ಮುಖ್ಯ ಸುದ್ದಿ
ನಾಯಕನಹಟ್ಟಿ ಬಂದ್‌ಗೆ ಸಂಘಟನೆಗಳ ಬೆಂಬಲ | ಭದ್ರೆಗಾಗಿ ಬಂದ್ ಆಗುತ್ತಿರುವ ಮೊದಲ ಹೋಬಳಿ
CHITRADURGA NEWS | 12 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಈಗಾಗಲೇ ಚಿತ್ರದುರ್ಗ, ಚಳ್ಳಕೆರೆ ಬಂದ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಫೆ.13 ರಂದು ನಾಯಕನಹಟ್ಟಿ ಬಂದ್ ನಡೆಯಲಿದೆ. ನಾಯಕನಹಟ್ಟಿ ಪಟ್ಟಣ ಬಂದ್‌ಗೆ ಮಾದಿಗ ಸೇವಾ ಟ್ರಸ್ಟ್ ಬೆಂಬಲ ಘೋಷಿಸಿದೆ.
ಪಟ್ಟಣದ ಹಟ್ಟಿಮಲ್ಲಪ್ಪ ನಾಯಕ ಆಡಳಿತ ಕಚೇರಿಯಲ್ಲಿ ನಡೆದ ಜನಾಂಗದ ಸಭೆಯಲ್ಲಿ ಅವರು ಮಾತನಾಡಿದ ನೀಡಲಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಆರ್.ಬಸಪ್ಪ, ನಾಯಕನಹಟ್ಟಿ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹಾಕುವ ಸಲುವಾಗಿ ಫೆ.13ರಂದು ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ನಾಯಕನಹಟ್ಟಿ ಪಟ್ಟಣ ಬಂದ್‌ಗೆ ಟ್ರಸ್ಟ್ ಬೆಂಬಲ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: 280 ಮೀಟರ್ ಡಿವೈಡರ್ ತೆರವು | ಮುನ್ನೆಲೆಗೆ ಬಂದ ರಸ್ತೆ ವಿಸ್ತರಣೆ ಚರ್ಚೆ
ಭದ್ರಾ ಮೇಲ್ದಂಡೆ ಯೋಜನೆ ಬಯಲು ಸೀಮೆಯ ಬಹುದಿನಗಳ ಬೇಡಿಕೆಯಾಗಿದೆ. ನಾಯಕನಹಟ್ಟಿ ಹೋಬಳಿಯಲ್ಲಿ ಮಾದಿಗ ಜನಾಂಗಕ್ಕೆ ಅತ್ಯಂತ ಕಡಿಮೆ ಭೂಮಿಯಿದ್ದು, ಇರುವ ತುಂಡು ಭೂಮಿಯಲ್ಲಿ ಹಲವು ವರ್ಷಗಳಿಂದ ನೀರಾವರಿ ಸೌಲಭ್ಯ ಪಡೆದು ಬೆಳೆಬೆಳೆಯಲು ಉತ್ಸುಕರಾಗಿದ್ದಾರೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿದಲ್ಲಿ ಮಹಾನಗರಗಳತ್ತ ಜನಾಂಗದ ಯುವಕ-ಯುವತಿಯರು ಕೆಲಸ ಅರಸಿ ಗುಳೆ ಹೋಗುವುದು ತಪ್ಪುತ್ತದೆ ಎಂದರು.
ಟ್ರಸ್ಟ್ ಪದಾಧಿಕಾರಿಗಳಾದ ಡಿ.ಓಬಳೇಶ್, ಬಿ.ತಿಪ್ಪೇಸ್ವಾಮಿ, ಶಂಕರಸ್ವಾಮಿ, ರಾಜಣ್ಣ, ಆರ್.ತಿಪ್ಪೇಸ್ವಾಮಿ, ಬಿ.ರಾಮಚಂದ್ರಪ್ಪ, ಮಧು ಇದ್ದರು.