Connect with us

ತಾಲೂಕು ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ | ಶಾಸಕ ಟಿ.ರಘುಮೂರ್ತಿ ಚಾಲನೆ

ಮುಖ್ಯ ಸುದ್ದಿ

ತಾಲೂಕು ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ | ಶಾಸಕ ಟಿ.ರಘುಮೂರ್ತಿ ಚಾಲನೆ

CHITRADURG NEWS | APRIL 01 2025

ಚಿತ್ರದುರ್ಗ: ತಾಲೂಕು ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಗೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು.

Also Read: ಹಿಂದೂಗಳ ಹೊಸ ವರ್ಷ ಯುಗಾದಿ | ಸಡಗರ ಸಂಭ್ರಮದ ಸಮ್ಮಿಲನ

ನಂತರ ಮಾತನಾಡಿದ ಅವರು, ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ. ಗ್ರಾಮೀಣ ಕ್ರೀಡೆಗಳು ಅಪರೂಪವಾಗಿವೆ. ಇಂತಹ ಸನ್ನಿವೇಶದಲ್ಲಿ ಯುಗಾದಿ ಹಬ್ಬದ ಸಂಭ್ರಮ ಇಮ್ಮಡಿಯಾಗುವಂತೆ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು ಚಳ್ಳಕೆರೆ ಶಾಸಕ ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.

ಎಲ್ಲ ರೈತಾಪಿ ಕೆಲಸಗಳನ್ನು ಮುಗಿಸಿದ ಈ ಸಂದರ್ಭದಲ್ಲಿ ರೈತರು ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸುವ ಮೂಲಕ ತಾವು ಮನರಂಜನೆ ಪಡೆಯುವ ಮೂಲಕ ಎತ್ತುಗಳಿಗೂ ಉಲ್ಲಾಸ ಉಂಟು ಮಾಡುತ್ತಾರೆ. ರೈತರ ಹೆಗಲಿಗೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಪೂಜಿಸುವುದು ರೈತ ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಬುಡಕಟ್ಟು ಸಂಸ್ಕೃತಿಗಳ ತವರು. ಬುಡಕಟ್ಟು ಸಮುದಾಯಗಳಿಗೆ ಸಂಬAಧಿಸಿದ ಅನೇಕ ಆಚರಣೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿವೆ. ಅದೇ ರೀತಿಯಲ್ಲಿ ರೈತರಿಗೆ ಎತ್ತು, ಗಾಡಿ ದೇವರಿದ್ದಂತೆ. ಅವುಗಳು ಮನೆಯಲ್ಲಿದ್ದರೆ ಲಕ್ಷ್ಮೀ ಇದ್ದಂತೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಎಲ್ಲ ರೈತರ ಮನೆಗಳಲ್ಲೂ ಎತ್ತು ಮತ್ತು ಗಾಡಿ ಇರುತ್ತವೆ. ಇದರಿಂದ ಕೃಷಿ ಸಾಕಷ್ಟು ಸುಲಭವಾಗುತ್ತದೆ ಎಂದರು.

Also Read: 2 ಅಂಗಡಿಗೆ ಆಕಸ್ಮಿಕ ಬೆಂಕಿ | ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ, ಒಟ್ಟಾಗಿ ಆಚರಣೆ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದು ಬಂದಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುತ್ತದೆ ಎಂದು ರೈತರನ್ನು ಶ್ಲಾಘಿಸಿದರು.

ಎತ್ತಿನಗಾಡಿ ಓಟದ ಸ್ಪರ್ಧೆ ಸುಲಭವಲ್ಲ. ಇದರಲ್ಲಿ ಭಾಗವಹಿಸಲು ಎದೆಗಾರಿಕೆ ಬೇಕು. ಎತ್ತಿನ ಗಾಡಿ ಓಡಿಸುವುದು ಸುಲಭವಲ್ಲ, ಇದೊಂದು ಸಾಹಸ. ಪರಿಣತಿ ಬೇಕಾಗುತ್ತದೆ. ತಮ್ಮದೇ ಎತ್ತುಗಳ ಬಂಡಿಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತೆರಳಿ ಅಲ್ಲಿ ಓಡಿ ಗೆಲುವು ಪಡೆಯುವ ಮೂಲಕ ಹತ್ತೂರುಗಳಲ್ಲಿ ಹೆಸರು ಪಡೆಯುತ್ತಿದ್ದ ಕಾಲವಿತ್ತು. ಇವತ್ತಿಗೂ ಬಹಳಷ್ಟು ರೈತರು ಬರೀ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಎತ್ತಿನಗಾಡಿ ಓಡಿಸಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ ಎಂದು ಸ್ಮರಿಸಿದರು.

ಗ್ರಾಮೀಣ ಭಾಗದಲ್ಲಿ ಹಿಂದೆ ನಡೆಯುತ್ತಿದ್ದ ಸಾಕಷ್ಟು ಬದಲಾವಣೆಗಳಾಗಿವೆ. ರೈತರು ಎತ್ತುಗಳನ್ನು ಕಟ್ಟುವುದು ಕಡಿಮೆಯಾಗಿದೆ. ಇದೆಲ್ಲದರ ನಡುವೆಯೂ 30 ಜೊತೆ ಎತ್ತು, ಗಾಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ ಎಂದು ಶಾಸಕರು ತಿಳಿಸಿದರು.

Also Read: ಯುಗಾದಿ ಅಮವಾಸ್ಯೆಯಂದೇ ಭೀಕರ ಅಪಘಾತ | ಮೂವರ ದುರ್ಮರಣ

ಕಾರ್ಯಕ್ರಮದಲ್ಲಿ ಕೂನಬೇವು ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕಷ ಜಿ.ಟಿ.ಬಾಬುರೆಡ್ಡಿ, ಗ್ರಾಪಂ ಸದಸ್ಯರಾದ ಕೆ.ನಿಂಗಮ್ಮ, ಎಸ್.ಪಾಲಯ್ಯ, ಕೆ.ಟಿ.ಯಶೋಧ, ಆರ್ಚನಾ, ಮುಖಂಡರಾದ ಗುರುಮೂರ್ತಿ, ಹೆಚ್.ಕಾಂತರಾಜ್ , ಮಾರುತಿ, ಮಹಂತೇಶ್, ಏಕಾಂತ ಇತರರಿದ್ದರು.

ತುಂಗಭದ್ರಾ ಹಿನ್ನೀರಿನಿಂದ ಚಳ್ಳಕೆರೆ, ಕೂಡ್ಲಿಗಿ, ಮೊಳಕಾಲ್ಮೂರು, ಪಾವಗಡ ಕ್ಷೇತ್ರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದೆ. ಈಗ ಟ್ರಯಲ್‌ರನ್ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ತುರುವನೂರು ಹೋಬಳಿಗೂ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಬರಲಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಇನ್ನೂ ಭದ್ರಾ ಮೇಲ್ದಂಡೆ ಯೋಜನೆಗೆ ತುರುವನೂರು ಹೋಬಳಿಯ 9 ಕೆರೆಗಳು ಸೇರಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 51 ಕೆರೆಗಳು ಭರ್ತಿಯಾಗಲಿವೆ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ, ಭದ್ರಾ ನೀರು ನೂರಕ್ಕೆ ನೂರರಷ್ಟು ಹರಿಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಯಿಂದ ಹುಣಸೇಕಟ್ಟೆ ಗ್ರಾಮಕ್ಕೆ 25 ಕ್ಕೂ ಹೆಚ್ಚು ಹಸುಗಳು ಕೊಡಿಸಿದ್ದೆ. ಎಲ್ಲಾ ಹಸುಗಳು ಕರು ಹಾಕಿದ್ದು ಉತ್ತಮವಾಗಿ ಹಾಲು ನೀಡುತ್ತಿವೆ ಎನ್ನುವ ವಿಚಾರ ಕೇಳಿ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆಗೂ ಹಂತ ಹಂತವಾಗಿ ಪ್ರೋತ್ಸಾಹ ನೀಡುತ್ತೇನೆ 
| ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕರು.

ಕಳೆದ ಐದು ವರ್ಷಗಳಿಂದ ಎತ್ತಿನಗಾಡಿ ಸ್ಪರ್ಧೆ ಆಯೋಜಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಗೆದ್ದವರಿಗೆ ಎತ್ತಿನ ಗಾಡಿಯನ್ನೇ ಮೊದಲ ಬಹುಮಾನವಾಗಿ ಕೊಡಲಾಗುತ್ತಿದೆ. ಈ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ.

ಪಿ.ವಿ.ಅರುಣ್‌ಕುಮಾರ್, ಅಹೋಬಲ ಟಿವಿಎಸ್ ಮಾಲಿಕರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version