Connect with us

NEP ವಿರೋಧಿ ಸರ್ಕಾರಕ್ಕೆ ಶಿಕ್ಷಕರು ಪಾಠ ಕಲಿಸಿ | MLC ಕೆ.ಎಸ್.ನವೀನ್

ವೈ.ಎ.ನಾರಾಯಣಸ್ವಾಮಿ ಪರ ಮತಯಾಚನೆ

ಮುಖ್ಯ ಸುದ್ದಿ

NEP ವಿರೋಧಿ ಸರ್ಕಾರಕ್ಕೆ ಶಿಕ್ಷಕರು ಪಾಠ ಕಲಿಸಿ | MLC ಕೆ.ಎಸ್.ನವೀನ್

CHITRADURGA NEWS | 01 JUNE 2024

ಚಿತ್ರದುರ್ಗ: ಎನ್ಇಪಿ ವಿರೋಧಿ ರಾಜ್ಯ ಸರ್ಕಾರಕ್ಕೆ ಶಿಕ್ಷಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ಇದನ್ನೂ ಓದಿ: ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು | ಎಸ್‍ಜೆಎಂ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ

ಅಗ್ನೇಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರವಾಗಿ ನಗರದ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಸಂಪಿಗೆ ಹೈಸ್ಕೂಲ್, ಬರಗೇರಮ್ಮ ಶಾಲೆ, ಜ್ಞಾನಭಾರತಿ ಶಾಲೆ ಹಾಗೂ ಎಸ್ ಜೆ ಎಂ ಕಾಲೇಜುಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು,

ಕೇಂದ್ರ ಸರ್ಕಾರ ದೇಶದಲ್ಲಿ ಎನ್.ಇ.ಪಿ.ಯನ್ನು ಜಾರಿ ಮಾಡಲು ಹೊರಟಿದೆ, ಇದರಿಂದ ಈಗ ಅಲ್ಲದಿದ್ದರೂ ನಮ್ಮ ಮುಂದಿನ ಪೀಳೀಗೆಗೆ ಇದರ ಪ್ರಯೋಜನ ದೊರಕಲಿದೆ. ಅದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತಿದೆ, ಇದರ ಬದಲಿಗೆ ಎಸ್.ಇ.ಪಿ.ಯನ್ನು ಜಾರಿ ಮಾಡಲು ಮುಂದಾಗಿದ್ದು, ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಕಾನೂನುಗಳನ್ನು ಮಾಡಿ ಪರಿಷತ್‌ಗೆ ಕಳುಹಿಸುತ್ತಾರೆ ಎಂದರು.

ಇದನ್ನೂ ಓದಿ: ಒಂದೇ ವರ್ಷಕ್ಕೆ ಸರ್ಕಾರಿ ಖಜಾನೆ ಲೂಟಿ | ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪ

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿಯನ್ನು ತೋರದೆ ವಿವಿಧ ರೀತಿಯಾ ಆದೇಶಗಳನ್ನು ಜಾರಿ ಮಾಡುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆಯಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತವನ್ನು ಹಾಕುವಂತೆ ಮತದಾರರಿಗೆ ಮನವಿ ಮಾಡಿದರು.

ನಾರಾಯಣಸ್ವಾಮಿಯವರು ಕಳೆದ ಮೂರು ಬಾರಿ ಶಾಸಕರಾಗಿ ಉತ್ತಮವಾಗಿ ಕೆಲಸವನ್ನು ಮಾಡಿದ್ದಾರೆ, ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಮುಂದೆಯೂ ಸಹಾ ನಿಮ್ಮ ಸೇವೆ ಮಾಡಬೇಕಾದರೆ ನಾರಾಯಣಸ್ವಾಮಿಯವರನ್ನು ಬೆಂಬಲಿಸಿ ಚುನಾವಣೆಯಲ್ಲಿ ಅವರಿಗೆ ಮತವನ್ನು ಹಾಕಿ ಎಂದು ಹೇಳಿದರು.

ಇದನ್ನೂ ಓದಿ: ರೈತರೇ ಗಮನಿಸಿ | ಬೆಳೆವಿಮೆ ಯೋಜನೆಗೆ ಕಂತು ಕಟ್ಟುವ ಪ್ರಕ್ರಿಯೆ ಆರಂಭ | ಯಾವ ಬೆಳೆಗೆ ಎಷ್ಟು ಪರಿಹಾರ | ರೈತರ ಕಂತು ಎಷ್ಟು ?

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜ ರೆಡ್ಡಿ, ವಕ್ತಾರರಾದ ನಾಗರಾಜ್ ಬೇಂದ್ರೆ, ನವೀನ ಚಾಲುಕ್ಯ, ಮಂಜುಳಮ್ಮ, ಬಸಮ್ಮ, ನಗರಸಭಾ ಸದಸ್ಯರಾದ ಹರೀಶ್, ಮಾಧುರಿ ಗೀರಿಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version