ಕ್ರೈಂ ಸುದ್ದಿ
ಓಮಿನಿ-ಲಾರಿ ನಡುವೆ ಭೀಕರ ಅಪಘಾತ | ಚಿತ್ರದುರ್ಗ ಜಿಲ್ಲೆಯ ನಾಲ್ವರ ದುರ್ಮರಣ
CHITRADURGA NEWS | 24 MAY 2024
ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ಮತ್ತು ಕೊಟ್ಟಿಗೆಹಾರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಚಿತ್ರದುರ್ಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ.
ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಾಸಾಗುವಾಗ ಮೆಸ್ಕಾಂ ಲಾರಿ ಹಾಗೂ ಓಮಿನಿ ನಡುವೆ ಅಪಘಾತವಾಗಿದ್ದು, ಓಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: ಪೈ ಶೋ ರೂಂ ಬಳಿ ಕಾಣಿಸಿಕೊಂಡ ಪೈಥಾನ್ | ಮಾರುಕಟ್ಟೆಗೆ ಬಂದ 8 ಅಡಿ ಉದ್ದದ ಹೆಬ್ಬಾವು
ಮೃತರನ್ನು ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ 65 ವರ್ಷದ ಹಂಪಯ್ಯ, 58 ವರ್ಷದ ಪ್ರೇಮ, 60 ವರ್ಷದ ಮಂಜಯ್ಯ, 45 ವರ್ಷದ ಪ್ರಭಾಕರ್ ಎಂದು ಗುರುತಿಸಲಾಗಿದೆ.
ಇದೇ ಕುಟುಂಬಕ್ಕೆ ಸೇರಿದ ಆಲ್ಟೋ ಕಾರು ಓಮಿನಿಯ ಹಿಂದೆಯೇ ಬರುತ್ತಿದ್ದು, ಓಮಿನಿಗೆ ಆಲ್ಟೋ ಡಿಕ್ಕಿಯಾಗಿದೆ. ಇದೇ ಕುಟುಂಬದ ಒಟ್ಟು 17 ಮಂದಿ ಪ್ರವಾಸಕ್ಕೆ ಬಂದಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.