ಮುಖ್ಯ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ | ಚಿಕ್ಕಜಾಜೂರು ರೈಲ್ವೆ ಜಂಕ್ಷನ್‌ನಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ | ನೈರುತ್ಯ ರೈಲ್ವೆ ಆದಾಯ ಹೆಚ್ಚಳ

CHITRADURGA NEWS | 06 MARCH 2024
ಚಿತ್ರದುರ್ಗ: ಚಿಕ್ಕಜಾಜೂರು ರೈಲ್ವೆ ಜಂಕ್ಷನ್‌ನಲ್ಲಿ ಇಂದಿನಿಂದ ವಿವಿಧ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಆಗಲಿವೆ. ಪ್ರಾಯೋಗಿಕ ಆಧಾರದ ಮೇಲೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಒದಗಿಸಲಾಗಿದೆ.
ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ನಿಲುಗಡೆಗೆ ರೈಲ್ವೇ ಇಲಾಖೆ ಬಳಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಜಾಜೂರು ರೈಲು ನಿಲ್ದಾಣದಲ್ಲಿ ಎಂಟು ರೈಲುಗಳ ನಿಲುಗಡೆ ಭಾಗ್ಯ ಒದಗಿ ಬಂದಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/collection-of-%e2%82%b9-38-lakh-in-four-months/
- ಮಾ.5ರಿಂದ–ರೈಲು ಸಂಖ್ಯೆ 11006 ಪುದುಚೇರಿ-ದಾದರ್ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 10:39/10:40ಕ್ಕೆ ಆಗಮಿಸಿ/ನಿರ್ಗಮಿಸಲಿದೆ
- ಮಾ.8ರಿಂದ–ರೈಲು ಸಂಖ್ಯೆ 11005 ದಾದರ್-ಪುದುಚೇರಿ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ : ಸಂಜೆ 04:04/04:05
- ಮಾ.7ರಿಂದ–ರೈಲು ಸಂಖ್ಯೆ 11022 ತಿರುನೆಲ್ವೇಲಿ-ದಾದರ್ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ : ಬೆಳಿಗ್ಗೆ 10:39/10:40
- ಮಾ.5ರಿಂದ–ರೈಲು ಸಂಖ್ಯೆ 11021 ದಾದರ್-ತಿರುನೆಲ್ವೇಲಿ ಟ್ರೈ ವೀಕ್ಲಿ ಎಕ್ಸ್ ಎಕ್ಸ್‌ಪ್ರೆಸ್ : ಸಂಜೆ 04:04/04:05
- ಮಾ.10ರಿಂದ–ರೈಲು ಸಂಖ್ಯೆ 11036 ಮೈಸೂರು-ದಾದರ್ ಶರಾವತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ : ಬೆಳಿಗ್ಗೆ 10:39/10:40
- ಮಾ.7ರಿಂದ–ರೈಲು ಸಂಖ್ಯೆ 11035 ದಾದರ್-ಮೈಸೂರು ಶರಾವತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ : ಸಂಜೆ 04:04/04:05
- ಮಾ.6ರಿಂದ ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋಡಗಾಮಾ ಡೈಲಿ ಎಕ್ಸ್‌ಪ್ರೆಸ್ : ಸಂಜೆ 06:33/06:34
- ಮಾ.6ರಿಂದ ರೈಲು ಸಂಖ್ಯೆ 17310 ವಾಸ್ಕೋಡ ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ : ಬೆಳಿಗ್ಗೆ 08:02/08:03
ಕ್ಲಿಕ್ ಮಾಡಿ ಓದಿ: https://chitradurganews.com/grant-release-for-railway-direct-route/
ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಮಾರ್ಚ್ 6ರಂದು ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸಿಸ್ಟೆಂಟ್ ಡಿವಿಷನಲ್ ರೈಲ್ವೆ ಮ್ಯಾನೇಜರ್ ವಿನಾಯಕ್ ಆರ್. ನಾಯಕ್, ಅಸಿಸ್ಟೆಂಟ್ ಕಮರ್ಷಿಯಲ್ ಮ್ಯಾನೇಜರ್ ಉಮೇಶ್ ನಾಯಕ್ ಮೊದಲಾದ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ನೈರುತ್ಯ ರೈಲ್ವೆ ಆದಾಯ ಶೇ 11ರಷ್ಟು ಹೆಚ್ಚಳ: ನೈರುತ್ಯ ರೈಲ್ವೆ ಆದಾಯವು ಕಳೆದ 10 ತಿಂಗಳಲ್ಲಿ ಶೇ 11.09ರಷ್ಟು ಹೆಚ್ಚಳವಾಗಿದೆ. ಇದು ದಾಖಲೆಯ ಬೆಳವಣಿಗೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/muktinath-meditated-in-the-lap-of-jogimatti/
2023ರ ಏಪ್ರಿಲ್‌ನಿಂದ 2024ರ ಫೆಬ್ರುವರಿ ಅಂತ್ಯದವರೆಗೆ ₹ 6,970.18 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಆದಾಯ ಕ್ಕಿಂತ ₹ 696.02 ಕೋಟಿ ಅಧಿಕ ವಾಗಿದೆ. ಈ ಬಾರಿ 11 ತಿಂಗಳಲ್ಲಿ ಪ್ರಯಾಣಿಕರಿಂದ ₹2,837.87 ಕೋಟಿ ಆದಾಯ ಬಂದಿದ್ದು, ಹಿಂದಿನ ಬಾರಿಗಿಂತ ₹ 323.43 ಕೋಟಿ (ಶೇ 12.86) ಹೆಚ್ಚಾಗಿದೆ.
ಸರಕು ಸಾಗಣೆಯಲ್ಲಿ ಆದಾಯ ₹ 4,590.52 ಕೋಟಿ ತಲುಪಿದೆ. ಕಳೆದ ಬಾರಿಗಿಂತ ₹ 422.64 ಕೋಟಿ (ಶೇ 10.13) ಹೆಚ್ಚಳವಾಗಿದೆ. ಬಂಡವಾಳ ವೆಚ್ಚ (ಕ್ಯಾಪೆಕ್ಸ್) ₹ 6,462.40 ಕೋಟಿ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ₹ 2,386.75 ಕೋಟಿ (ಶೇ 58.56)ಯಷ್ಟಾಗಿದ್ದು, ಗಮನಾರ್ಹ ಹೆಚ್ಚಳ ಕಂಡಿದೆ ಎಂದು ಅರವಿಂದ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.
