ಕ್ರೈಂ ಸುದ್ದಿ
ಭೀಕರ ಅಪಘಾತ | ಸ್ಥಳದಲ್ಲೇ ನಾಲ್ಕು ಜನ ಸಾವು | ಕಾರು ಟ್ರ್ಯಾಕ್ಟರ್ ನಡುವೆ ಡಿಕ್ಕಿ


CHITRADURGA NEWS | 16 MAY 2025
ಚಿತ್ರದುರ್ಗ: ಕಾರು ಹಾಗು ಟ್ರ್ಯಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಶಿವಗಂಗಾ ನಡುವೆ ಈ ಭೀಕರ ಅಪಘಾತ ನಡೆದಿದದೆ.
ಇದನ್ನೂ ಓದಿ:1001 ಆಶ್ರಯ ಮನೆ ನಿರ್ಮಾಣ | ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) | ತ್ವರಿತ ನಿರ್ಮಾಣಕ್ಕೆ ತಾಕೀತು
ಶಿವಗಂಗಾ ನಡುವೆ ಪೆಟ್ರೋಲ್ ಬಂಕ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬ್ರೀಜಾ ಕಾರು ಹಿಂಬದಿಯಿಂದ ಟ್ರಾಕ್ಟರ್ ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ಕು ಮೃತಪಟ್ಟಿದ್ದಾರೆ. ಮೃತರನ್ನು ಹೊಳಲ್ಕೆರೆ ತಾಲೂಕು ಅರೇಹಳ್ಳಿಯ ಕಾವ್ಯ (25) ಗಂಗಮ್ಮ (52) ಹನ್ಸಿಕಾ (3) ಹಾಗೂ ಮನಸ್ವಿನಿ(1)ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹೊಳಲ್ಕೆರೆ | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು
ಹೊಳಲ್ಕೆರೆಯ ಉದ್ಯಮಿ ತಿಪ್ಪೇಸ್ವಾಮಿ ಅವರ ಪತ್ನಿ ಗಂಗಮ್ಮ, ಪುತ್ರ ಯಶವಂತ ಅವರ ಪತ್ನಿ ಕಾವ್ಯ ಹಾಗೂ ಇಬ್ಬರೂ ಮೊಮ್ಮಕ್ಕಳು ಮೃತರಾಗಿದ್ದಾರೆ.
ಕಾರು ಚಲಾಯಿಸುತ್ತಿದ್ದ ಯಶವಂತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಭೀಕರ ಅಪಘಾತ | ಮೂರು ಜನ ಸ್ಥಳದಲ್ಲೇ ಸಾವು | ಡಿಕ್ಕಿ ರಭಸಕ್ಕೆ ನಜ್ಜುಗುಜ್ಜಾದ ಕಾರು
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

