ಮುಖ್ಯ ಸುದ್ದಿ
selected National level : ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
CHITRADURGA NEWS | 27 NOVEMBER 2024
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ 9ನೇ ತರಗತಿಯ ಟಿ.ಜಾಗೃತ್ ಹಾಗೂ ಎಸ್.ಹರ್ಷವರ್ಧನ್ ವಿದ್ಯಾರ್ಥಿಗಳು ಆಶಾ.ಸಿ.ಹೆಚ್.ಎಂ ಇವರ ಮಾರ್ಗದರ್ಶನದಲ್ಲಿ 2024-25 ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಮೊದಲ ಹತ್ತು ಮಾದರಿಗಳಲ್ಲಿ ಸ್ಥಾನ ಪಡೆದು ರಾಷ್ಟ್ರಮಟ್ಟ(selected National level )ಕ್ಕೆ ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರದ ಒಳಹರಿವು ಮತ್ತಷ್ಟು ಹೆಚ್ಚಳ | ಭರ್ತಿಗೆ 1.40 ಅಡಿ ಬಾಕಿ
ಸಾರ್ವಜನಿಕ ಶಿಕ್ಷಣ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮಂಗಳೂರು ಹಾಗೂ ಶಕ್ತಿ ರೆಸಿಡೆನ್ಷಿಯಲ್ ಶಾಲೆ ಸಂಯುಕ್ತಾಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಿದ್ದರು.
ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಟಿ.ಜಾಗೃತ್ ಹಾಗೂ ಎಸ್.ಹರ್ಷವರ್ಧನ್ ಬಹುಪಯೋಗಿ ಮತ್ತು ಆಧುನಿಕ ಎತ್ತಿನ ಗಾಡಿ ತಯಾರಿಸಿದ್ದರು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಅಭಿನಂದನೆ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ನೇರ ನೇಮಕಾತಿ ಸಂದರ್ಶನ ನವೆಂಬರ್ 30ಕ್ಕೆ
ಇನ್ನು ವಿದ್ಯಾ ವಿಕಾಸ ಶಾಲೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಸಿಬ್ಬಂದಿಗಳು ಅಭಿನಂದನೆ ತಿಳಿಸಿದ್ದಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯು ಪುದುಚೇರಿಯಲ್ಲಿ 2025 ಜನವರಿ 20 ರಿಂದ 25ರವರೆಗೆ ನಡೆಯಲಿದೆ.