ತನಿಖೆ ನಡೆಸಲು ಮನವಿ ಮಾಡಿಕೊಂಡಿದ್ದಾರೆ.

    ನೀನು ಸತ್ತರೆ, ಸರ್ಕಾರಿ ಉದ್ಯೋಗ ಸಿಗಲಿದೆ ಎಂದು ಪತ್ನಿ ಹೇಳುತ್ತಿದ್ದಳು ಎಂದು ಮಗ ಹೇಳಿದ್ದನ್ನು ತಿಳಿಸಿ, ಇದು ಸಹಜ ಸಾವಲ್ಲ, ಕೊಲೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸೂಚಿಸಿದ್ದರು.

    ಇದನ್ನೂ ಓದಿ: ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ

    ಈ ಕಾರಣಕ್ಕೆ ಪೊಲೀಸರು ಮೃತ ದೇಹವನ್ನು ಮಂಗಳವಾರ ಸಮಾಧಿಯಿಂದ ಹೊರತೆಗೆದು ತನಿಖೆ ಕೈಗೊಂಡಿದ್ದು, ಸರ್ಕಾರಿ ನೌಕರಿಗಾಗಿ ಕೊಲೆ ನಡೆಯಿತಾ ಅಥವಾ ಸಹಜ ಸಾವೇ ಎನ್ನುವ ಸತ್ಯ ಹೊರಬರಬೇಕಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top