ಹೊಸದುರ್ಗ
KSRTC ಬಸ್ ನಿಲ್ದಾಣದಲ್ಲಿ ಹಠಾತ್ತನೇ ಬೆಂಕಿ
ಚಿತ್ರದುರ್ಗ ನ್ಯೂಸ್.ಕಾಂ: ಜಿಲ್ಲೆಯ ಹೊಸದುರ್ಗ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇಲ್ಲಿನ ಬಸ್ ನಿಲ್ದಾಣದ ಎಡ ಬದಿಯಲ್ಲಿ ವಿದ್ಯುತ್ ಸಂಪರ್ಕಗಳ ನಿರ್ವಹಣಾ ಸ್ಥಳವಿದ್ದು, ಮೀಟರ್ ಬೋರ್ಡ್‍ಗಳು ಕೂಡಾ ಇವೆ. ಇದೇ ಸ್ಥಳದಲ್ಲಿ ಹಠಾತ್ತನೇ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿಯಿತು.
ಇದನ್ನೂ ಓದಿ: ಬನ್ನಿ ಒಮ್ಮೆ ಶೌಚಾಲಯ ನೋಡಿ ಬರೋಣ
ಬೆಳಗ್ಗೆ 6.30ರ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಗಾಬರಿಯಾಗಿದ್ದರು.
ತಕ್ಷಣ ಎಚ್ಚೆತ್ತ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದರು. ಅದೇ ಕ್ಷಣದಲ್ಲಿ ಬಸ್ ನಿಲ್ದಾಣ ಮಾರ್ಗದ ವಿದ್ಯುತ್ ಕಡಿತಗೊಳಿಸಿದ್ದರಿಂದ ಇನ್ನಿತರೆ ವಿದ್ಯುತ್ ಅವಘಡಗಳು ತಪ್ಪಿದವು. ಸ್ಥಳದಲ್ಲಿದ್ದವರು ಬೆಂಕಿ ನಂದಿಸಿದರು.